Categories: ದೆಹಲಿ

ನವದೆಹಲಿ: ರಾಜ್ಯಸಭೆ 56 ಸ್ಥಾನಗಳಿಗೆ ಫೆ.27ಕ್ಕೆ ಚುನಾವಣೆ

ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಮಧ್ಯೆಯೇ ಚುನಾವಣೆ ಆಯೋಗವು ರಾಜ್ಯಸಭೆ ಚುನಾವಣೆ  ದಿನಾಂಕ ಘೋಷಿಸಿದೆ.

15 ರಾಜ್ಯಗಳ 56 ರಾಜ್ಯಸಭೆ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಸಲು ಆಯೋಗವು  ತೀರ್ಮಾನಿಸಿದೆ. ಫೆಬ್ರವರಿ 27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ  ನಡೆಯಲಿದೆ ಎಂದು ಚುನಾವಣೆ ಆಯೋಗವು ಮಾಹಿತಿ ನೀಡಿದೆ.

ಫೆಬ್ರವರಿ 16ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಫೆಬ್ರವರಿ 20 ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದೆ. ಮತದಾನ ನಡೆಯುವ ಫೆಬ್ರವರಿ 27ರಂದೇ ಫಲಿತಾಂಶ ಲಭ್ಯವಾಗಲಿದೆ.

ಯಾವ ರಾಜ್ಯಗಳಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆ?
ರಾಜ್ಯ ಸ್ಥಾನ
ಕರ್ನಾಟಕ –  4 ಸ್ಥಾನ
ಆಂಧ್ರಪ್ರದೇಶ – 3 ಸ್ಥಾನ
ಬಿಹಾರ – 6 ಸ್ಥಾನ
ಛತ್ತೀಸ್‌ಗಢ – 1 ಸ್ಥಾನ
ಗುಜರಾತ್ – ‌4 ಸ್ಥಾನ
ಹರಿಯಾಣ – 1 ಸ್ಥಾನ
ಹಿಮಾಚಲ ಪ್ರದೇಶ – 1 ಸ್ಥಾನ
ಮಧ್ಯಪ್ರದೇಶ – 5 ಸ್ಥಾನ
ಮಹಾರಾಷ್ಟ್ರ – 6 ಸ್ಥಾನ
ತೆಲಂಗಾಣ  -3 ಸ್ಥಾನ
ಉತ್ತರ ಪ್ರದೇಶ  – 10 ಸ್ಥಾನ
ಉತ್ತರಾಖಂಡ – 1 ಸ್ಥಾನ
ಪಶ್ಚಿಮ ಬಂಗಾಳ – 5 ಸ್ಥಾನ
ಒಡಿಶಾ – 3 ಸ್ಥಾನ
ರಾಜಸ್ಥಾನ  -3 ಸ್ಥಾನ
ಒಟ್ಟು 56

Ashika S

Recent Posts

ಮೂರು ಕೊಲೆ ಕೇಸ್‌ : ಬೆಳ್ಳಂ ಬೆಳಗೆ ಆರೋಪಿ ಕಾಲಿಗೆ ಪೊಲೀಸ್‌ ಗುಂಡೇಟು

ಶಿವಮೊಗ್ಗದಲ್ಲಿ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಮೂವರನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್‌ ಕಾಲಿಗೆ…

8 mins ago

ಅಮೇರಿಕಾದಿಂದ ತಿರಸ್ಕೃತಗೊಂಡ ಎಂಡಿಎಚ್​ ಮಸಾಲ : ಕಾರಣ ಇಲ್ಲಿದೆ

ಅಮೇರಿಕಾದಲ್ಲಿ ಎಂಡಿಎಚ್​ ಸಾಂಬಾರ್ ಮಸಾಲ ಪದಾರ್ಥಗಳು ತಿರಸ್ಕೃತಗೊಂಡಿವೆ. ಈ ಮಸಾಲಗಳಲ್ಲಿ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಕಂಡುಬಂದಿದ್ದರಿಂದ ಅಮೆರಿಕದ ಆಹಾರ ಹಾಗೂ ಔಷಧ…

29 mins ago

ಜೈಪುರದ ನಾಲ್ಕು ಶಾಲೆಗಳಿಗೆ ಬಾಂಬ್​ ಬೆದರಿಕೆ

ಜೈಪುರದ ಪೊಲೀಸರು ಸೋಮವಾರ ಕನಿಷ್ಠ ನಾಲ್ಕು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ ಎಂದು ವರದಿ ಮಾಡಿದ್ದಾರೆ. ಸಂತ್ರಸ್ತ…

47 mins ago

ನಾಳೆ ಮೋದಿ 3ನೇ ಬಾರಿ ನಾಮಪತ್ರ ಸಲ್ಲಿಕೆ : ಇಂದು ರೋಡ್‌ ಶೋ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ಬೆಳಿಗ್ಗೆ ವಾರಾಣಸಿಯಲ್ಲಿ ಲೋಕಸಭೆ ಚುನಾವಣೆ ಬಿಜೆಪಿ ಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೆ ಒಂದು…

1 hour ago

ಇಂದು ಎಚ್‌ ಡಿ ರೇವಣ್ಣ ಬೇಲ್​ ಅರ್ಜಿ ವಿಚಾರಣೆ

ಕಿಡ್ನಾಪ್‌ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರು ಇಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ…

2 hours ago

ಚುನಾವಣೆಗೂ ಮುನ್ನ ಸ್ಫೋಟ : ಮೂವರು ಅಪ್ರಾಪ್ತರು ಸೇರಿ ನಾಲ್ವರು ಸಾವು!

ಚುನಾವಣೆಗೂ ಮುನ್ನ ದಿನವೇ ಜಾರ್ಖಂಡ್‌ನ ಪಲಮುವಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು…

3 hours ago