News Karnataka Kannada
Monday, April 29 2024
ದೆಹಲಿ

ಪ್ರಧಾನಿ ಮೋದಿ ಅವರ ಜೀವನ, ಸಾಧನೆ ಕುರಿತ ಬ್ರೈಲ್‌ ಲಿಪಿ ಪುಸ್ತಕ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಸಾಧನೆ ಕುರಿತು ಬ್ರೈಲ್‌ ಲಿಪಿಯಲ್ಲಿ ಬರೆಯಲಾದ  ‘ಎ ಪ್ರಾಮಿಸ್ಡ್ ನೇಷನ್ ಹಾನರೇಬಲ್‌ ಶ್ರೀ ನರೇಂದ್ರ ಮೋದಿ- ದಿ ಮೇಕರ್ ಆಫ್ ನ್ಯೂ ಇಂಡಿಯಾ’ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದರು.
Photo Credit : Twitter

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಸಾಧನೆ ಕುರಿತು ಬ್ರೈಲ್‌ ಲಿಪಿಯಲ್ಲಿ ಬರೆಯಲಾದ  ‘ಎ ಪ್ರಾಮಿಸ್ಡ್ ನೇಷನ್ ಹಾನರೇಬಲ್‌ ಶ್ರೀ ನರೇಂದ್ರ ಮೋದಿ- ದಿ ಮೇಕರ್ ಆಫ್ ನ್ಯೂ ಇಂಡಿಯಾ’ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದರು.

ವಿಜಯ ಸಂಕೇಶ್ವರ್‌ ಮಾಲೀಕತ್ವ ಮತ್ತು ಆನಂದ ಸಂಕೇಶ್ವರ್‌ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ವಿಆರ್‌ಎಲ್‌ ಲಾಜಿಸ್ಟಿಕ್ಸ್‌  ಪ್ರಕಾಶನದಲ್ಲಿ ಪ್ರಕಟವಾದ ಪುಸ್ತಕ ಇದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ನಮ್ಮ ನಾಗರಿಕತೆಯ ಮೌಲ್ಯಗಳನ್ನು, ಸಾಂಸ್ಕೃತಿಕ ಮೌಲ್ಯಗಳನು ಪುನಶ್ಚೇತನಗೊಳಿಸುವ ಮೂಲಕ ನವಭಾರತ ನಿರ್ಮಾಣದ ಝಲಕ್‌ ತೋರಿಸಿದ್ದಾರೆ.

ಮೋದಿ ಅವರ ಬದುಕಿನ ಪಯಣ ಮತ್ತು ಅವರು ಮಾಡಿರುವ ಕ್ರಾಂತಿಕಾರಿ ಬದಲಾವಣೆಗಳನ್ನು ಕಣ್ಣಿಲ್ಲದವರೂ ಓದಿ ಅರ್ಥೈಸಿಕೊಳ್ಳಲು ಸಾಧ್ಯವಾಗಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೇ ಅವರು ತಮ್ಮ ಟ್ವಿಟರ್‌ನಲ್ಲೂ ಬರೆದುಕೊಂಡಿದ್ದಾರೆ.

ಈ ಪುಸ್ತಕದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಸಂತಸ ವ್ಯಕ್ತಪಡಿಸಿ ಇದು ಹುಬ್ಬಳ್ಳಿಗೆ ಹಿರಿಮೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು