Categories: ದೆಹಲಿ

ಅಗ್ನಿವೀರರರಿಗೆ ಸಿಎಪಿಎಫ್‌, ಅಸ್ಸಾಂ ರೈಫಲ್‌ಗಳಲ್ಲಿ ಮೀಸಲಾತಿ ಘೋಷಿಸಿದ ಗೃಹಸಚಿವಾಲಯ!

ದೆಹಲಿ: ಕೇಂದ್ರದ ಅಗ್ನಿಪಥ ಯೋಜನೆಯ ಕುರಿತು ದೇಶದ ಹಲವೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕೆಲವೆಡೆ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಕೆಲವು ಪ್ರಯಾಣಿಕರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ದೇಶದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

ಇವೆಲ್ಲದರ ನಡುವೆ ಕೇಂದ್ರ ಗೃಹ ಸಚಿವಾಲಯ ಹೊಸ ಘೋಷಣೆಯೊಂದನ್ನು ಮಾಡಿದ್ದು ಕೇಂದ್ರ ಸಶಸ್ತ್ರ ಪೋಲೀಸ್‌ ಪಡೆ (CAPF) ಹಾಗೂ ಅಸ್ಸಾಂ ರೈಫಲ್ಸ್‌ (AR) ಗಳಲ್ಲಿ 10% ಮೀಸಲಾತಿ ನೀಡಲಾಗುತ್ತದೆ ಎಂದು ಹೇಳಿದೆ. ಅಲ್ಲದೇ ವಯೋಮಿತಿಯಲ್ಲಿಯೂ ಕೂಡ ಸಡಿಲಿಕೆ ನೀಡಲಾಗಿದೆ.

ಈ ಕುರಿತು ಗೃಹ ಸಚಿವಾಲಯವು ಟ್ವೀಟ್‌ ಮಾಡಿದ್ದು “ಗೃಹ ವ್ಯವಹಾರಗಳ ಸಚಿವಾಲಯ (MHA) ಸಿಎಪಿಎಫ್‌ ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ ಅಗ್ನಿವೀರ್‌ಗಳಿಗಾಗಿ ನೇಮಕಾತಿಗಾಗಿ 10% ಖಾಲಿ ಹುದ್ದೆಗಳನ್ನು ಕಾಯ್ದಿರಿಸಲು ನಿರ್ಧರಿಸಿದೆ” ಎಂದು ಹೇಳಿದೆ.

ಅಲ್ಲದೇ “CAPF ಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ನೇಮಕಾತಿಗಾಗಿ ಅಗ್ನಿವೀರ್‌ಗಳಿಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲು MHA ನಿರ್ಧರಿಸುತ್ತದೆ. ಇದಲ್ಲದೆ, ಅಗ್ನಿವೀರ್‌ನ ಮೊದಲ ಬ್ಯಾಚ್‌ಗೆ, ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ 5 ವರ್ಷಗಳವರೆಗೆ ವಯಸ್ಸಿನ ಸಡಿಲಿಕೆ ಇರುತ್ತದೆ” ಎಂದು ಹೇಳಿದೆ.

Sneha Gowda

Recent Posts

ಮನುಷ್ಯನ ಆರೋಗ್ಯಕ್ಕೆ ಕ್ರೀಡೆಗಳು ಅತ್ಯಂತ ಸಹಕಾರಿ : ತಮ್ಮಯ್ಯ

ಕ್ರೀಡೆಗಳು ಮನುಷ್ಯನ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡುವ ಜೊ ತೆಗೆ ಮನಸ್ಸನ್ನು ಹತೋಟಿಗಿಡುವ ಬಹುದೊಡ್ಡ ಸಾಧನ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ…

11 mins ago

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು- ತಮ್ಮಯ್ಯ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಬೇಕೆಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದ್ದಾರೆ. ನಗರದ ಬಸವನಹಳ್ಳಿಯ…

22 mins ago

ಮಕ್ಕಳು ಬೇಸಿಗೆ ರಜೆಯಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು : ಶಿಕ್ಷಕ ಬಾಲಾಜಿ

ಬೇಸಿಗೆ ರಜೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗಳ ಬೇಸಿಗೆ ತರಬೇತಿ ಶಿಬಿರಗಳಿಗೆ ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕಳಿಸುವುದು ಸಾಮಾನ್ಯ.…

32 mins ago

ಚರಂಡಿ ಸ್ವಚ್ಛಗೊಳಿಸುವಂತೆ ಸಾರ್ವಜನಿಕರ ಆಗ್ರಹ

ಪಟ್ಟಣದ ವಿವಿಧ ವಾರ್ಡ್‌ಗಳು ಹಾಗೂ ಪ್ರಮುಖ ವೃತ್ತಗಳಲ್ಲಿನ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಧಿಕಾರಿಗಳ…

44 mins ago

ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​ : ಕಾರಣ ಇಲ್ಲಿದೆ

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು…

56 mins ago

ಹಾಡಹಗಲೇ ಮನೆಗೆ ನುಗ್ಗಿ‌ದ ದುಷ್ಕರ್ಮಿಗಳು : ಜೀಪ್​ಗೆ ಬೆಂಕಿ ಹಚ್ಚಿ ಪರಾರಿ

ಹಾಡಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ‌ ಟಿವಿ, ಫ್ರಿಡ್ಜ್ ಹಾಳು ಮಾಡಿರುವ ಘಟನೆ ಪಂಚಾಕ್ಷರಿ ನಗರದಲ್ಲಿ ನಡದಿದೆ.

59 mins ago