News Karnataka Kannada
Sunday, April 14 2024
Cricket
ದೆಹಲಿ

ಹಜ್ ಯಾತ್ರಿಗಳಿಗೆ ಸುವಿಧಾ ಆ್ಯಪ್ ಆರಂಭಿಸಿದ ಕೇಂದ್ರ

ಜೂನ್‌ನಿಂದ ಹಜ್ ಯಾತ್ರೆ ಆರಂಭಗೊಳ್ಳುತ್ತಿದ್ದು, ಇದೀಗ ಕೇಂದ್ರ ಸರ್ಕಾರ ಹಜ್ ಯಾತ್ರಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ. ಯಾತ್ರಿಗಳ ಸುಗಮ ಯಾತ್ರೆಗೆ ಸುವಿಧಾ ಆ್ಯಪ್ ಕೂಡ ಲಾಂಚ್ ಮಾಡಲಾಗಿದೆ. 
Photo Credit : News Kannada

ನವದೆಹಲಿ: ಜೂನ್‌ನಿಂದ ಹಜ್ ಯಾತ್ರೆ ಆರಂಭಗೊಳ್ಳುತ್ತಿದ್ದು, ಇದೀಗ ಕೇಂದ್ರ ಸರ್ಕಾರ ಹಜ್ ಯಾತ್ರಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ. ಯಾತ್ರಿಗಳ ಸುಗಮ ಯಾತ್ರೆಗೆ ಸುವಿಧಾ ಆ್ಯಪ್ ಕೂಡ ಲಾಂಚ್ ಮಾಡಲಾಗಿದೆ.

ಅಲ್ಪಸಂಖ್ಯಾತ ಸಚಿವೆ ಸ್ಮೃತಿ ಇರಾನಿ ಆ್ಯಪ್ ಲಾಂಚ್ ಮಾಡಿ, ಹಜ್ ಯಾತ್ರಿಗಳು ಯಾವುದೇ ಅಡೆ ತಡೆ ಇಲ್ಲದೆ, ಯಾತ್ರೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದಿದ್ದಾರೆ.

ಸುವಿಧಾ ಆ್ಯಪ್ ಮೂಲಕ ಹಜ್ ಯಾತ್ರಿಗಳು ವಿಮಾನ ಪ್ರಯಾಣದ ಮಾಹಿತಿ, ವಸತಿ ವ್ಯವಸ್ಥೆ, ಆರೋಗ್ಯ ಸೇವೆ, ತುರ್ತು ಸೇವೆ ಸೇರಿದಂತೆ ಹಲವು ಸೇವೆಗಳನ್ನು ನೇರವಾಗಿ ಬಳಸಲು ಸಾಧ್ಯವಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಹಜ್ ಮಾರ್ಗಸೂಚಿ 2024 ಹಾಗೂ ಸುವಿಧಾ ಆ್ಯಪ್ ಮೂಲಕ ಹಜ್ ಯಾತ್ರಿಗಳಿಗೆ ಸೇವೆ ಒದಗಿಸುವುದು ಮಾತ್ರ ಅಲ್ಪಸಂಖ್ಯಾತ ಸಚಿವಾಲಯದ ಕಾರ್ಯವಲ್ಲ. ಪ್ರಧಾನಿ ಮೋದಿ ಸಲಹೆಯಂತೆ ಎಲ್ಲಾ ಸಚಿವಾಲಯದ ಸಹಯೋಗದೊಂದಿಗೆ ಹಜ್ ಯಾತ್ರೆಗಳಿಗೆ ಸೇವೆ, ಸುಗಮ ಯಾತ್ರೆ, ಯಾವುದೇ ಸಮಯದಲ್ಲೂ ತುರ್ತು ಸೇವೆ ಅಥವಾ ಇನ್ಯಾವುದೇ ಸಹಾಯಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ 4,300 ಮಹಿಳೆಯರು ಹಜ್ ಯಾತ್ರೆ ಕೈಗೊಂಡಿದ್ದರು. ಈ ವರ್ಷ ಈ ಸಂಖ್ಯೆ 5,160ಕ್ಕೆ ಏರಿಕೆಯಾಗಿದೆ. ಹಜ್ ಯಾತ್ರಿಗಳಿಗೆ ಎಲ್ಲಾ ರೀತಿಯ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು