News Karnataka Kannada
Monday, April 22 2024
Cricket
ದೆಹಲಿ

ಜಿ20 ಶೃಂಗಸಭೆಗೆ ಸಜ್ಜು: ವಿಶ್ವದರ್ಜೆಯ ಐಇಸಿಸಿಯಾಗಿ ಬದಲಾದ ಪ್ರಗತಿ ಮೈದಾನ್

Pragati Maidan Complex
Photo Credit : Twitter

ನವದೆಹಲಿ:  ಭಾರತದ ಅಧ್ಯಕ್ಷತೆಯ ಜಿ20 ಶೃಂಗಸಭೆ ಸೆಪ್ಟಂಬರ್ 9 ಮತ್ತು 10ರಂದು ರಾಷ್ಟ್ರ ರಾಜಧಾನಿ ನಗರಿಯಲ್ಲಿ ನಡೆಯಲಿದೆ. ಅದಕ್ಕಾಗಿ ದೆಹಲಿಯ ಪ್ರಗತಿ ಮೈದಾನ್ ಸಂಕೀರ್ಣವನ್ನು ಮರು ಅಭಿವೃದ್ಧಿಪಡಿಸಲಾಗಿದ್ದು ವಿಶ್ವದರ್ಜೆಯ ಸ್ಥಳವಾಗಿ ಅದು ಮಾರ್ಪಟ್ಟಿದೆ.

ಐಟಿಪಿಒ ಕಾಂಪ್ಲೆಕ್ಸ್ ಆಗಿದ್ದ ಈ ಸ್ಥಳ ಈಗ ಐಇಸಿಸಿ ಸೆಂಟರ್ ಆಗಿ ರೂಪುಗೊಂಡಿದೆ. ಇಂಟರ್ನ್ಯಾಷನ್ ಎಕ್ಸಿಬಿಶನ್ ಕಮ್ ಕನ್ವೆನ್ಷನ್ ಸೆಂಟರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಜುಲೈ 26, ಬುಧವಾರದಂದು ಉದ್ಘಾಟನೆ ಮಾಡಲಿದ್ದಾರೆ ಎಂದು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆ ದಿನದಂದು ಪೂಜೆಯ ಮೂಲಕ ಸಮಾರಂಭ ಆರಂಭವಾಗಲಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೂರಾರು ಮಂದಿಗೆ ಆ ಸಮಾರಂಭಕ್ಕೆ ಆಹ್ವಾನ ಕೊಡಲಾಗಿದೆ.

ಜಿ20 ಗುಂಪಿನ ಸಭೆ ಪ್ರತೀ ವರ್ಷವೂ ನಡೆಯುತ್ತದೆ. ಪ್ರತೀ ಬಾರಿಯೂ ಒಂದು ದೇಶಕ್ಕೆ ಅಧ್ಯಕ್ಷ ಸ್ಥಾನ ಕೊಡಲಾಗುತ್ತದೆ. ಭಾರತಕ್ಕೆ ಮೊದಲ ಬಾರಿಗೆ ಜಿ20 ಅಧ್ಯಕ್ಷ ಸ್ಥಾನ ಸಿಕ್ಕಿದೆ. 2022ರ ಡಿಸೆಂಬರ್ 1ರಿಂದ 2023 ನವೆಂಬರ್ 30ರವರೆಗೂ ಭಾರತ ಜಿ20 ಗುಂಪಿನ ಅಧ್ಯಕ್ಷನಾಗಿದೆ. ಸೆಪ್ಟಂಬರ್ 9 ಮತ್ತು 10ರಂದು ಬಹಳ ಮುಖ್ಯವಾದ ಜಿ20 ಶೃಂಗಸಭೆ ನಡೆಯುತ್ತಿದೆ. ಇದೇ ಐಇಸಿಸಿಯಲ್ಲಿ ಇದನ್ನು ಆಯೋಜಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು