News Karnataka Kannada
Thursday, April 25 2024
Cricket
ದೆಹಲಿ

ನಾನು ಸಂಪೂರ್ಣ ಸಸ್ಯಾಹಾರಿಯಾಗಿದ್ದೇನೆ; ಕೋವಿಡ್‌ ಕಾಲ ನೆನೆದ ಚಂದ್ರಚೂಡ್

ಕೊರೋನಾ ಕಾಲದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡ ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಡಿ.ವೈ.ಸಂದ್ರಚೂಡ್‌, ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯ ಉಪಯೋಗವನ್ನು ಅರಿತುಕೊಂಡ ಬಗ್ಗೆ ಹೇಳುತ್ತ, ಕೋವಿಡ್‌ನಿಂದ ಬಳಲುತ್ತಿದ್ದಾಗ ಪ್ರಧಾನಿ ಮೋದಿ ನೀಡಿದ ಸಲಹೆಗಳನ್ನು ಸ್ಮರಿಸಿದ್ದಾರೆ.
Photo Credit :

ನವದೆಹಲಿ: ಕೊರೋನಾ ಕಾಲದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡ ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಡಿ.ವೈ.ಸಂದ್ರಚೂಡ್‌, ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯ ಉಪಯೋಗವನ್ನು ಅರಿತುಕೊಂಡ ಬಗ್ಗೆ ಹೇಳುತ್ತ, ಕೋವಿಡ್‌ನಿಂದ ಬಳಲುತ್ತಿದ್ದಾಗ ಪ್ರಧಾನಿ ಮೋದಿ ನೀಡಿದ ಸಲಹೆಗಳನ್ನು ಸ್ಮರಿಸಿದ್ದಾರೆ.

ಸುಪ್ರೀಂ ಕೋರ್ಟ್ ಆವರಣದಲ್ಲಿ ಆಯುಷ್ ಹೋಲಿಸ್ಟಿಕ್ ವೆಲ್ನೆಸ್ ಸೆಂಟರ್‌ ಉದ್ಘಾಟಿಸಿ ಮಾತನಾಡಿದ ಅವರು, ನಾನು ಕೋವಿಡ್‌ನಿಂದ ಬಳಲುತ್ತಿದ್ದಾಗ ಪ್ರಧಾನಿ ಮೋದಿ ಕರೆ ಮಾಡಿ ಆರೋಗ್ಯವನ್ನು ವಿಚಾರಿಸಿಕೊಂಡು ಅಗತ್ಯ ನೆರವು ಒದಗಿಸುವುದಾಗಿ ಭರವಸೆಯಿತ್ತರು ಎಂದರು.

ಮತ್ತೆರಡು ಬಾರಿ ಕೊರೋನಾ ಸೋಂಕಿಗೆ ಒಳಗಾದಾಗ ತಾವು ಅನುಸರಿಸುತ್ತಿದ್ದ ಜೀವನ ಶೈಲಿಯನ್ನು ವಿವರಿಸಿದ ಚಂದ್ರಚೂಡ್, ಪ್ರತಿನಿತ್ಯ ಬೆಳಗ್ಗೆ 3:30ಕ್ಕೆ ಎದ್ದು ಯೋಗ ಮಾಡುತ್ತೇನೆ ಹಾಗು ಕಳೆದ ಐದು ತಿಂಗಳಿಂದ ಸಂಪೂರ್ಣವಾಗಿ ಸಸ್ಯಾಹಾರಿಯಾಗಿದ್ದು, ಇದೇ ಕ್ರಮವನ್ನು ಮುಂದುವರಿಸುತ್ತೇನೆ ಎಂದರು.

ನ್ಯಾಯಾಧೀಶರು, ಅವರ ಕುಟುಂಬಗಳು ಮತ್ತು ಸುಪ್ರೀಂ ಕೋರ್ಟ್‍ನ ಸಿಬ್ಬಂದಿ ಸದಸ್ಯರಲ್ಲಿ ಆಯುರ್ವೇದ ಮತ್ತು ಸಮಗ್ರ ಜೀವನಶೈಲಿ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿರುವ ಆಯುಷ್ ಹೋಲಿಸ್ಟಿಕ್ ವೆಲ್ನೆಸ್ ಸೆಂಟರ್, ಉತ್ತಮ ಚಿಕಿತ್ಸಾ ಕೊಠಡಿಗಳು, ವಿಶ್ರಾಂತಿ ಕೊಠಡಿಗಳನ್ನು ಹೊಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು