News Karnataka Kannada
Tuesday, April 23 2024
Cricket
ದೆಹಲಿ

ಮಲ್ಯ, ನೀರವ್‌ ಜೊತೆ ಪ್ರಧಾನಿ ಮೋದಿ ಚಿತ್ರ: ಎಫ್‌ಐಆರ್‌ ದಾಖಲು

ನೀರವ್‌ ಮೋದಿ ಮತ್ತು ವಿಜಯ್‌ ಮಲ್ಯ ಅವರೊಟ್ಟಿಗೆ ಪ್ರಧಾನಿ ಮೋದಿ ಅವರಿರುವ ಭಿತ್ತಿಪತ್ರಗಳನ್ನು ಕೇಂದ್ರ ದೆಹಲಿಯ ಹಲವೆಡೆ ಪ್ರದರ್ಶಿಸಲಾಗಿದೆ. ಇದಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಇಂದು(ಮಾ.06) ತಿಳಿಸಿದರು.
Photo Credit : News Kannada

ನವದೆಹಲಿ: ನೀರವ್‌ ಮೋದಿ ಮತ್ತು ವಿಜಯ್‌ ಮಲ್ಯ ಅವರೊಟ್ಟಿಗೆ ಪ್ರಧಾನಿ ಮೋದಿ ಅವರಿರುವ ಭಿತ್ತಿಪತ್ರಗಳನ್ನು ಕೇಂದ್ರ ದೆಹಲಿಯ ಹಲವೆಡೆ ಪ್ರದರ್ಶಿಸಲಾಗಿದೆ. ಇದಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಇಂದು(ಮಾ.06) ತಿಳಿಸಿದರು.

ಈ ಭಿತ್ತಿಪತ್ರಗಳ ಮೇಲೆ ‘ಮೋದಿ ಕಾ ಅಸ್ಲಿ ಪರಿವಾರ್‌’ (ಮೋದಿ ಅವರ ಅಸಲಿ ಪರಿವಾರ) ಎಂದು ಬರೆಯಲಾಗಿದೆ. ಅದರ ಅಡಿಯಲ್ಲಿ ಭಾರತೀಯ ಯುವ ಕಾಂಗ್ರೆಸ್‌ ಎಂದು ಬರೆಯಲಾಗಿದೆ.

ನವದೆಹಲಿಯ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ನೀಡಿದ್ದ ದೂರು ಆಧರಿಸಿ, ದೆಹಲಿ ಸ್ವತ್ತುಗಳ ವಿರೂಪ ತಡೆ ಕಾಯ್ದೆ ಅಡಿ ಅಪರಿಚಿತರ ವಿರುದ್ಧ ತುಘಲಕ್‌ ರಸ್ತೆಯ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ. ಈ ಭಿತ್ತಿಪತ್ರಗಳನ್ನು ಪ್ರಕಟಿಸಿದ ಮತ್ತು ಅಂಟಿಸಿದವರ ಹೆಸರನ್ನು ಅವುಗಳ ಮೇಲೆ ಲಗತ್ತಿಸಲಾಗಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು