ದೆಹಲಿ

ರಾಜ್ಯಕ್ಕೆ ಬರ ಪರಿಹಾರ ಇಂದು ಗೃಹ ಸಚಿವ ಶಾ ಸಭೆ

ನವದೆಹಲಿ: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿದೆ. ಬೆಳೆಗಳು ಒಣಗಿ ನಿಂತಿವೆ. ಈ ಹಿನ್ನಲೆಯಲ್ಲಿ ಕರ್ನಾಟಕಕ್ಕೆ ಬರ ಪರಿಹಾರ ನೀಡುವ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು (ಶನಿವಾರ) ಉನ್ನತ ಮಟ್ಟದ ಸಭೆ ನಡೆಸುವ ನಿರೀಕ್ಷೆ ಇದೆ.

ಈ ವಿಚಾರವಾಗಿ ಇತ್ತೀಚೆಗಷ್ಟೇ ನವದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆ ನಡೆಸಿ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮೈಸೂರಿನಲ್ಲಿ ಮಾಹಿತಿ ನೀಡಿದ್ದಾರೆ.

ಹೀಗಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ನೀಡುವ ಬಗ್ಗೆ ಅಮಿತ್ ಶಾ ಅವರು ಸಭೆ ಕರೆಯುವ ಸಾಧ್ಯತೆ ಹೆಚ್ಚಾಗಿದೆ.

ಪ್ರಧಾನಿ ಮೋದಿ ಭೇಟಿ ವೇಳೆ, ರಾಜ್ಯಕ್ಕೆ ಬರ ಪರಿಹಾರ ಆದಷ್ಟು ಶೀಘ್ರದಲ್ಲಿ ನೀಡಬೇಕು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಭೆ ಕರೆಯುವಂತೆ ಸೂಚಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಪ್ರಧಾನಿ ಮೋದಿ, ಶೀಘ್ರದಲ್ಲೇ ಸಭೆ ಕರೆಯುವಂತೆ ಅಮಿತ್ ಶಾ ಅವರಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದ್ದರು. ಈ ವಿಚಾರವಾಗಿ ನಂತರ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದರು.

Ashika S

Recent Posts

ನಿವೃತ್ತಿ ಘೋಷಿಸಿದ ಪ್ರಸಿದ್ಧ ಫುಟ್​ಬಾಲ್ ಆಟಗಾರ ಸುನಿಲ್ ಛೆಟ್ರಿ

ಫುಟ್​ಬಾಲ್ ಲೆಜೆಂಡ್ ಆಟಗಾರ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್​ಬಾಲ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಜೂನ್ 6 ರಂದು ಕೊಲ್ಕತ್ತಾದ ಸಾಲ್ಟ್ ಲೇಕ್…

3 mins ago

90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ

ನೋಕಿಯಾ ತನ್ನ 3210 ಫೋನನ್ನು ಮತ್ತೆ ಮರು ಪರಿಚಯಿಸಿದೆ. 90ರ ದಶಕದಲ್ಲಿ ಐಕಾನಿಕ್​ ಫೋನ್​ ಆಗಿ ಮಾರುಕಟ್ಟೆಗೆ ಬಂದ ನೋಕಿಯಾ…

8 mins ago

ಸುಬ್ರಹ್ಮಣ್ಯದಲ್ಲಿ ಭಾರಿ ಗಾಳಿ-ಮಳೆ : ತೋಟದಲ್ಲಿ ಮರ ಬಿದ್ದು ಮಹಿಳೆ ಸಾವು

  ಗಾಳಿ - ಮಳೆಗೆ ಮರ ಬಿದ್ದು ವೃದ್ಧೆಯೋರ್ವರು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಮೇ 16…

46 mins ago

‘ಜೆಟ್ ಏರ್ವೇಸ್’ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ನಿಧನ

ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಪತ್ನಿ ಅನಿತಾ ಗೋಯಲ್ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

51 mins ago

ಪತ್ನಿಗೆ ವಿಡಿಯೋ ಕಾಲ್ ಮಾಡಿ ಹೆದರಿಸಲು ಹೋಗಿ ಜಿಮ್​​ ಟ್ರೈನರ್ ಸಾವು

ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಜಿಮ್ ಟ್ರೈನರ್ ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ…

1 hour ago

ಟಿ 20 ವಿಶ್ವಕಪ್​​ನಲ್ಲಿ ಕನ್ನಡಿಗರ ಸಂಭ್ರಮ ಹೆಚ್ಚಿಸಿದ ಕೆಎಮ್​ಫ್​

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೆಎಮ್​ಫ್​ (ಕರ್ನಾಟಕ ಹಾಲು ಮಹಾಮಂಡಳಿ) ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್ ತಂಡಕ್ಕೆ ಪ್ರಾಯೋಕತ್ವ ನೀಡಿದೆ.

1 hour ago