Categories: ದೆಹಲಿ

ಭಾರತ ವಿಶ್ವಕಪ್ ಗೆದ್ದರೆ 100 ಕೋಟಿ ರೂ. ವಿತರಿಸುವೆ: ಪುನೀತ್ ಗುಪ್ತಾ

ಹೊಸದಿಲ್ಲಿ: ವಿಶ್ವಕಪ್  ಕ್ರಿಕೆಟ್ ನ ಅಂತಿಮ ಪಂದ್ಯಕ್ಕೆ ಕ್ರೀಡಾ ಅಭಿಮಾನಿಗಳು ಕಾಯುತ್ತಿದ್ದಾರೆ. ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿರುವ ಭಾರತ ತಂಡ ಮತ್ತು ಐದು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಎಲ್ಲರ ಚಿತ್ತ ಅದರತ್ತ ನೆಟ್ಟಿದೆ.

ಭಾರತವು ವಿಶ್ವಕಪ್ ಗೆದ್ದರೆ ಆಸ್ಟೋಟಾಕ್‌ನ ಸಿಇಒ ಪುನೀತ್ ಗುಪ್ತಾ ಅವರು  ಆಸ್ಕೋಟಾಕ್ ಬಳಕೆದಾರರಿಗೆ 100 ಕೋಟಿ ರೂ. ಗಳನ್ನು ವಿತರಿಸುವುದಾಗಿ ಭರವಸೆ ನೀಡಿದ್ದಾರೆ.

ಲಿಂಕ್ ಡಿನ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪುನೀತ್ ಗುಪ್ತಾ ಅವರು, “2011 ರಲ್ಲಿ ಭಾರತ ಕೊನೆಯ ಬಾರಿಗೆ ವಿಶ್ವಕಪ್ ಗೆದ್ದಿದೆ, ನಾನು ಕಾಲೇಜಿನಲ್ಲಿ ಓದುತ್ತಿದ್ದೆ. ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನಗಳಲ್ಲಿ ಒಂದು” ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

“ಕಳೆದ ಬಾರಿ ನನ್ನ ಸಂತೋಷವನ್ನು ಹಂಚಿಕೊಳ್ಳಲು ನಾನು ಕೆಲವು ಸ್ನೇಹಿತರನ್ನು ಹೊಂದಿದ್ದೆ. ಆದರೆ ಈ ಬಾರಿ ನಾವು ಸ್ನೇಹಿತರಂತೆ ಆಸ್ಕೋಟಾಕ್ ಬಳಕೆದಾರರನ್ನು ಹೊಂದಿದ್ದೇವೆ. ಆದ್ದರಿಂದ ಅವರೊಂದಿಗೆ ನನ್ನ ಸಂತೋಷವನ್ನು ಹಂಚಿಕೊಳ್ಳಲು ನಾನು ಏನನ್ನಾದರೂ ಮಾಡಬೇಕು, ಆದ್ದರಿಂದ, ಇಂದು ಬೆಳಿಗ್ಗೆ ನಾನು ನನ್ನ ಹಣಕಾಸು ತಂಡದೊಂದಿಗೆ ಮಾತನಾಡಿದ್ದೇನೆ. ಭಾರತವು ವಿಶ್ವಕಪ್ ಗೆದ್ದರೆ ನಮ್ಮ ಬಳಕೆದಾರರಿಗೆ ಅವರ ವಾಲೆಟ್ ಗಳಲ್ಲಿ 100 ಕೋಟಿ ರೂ ವಿತರಿಸುವುದಾಗಿ ವಾಗ್ದಾನ ಮಾಡಿದ್ದೇನೆ” ಎಂದು ಹೇಳಿದರು.

Ashika S

Recent Posts

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಘರ್ಷಣೆ

ವಿದ್ಯುತ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್ ನ ಹಲವು ಪ್ರದೇಶಗಳಲ್ಲಿ…

16 seconds ago

ಕ್ರಿಕೆಟ್ ಪಂದ್ಯದ ವೇಳೆ 21 ವರ್ಷದ ಯುವಕನನ್ನು ಥಳಿಸಿ ಹತ್ಯೆ

ವಾಯುವ್ಯ ದೆಹಲಿಯ ಭಾರತ್ ನಗರ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ತನ್ನ ಸಹೋದರ ಮತ್ತು ಇತರ ಆಟಗಾರರ ನಡುವಿನ ಜಗಳದಲ್ಲಿ…

2 mins ago

ಬೀದರ್‌ನಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ

ಬೀದರ್‌ನ ಬಸವಕಲ್ಯಾಣದಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ ನಡೆದಿದೆ. ಬಸವಕಲ್ಯಾಣದ ಹೊರವಲಯದ ಪಾರ್ಕ್‌ನಲ್ಲಿ ಹಿಂದೂ ಧರ್ಮೀಯ ವ್ಯಕ್ತಿ ಜೊತೆ ಕುಳಿತಿದ್ದಕ್ಕೆ ಮುಸ್ಲಿಂ…

17 mins ago

ಕೈ ತಪ್ಪಿದ ವಿಧಾನಪರಿಷತ್ ಟಿಕೆಟ್: ಮಾಜಿ ಶಾಸಕ ರಘುಪತಿ ಭಟ್ ಅಸಮಾಧಾ‌ನ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ…

33 mins ago

ಇಂದು ದಾದಿಯರ ದಿನ; ದಣಿವರಿಯಿಲ್ಲದೆ ಕೆಲಸ ಮಾಡುವ ದಾದಿಯರಿಗೊಂದು ಸಲಾಂ

ಪ್ರಪಂಚದಾದ್ಯಂತ ಮೇ 12ರಂದು ಅಂತರಾಷ್ಟ್ರೀಯ ದಾದಿಯರ ದಿನ ವನ್ನಾಗಿ ಆಚರಿಸಲಾಗುತ್ತದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಗೌರವಾರ್ಥವಾಗಿ ವಿಶ್ವಾದ್ಯಂತ ಅಂತರರಾಷ್ಟ್ರೀಯ…

44 mins ago

ಜೈಲಿನಲ್ಲೇ ಹೃದಯಾಘಾತವಾಗಿ ಕೈದಿ ಮೃತ್ಯು

ವಿಚಾರಣಾಧೀನ ಕೈದಿಯೋರ್ವ ಜೈಲಿನಲ್ಲೇ ಹೃದಯಾಘಾತ ಸಂಭವಿಸಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹಿರಿಯಡಕ ಸಬ್ ಜೈಲಿನಲ್ಲಿ ನಡೆದಿದೆ.

49 mins ago