Categories: ದೆಹಲಿ

ದೇಶದ ಅತಿದೊಡ್ಡ ಆದಾಯ ತೆರಿಗೆ ಇಲಾಖೆ ದಾಳಿ: ಮುಗಿಯುತ್ತಿಲ್ಲ ಹಣ ಎಣಿಕೆ ಕಾರ್ಯ

ನವದೆಹಲಿ: ದೇಶದ ಅತಿದೊಡ್ಡ ಐಟಿ ದಾಳಿ ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ನಡೆದಿದೆ. ಕಳೆದ ಎರಡು ದಿನಗಳಿಂದ ಆದಾಯ ತೆರಿಗೆ ಇಲಾಖೆಯು ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ ಕಚೇರಿ ಮತ್ತು ಕಂಪನಿಗೆ ಸಂಪರ್ಕ ಹೊಂದಿದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿದೆ.

ಆದಾಯ ತೆರಿಗೆ ಇಲಾಖೆಯು ಕಳೆದ ಎರಡು ದಿನಗಳಿಂದ 3 ರಾಜ್ಯಗಳಲ್ಲಿ ನಡೆಸಿದ ದಾಳಿಯಲ್ಲಿ ಈವರೆಗೆ ಕನಿಷ್ಠ 290 ಕೋಟಿ ರೂ.ಗಳಷ್ಟು ನಗದು ಹಣವನ್ನು ಜಪ್ತಿಮಾಡಿದೆ. ಜಪ್ತಿ ಮಾಡಲಾದ ಹಣದ ಪ್ರಮಾಣ 290 ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ನೂ ಮೂರು ಸ್ಥಳಗಳಲ್ಲಿ 7 ಕೊಠಡಿಗಳಲ್ಲಿರುವ 9 ಲಾಕರ್‌ಗಳನ್ನು ಪರಿಶೀಲಿಸಬೇಕಾಗಿದೆ. ಗುರುವಾರ (ಡಿ.7) ಆದಾಯ ತೆರಿಗೆ ಇಲಾಖೆ ಕಂಪನಿಗೆ ಸಂಪರ್ಕ ಹೊಂದಿದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿ 200 ಕೋಟಿ ರೂ.ಗಳಷ್ಟು ಹಣವನ್ನು ಜಪ್ತಿ ಮಾಡಲಾಗಿತ್ತು. ಭಾರೀ ಪ್ರಮಾಣದಲ್ಲಿ ನೋಟುಗಳ ಸಂಖ್ಯೆ ಇದ್ದ ಕಾರಣ ನೋಟು ಎಣಿಸುವ ಯಂತ್ರಗಳು ಕೆಲಸ ಮಾಡುವುದನ್ನೇ ನಿಲ್ಲಿಸಿದ್ದವು.

Ramya Bolantoor

Recent Posts

ಆರ್‌ಸಿಬಿ vs ಸಿಎಸ್ಕೆ: ಚಾಲೆಂಜ್ ಹಾಕಿ ಖಾಕಿ ಅತಿಥಿಯಾದ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್

ಶನಿವಾರ ನಡೆದ ಹೈವೋಲ್ಟೇಜ್ ಆರ್‌ಸಿಬಿ ವರ್ಸಸ್ ಸಿಎಸ್‌ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ಮಾಡುವುದಾಗಿ ವಿಡಿಯೋ ಪೋಸ್ಟ್…

12 mins ago

ಶೂ ವ್ಯಾಪಾರಿ ಮನೆಯಿಂದ 40 ಕೋಟಿ ರೂ. ನಗದು ವಶಕ್ಕೆ

ತೆರಿಗೆ ವಂಚನೆ ಮತ್ತು ಅಕ್ರಮ ಆಸ್ತಿ ಹೊಂದಿದ್ದ ಆರೋಪದ ಮೇಲೆ ಐಟಿ ಅಧಿಕಾರಿಗಳು ಆಗ್ರಾದಲ್ಲಿ ಶೂ ವ್ಯಾಪಾರಿ ರಾಮನಾಥ್‌ ಡಂಗ್‌…

15 mins ago

ಐಪಿಎಲ್‌ ಬೆಟ್ಟಿಂಗ್‌: ಲಕ್ಷ ಲಕ್ಷ ಹಣ ಕಳೆದುಕೊಂಡು ನೇಣಿಗೆ ಶರಣು

ಐಪಿಎಲ್‌ ಬೆಟ್ಟಿಂಗ್‌ನಲ್ಲಿ ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕನೊಬ್ಬ ಲಾಡ್ಜ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ…

39 mins ago

ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್‌ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

ಉಡುಪಿಯ ಪ್ರತಿಷ್ಠಿತ ಜವಳಿ ಮಳಿಗೆ ‘ಗೀತಾಂಜಲಿ ಸಿಲ್ಕ್’ ಮತ್ತು ಶಾಂತಿಸಾಗರ್ ಹೊಟೇಲ್‌ನ ಸಂಸ್ಥಾಪಕರಾದ ನೀರೆ ಬೈಲೂರು ಗೋವಿಂದ ನಾಯಕ್ (89)…

51 mins ago

ಸ್ಥಳೀಯ ವಾಹನಗಳಿಗೆ ಟೋಲ್ ಕಡಿತ: ಸ್ಥಳೀಯರಿಂದ ಸಾಸ್ತಾನ ಟೋಲ್ ಗೇಟ್ ಗೆ ಮುತ್ತಿಗೆ

ಕಳೆದ ಹಲವು ದಿನಗಳಿಂದ ಸ್ಥಳೀಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ನಲ್ಲಿ ಶುಲ್ಕ ಕಡಿತವಾಗುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಸಾಸ್ತಾನ ಟೋಲ್ ಗೇಟ್…

1 hour ago

ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ : ತುರ್ತು ಭೂ ಸ್ಪರ್ಶ

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಏರ್ ಇಂಡಿಯಾ ವಿಮಾನವು…

1 hour ago