News Karnataka Kannada
Saturday, April 20 2024
Cricket
ದೆಹಲಿ

ಬಿಜೆಪಿ ಪಟ್ಟಿಯಿಂದ ಔಟ್: ರಾಜಕೀಯ ನಿವೃತ್ತಿ ಘೋಷಿಸಿದ ಹರ್ಷ ವರ್ಧನ್

ಹಾಲಿ ಸಂಸದ, ಮಾಜಿ ಸಚಿವ ಹರ್ಷ ವರ್ಧನ್ ರಾಜಕೀಯ ನಿವೃತ್ತಿ ಘೋಷಿಸಿ ತಮ್ಮ ಆರೋಗ್ಯ ಕ್ಲೀನಿಕ್ ಮುನ್ನಡೆಸಲು ನಿರ್ಧರಿಸಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ ಆದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
Photo Credit : News Kannada

ನವದೆಹಲಿ: ಹಾಲಿ ಸಂಸದ, ಮಾಜಿ ಸಚಿವ ಹರ್ಷ ವರ್ಧನ್ ರಾಜಕೀಯ ನಿವೃತ್ತಿ ಘೋಷಿಸಿ ತಮ್ಮ ಆರೋಗ್ಯ ಕ್ಲೀನಿಕ್ ಮುನ್ನಡೆಸಲು ನಿರ್ಧರಿಸಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ ಆದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ದೆಹಲಿ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ದೆಹಲಿಯ ಚಾಂದಿನಿ ಚೌಕ್ ಲೋಕಸಭಾ ಕ್ಷೇತ್ರಕ್ಕೆ ಹರ್ಷ ವರ್ಧನ್ ಬದಲು ಪ್ರವೀಣ್ ಖಂಡೇಲ್‌ವಾಲ್ ಹೆಸರು ಘೋಷಿಸಿದೆ. ಮಾ.2ರಂದು ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಇದೀಗ ಮಾ.3ಕ್ಕೆ ಹರ್ಷವರ್ಧನ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಈ ಬಾರಿ ಹರ್ಷವರ್ಧನ್‌ಗೆ ಟಿಕೆಟ್ ನೀಡದ ಕಾರಣ, ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದೇ ವೇಳೆ ಮತ್ತೆ ಡಾಕ್ಟರ್ ವೃತ್ತಿಗೆ ಮರಳುವುದಾಗಿ ಹರ್ಷವರ್ಧನ್ ಹೇಳಿಕೊಂಡಿದ್ದಾರೆ. ಕೃಷ್ಣನಗರದಲ್ಲಿರುವ ಇಎನ್‌ಟಿ ಕ್ಲಿನಿಕ್‌ಗೆ ಮರಳುತ್ತಿದ್ದೇನೆ. ಮತ್ತೆ ನನ್ನ ವೃತ್ತಿಗೆ ಮರಲು ನಾನು ಅತೀವ ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು