News Karnataka Kannada
Monday, April 22 2024
Cricket
ದೆಹಲಿ

ರೈಲು ಅಪಘಾತದಲ್ಲಿ ಸಾವನಪ್ಪಿದವರ ಸಂಖ್ಯೆ 261ಕ್ಕೇರಿಕೆ

Death toll in train accident rises to 261
Photo Credit : IANS

ಭುವನೇಶ್ವರ/ನವದೆಹಲಿ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ರೈಲು ಹಳಿತಪ್ಪಿ ಸಾವನ್ನಪ್ಪಿದವರ ಸಂಖ್ಯೆ 261 ಕ್ಕೆ ಏರಿಕೆಯಾಗಿದ್ದು, ಸುಮಾರು 900 ಜನರು ಗಾಯಗೊಂಡಿದ್ದಾರೆ ಎಂದು ಆಗ್ನೇಯ ರೈಲ್ವೆ ಶನಿವಾರ ತಿಳಿಸಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಬೆಳಗ್ಗೆ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದು, ವಿವರವಾದ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಮತ್ತು ರೈಲು ಸುರಕ್ಷತಾ ಆಯುಕ್ತರಿಂದ ಸ್ವತಂತ್ರ ತನಿಖೆ ನಡೆಸಲಾಗುವುದು ಎಂದು ಘೋಷಿಸಿದರು.

ಅಪಘಾತದ ಪರಿಶೀಲನಾ ಸಭೆ ನಡೆಸಿದ ಮೋದಿ, ನಂತರ ಒಡಿಶಾಗೆ ತೆರಳಿದ್ದಾರೆ. 261 ಸಾವುನೋವುಗಳಿವೆ. ಸುಮಾರು 650 ಗಾಯಗೊಂಡ ಪ್ರಯಾಣಿಕರನ್ನು ಗೋಪಾಲ್‌ಪುರ, ಖಾಂತಪಾರಾ, ಬಾಲಸೋರ್‌ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಪಘಾತ ಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವೈಷ್ಣವ್, ಪ್ರಸ್ತುತ ಅಪಘಾತ ಗಾಯಾಳುಗಳ ರಕ್ಷಣೆಗೆ ಗಮನ ನೀಡಲಾಗಿದೆ. ಬಳಿಕ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು