News Karnataka Kannada
Wednesday, May 01 2024
ದೆಹಲಿ

ದಿಲ್ಲಿ ಚಲೋ ಪ್ರತಿಭಟನೆ: 65 ವರ್ಷದ ಪಂಜಾಬ್ ರೈತ ಶಂಭು ಗಡಿಯಲ್ಲಿ ಹೃದಯಾಘಾತದಿಂದ ಸಾವು

‘ದಿಲ್ಲಿ ಚಲೋ’ ಪ್ರತಿಭಟನೆಯ ಭಾಗವಾಗಿದ್ದ ಸಾವಿರಾರು ರೈತರೊಂದಿಗೆ ಶಂಭು ಗಡಿಯಲ್ಲಿದ್ದ ಪಂಜಾಬ್‌ನ 65 ವರ್ಷದ ರೈತ ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದ್ದಾರೆ.
Photo Credit : News Kannada

ದೆಹಲಿ: ‘ದಿಲ್ಲಿ ಚಲೋ’ ಪ್ರತಿಭಟನೆಯ ಭಾಗವಾಗಿದ್ದ ಸಾವಿರಾರು ರೈತರೊಂದಿಗೆ ಶಂಭು ಗಡಿಯಲ್ಲಿದ್ದ ಪಂಜಾಬ್‌ನ 65 ವರ್ಷದ ರೈತ ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದ್ದಾರೆ.

ಮೃತರನ್ನು ಗುರುದಾಸ್‌ಪುರ ಜಿಲ್ಲೆಯ ಚಚೆಕಿ ಗ್ರಾಮದವರಾದ ಜ್ಞಾನ್ ಸಿಂಗ್ ಎಂದು ಗುರುತಿಸಲಾಗಿದೆ.

ಇವರು ಶಂಭು ತಡೆಗೋಡೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಇತರ ಐವರು ರೈತರೊಂದಿಗೆ ಟ್ರಾಲಿಯಲ್ಲಿ ಮಲಗಿದ್ದರು. ಮುಂಜಾನೆ 3 ಗಂಟೆಯ ಸುಮಾರಿಗೆ ಅವರು ಅಸ್ವಸ್ಥರಾದರು ಎಂದು ಅವರ ಸೋದರಳಿಯ ಜಗದೀಶ್ ಸಿಂಗ್ ಹೇಳಿದ್ದಾರೆ. “ನಾವು ಶಂಭು ಪೊಲೀಸ್ ಠಾಣೆ ಬಳಿ ನಿಲ್ಲಿಸಿದ್ದ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ರಾಜಪುರ ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ಆದರೆ, ಉಸಿರುಗಟ್ಟುತ್ತಿದ್ದ ಕಾರಣ ಅವರನ್ನು ಪಟಿಯಾಲಾದ ರಾಜೀಂದ್ರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆಂಬ್ಯುಲೆನ್ಸ್‌ನಲ್ಲಿ ಅವರಿಗೆ ಆಮ್ಲಜನಕ ಪೂರೈಕೆ ಮಾಡಲಾಗಿತ್ತು. ಬೆಳಿಗ್ಗೆ 5 ಗಂಟೆಗೆ ನಾವು ವೈದ್ಯಕೀಯ ಕಾಲೇಜಿಗೆ ತಲುಪಿದ್ದೇವೆ ಆದರೆ ಅವರು ಆಸ್ಪತ್ರೆಯಲ್ಲಿ ಬೆಳಿಗ್ಗೆ 7.45 ರ ಸುಮಾರಿಗೆ ನಿಧನರಾದರು ”ಎಂದು ಜಗದೀಶ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಜ್ಞಾನ್ ಸಿಂಗ್ ಅವರು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸದಸ್ಯರಾಗಿದ್ದರು, ಇದು ಕಿಸಾನ್ ಮಜ್ದೂರ್ ಮೋರ್ಚಾದ ಘಟಕವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು