News Karnataka Kannada
Thursday, April 18 2024
Cricket
ದೆಹಲಿ

ಭಾರತ ನೈಬರ್‌ಹುಡ್ ಫಸ್ಟ್ ಪಾಲಿಸಿ ಅಳವಡಿಸಿಕೊಂಡಿದೆ ಎಂದ ಮೋದಿ

India has adopted 'Neighbourhood First' policy, says PM Modi
Photo Credit : News Kannada

ನವದೆಹಲಿ: ದೆಹಲಿಗೆ ಭೇಟಿ ನೀಡಿರುವ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದರು.
ಎರಡು ನೆರೆಯ ರಾಷ್ಟ್ರಗಳು ಪರಸ್ಪರ ಭದ್ರತಾ ಹಿತಾಸಕ್ತಿ ಮತ್ತು ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು ಒಟ್ಟಾಗಿ ಕೆಲಸ ಮಾಡುವುದು ಮುಖ್ಯ ಎಂದು ನರೇಂದ್ರ ಮೋದಿ ಪ್ರತಿಪಾದಿಸಿದರು.
ಇದಕ್ಕೂ ಮೊದಲು ಹೈದರಾಬಾದ್ ಹೌಸ್‌ನಲ್ಲಿ ಶ್ರೀಲಂಕಾ ಅಧ್ಯಕ್ಷರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಸ್ವಾಗತ ಕೋರಿದರು. ಭೇಟಿ ಕುರಿತು ಉಭಯ ನಾಯಕರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು,
“ನಾವು ಆರ್ಥಿಕ ಮತ್ತು ತಾಂತ್ರಿಕ ಸಹಕಾರದ ಕುರಿತು ಮಾತುಕತೆಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಎರಡು ದೇಶಗಳ ನಡುವೆ ವಾಯು ಸಂಪರ್ಕವನ್ನು ಹೆಚ್ಚಿಸಲು ಸಹ ಒಪ್ಪಿಕೊಂಡಿದ್ದೇವೆ.”
ಶ್ರೀಲಂಕಾ ಸರ್ಕಾರ ತಮಿಳರ ಆಕಾಂಕ್ಷೆಗಳನ್ನು ಈಡೇರಿಸುತ್ತದೆ. ಸಮಾನತೆ, ನ್ಯಾಯವನ್ನು ಒದಗಿಸುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು. ಅಲ್ಲದೆ ಶ್ರೀಲಂಕಾ ಕಳೆದ ವರ್ಷ ಎದುರಿಸಿದ ಆರ್ಥಿಕ ದುಸ್ಥಿತಿಯನ್ನು ಉಲ್ಲೇಖಿಸಿ ಸುಖ, ಕಷ್ಟದ ಎರಡೂ ಸಂದರ್ಭದಲ್ಲಿ ದ್ವೀಪ ರಾಷ್ಟ್ರದ ಆಪ್ತಸ್ನೇಹಿತನಾಗಿ ಭಾರತ ವರ್ತಿಸುತ್ತದೆ ಎಂದರು. ಭಾರತದ ನೈಬರ್‌ಹುಡ್ ಫಸ್ಟ್ ಪಾಲಿಸಿಯನ್ನು ಸರ್ಕಾರ ಹೊಂದಿದ್ದು, ಸಾಗರ ನೀತಿಗಳಲ್ಲಿ ಶ್ರೀಲಂಕಾ ಪ್ರಮುಖ ಸ್ಥಾನವನ್ನು ಹೊಂದಿದೆ ಎಂದು ಮೋದಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು