News Karnataka Kannada
Thursday, April 18 2024
Cricket
ದೆಹಲಿ

ಕೇಂದ್ರದ ವಿರುದ್ಧ ರಸ್ತೆಗಿಳಿದ ರೈತರು; ಪರಿಹಾರ ಹೆಚ್ಚಳಕ್ಕೆ ಆಗ್ರಹ

ಮೂರು ವರ್ಷಗಳ ನಂತರ ದೇಶದಲ್ಲಿ ರೈತರ ಕೂಗು ಕೇಳಿಬರುತ್ತಿದ್ದು, ಭೂಮಿಯ ಪರಿಹಾರ ಹೆಚ್ಚಳಕ್ಕೆ ಬೇಡಿಕೆಯಿಟ್ಟು ಉತ್ತರ ಪ್ರದೇಶದ ನೋಯ್ಡಾದಿಂದ ಸಂಸತ್ ಭವನದ ಕಡೆಗೆ ಮೆರವಣಿಗೆ ಹೊರಟಿದ್ದಾರೆ.ಇದು ಸಂಚಾರ ದಟ್ಟಣೆಗೆ ಕಾರಣವಾಗಿದೆ.
Photo Credit : News Kannada

ನವದೆಹಲಿ: ಮೂರು ವರ್ಷಗಳ ನಂತರ ದೇಶದಲ್ಲಿ ರೈತರ ಕೂಗು ಕೇಳಿಬರುತ್ತಿದ್ದು, ಭೂಮಿಯ ಪರಿಹಾರ ಹೆಚ್ಚಳಕ್ಕೆ ಬೇಡಿಕೆಯಿಟ್ಟು ಉತ್ತರ ಪ್ರದೇಶದ ನೋಯ್ಡಾದಿಂದ ಸಂಸತ್ ಭವನದ ಕಡೆಗೆ ಮೆರವಣಿಗೆ ಹೊರಟಿದ್ದಾರೆ.ಇದು ಸಂಚಾರ ದಟ್ಟಣೆಗೆ ಕಾರಣವಾಗಿದೆ.

ಪ್ರತಿಭಟನಾಕಾರರನ್ನು ತಡೆಯಲು ಬ್ಯಾರಿಕೇಡ್‌ ಅಳವಡಿಸಲಾಗಿದ್ದು, ನೋಯ್ಡಾ ಎಕ್ಸ್‌ಪ್ರೆಸ್‌ ವೇಗೆ ಪ್ರವೇಶಿಸುವ ಎಲ್ಲಾ ಮಾರ್ಗಗಳನ್ನೂ ಸಂಚಾರಿ ಪೊಲೀಸರು ತಡೆದಿದ್ದಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.

ನೋಯ್ಡಾದಿಂದ ಹೊರಟ ರೈತರು ದೆಹಲಿ ಪ್ರವೇಶಿಸದಂತೆ ದಿಲ್ಲಿ ಪೋಲೀಸರು ಬೃಹತ್‌ ಸಂಖ್ಯೆಯಲ್ಲಿ ಭದ್ರತಾ ಪಡೆ ಹಾಗು ಜಲ ಫಿರಂಗಿಗಳನ್ನು ನಿಯೋಜಿಸಿದ್ದಾರೆ. ಉತ್ತರ ಪ್ರದೇಶ ಹಾಗು ಹರ್ಯಾಣದ ಮತ್ತಷ್ಟು ರೈತರು ಸೇರ್ಪಡೆಗೊಳ್ಳುವ ಸಾಧ್ಯತೆಯಿರುವುರಿಂದ ಅವರನ್ನು ತಡೆಯಲು ಸೂಕ್ತ ತಯಾರಿ ಮಾಡಲಾಗುತ್ತಿದೆ.

ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ಮೂಲಸೌಕರ್ಯ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ಆಗ್ರಹಿಸಿರುವ ರೈತರು, ಶೇ 10ರಷ್ಟು ಅಬಾದಿ ಜಮೀನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಜಮೀನು ಸ್ವಾಧೀನಪಡಿಸಿಕೊಂಡ ಕಾರಣ ಬಹುತೇಕರು ಭೂರಹಿತರಾಗಿದ್ದಾರೆ. ಅವರಿಗೆ ತಕ್ಕ ಪರಿಹಾರ ಸಿಗಬೇಕು. ಜೊತೆಗೆ, ಸ್ವಾಧೀನಪಡಿಸಿಕೊಂಡಾಗ ಜಮೀನಿಗೆ ಇದ್ದ ದರವನ್ನೇ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು