News Karnataka Kannada
Wednesday, April 24 2024
Cricket
ದೆಹಲಿ

ಲೋಕಸಭೆ ಚುನಾವಣೆ: ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಲೋಕಸಭಾ ಚುನಾವಣೆ 2024 ಕ್ಕೆ  ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು  ಬಿಡುಗಡೆ ಮಾಡಿದೆ.
Photo Credit : News Kannada

ನವದೆಹಲಿ: ಲೋಕಸಭಾ ಚುನಾವಣೆ 2024 ಕ್ಕೆ  ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು  ಬಿಡುಗಡೆ ಮಾಡಿದೆ.

16 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಿಂದ 195 ಸೀಟುಗಳಿಗೆ ಹೆಸರು ಪ್ರಕಟಿಸಿದೆ. ಪ್ರಧಾನಿ ಮೋದಿ ಸೇರಿದಂತೆ 34 ಸಚಿವರು ಕಣದಲ್ಲಿದ್ದಾರೆ.

ಮಧ್ಯಪ್ರದೇಶ -24, ಗುಜರಾತ್ -15, ರಾಜಸ್ಥಾನ -15, ಕೇರಳ -12, ತೆಲಂಗಾಣ -09, ಅಸ್ಸಾಂ -11, ಜಾರ್ಖಂಡ್ -11, ಚಂಡೀಗಢ -11, ದೆಹಲಿ -05, ಕಾಶ್ಮೀರ 02, ಅರುಣಾಚಲ ಪ್ರದೇಶ -2, ಗೋವಾ- 01, ತ್ರಿಪುರ – 01 ಸೀಟು ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ.

34 ಸಚಿವರು ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳು ಪಟ್ಟಿಯಲ್ಲಿದ್ದಾರೆ. ಇದರಲ್ಲಿ 28 ಮಹಿಳೆಯರು, 50 ವರ್ಷದೊಳಗಿನ 47 ನಾಯಕರು ಮತ್ತು ಒಬಿಸಿ ಸಮುದಾಯದ 57 ಸದಸ್ಯರಿದ್ದಾರೆ.

195 ಅಭ್ಯರ್ಥಿಗಳ ಪೈಕಿ 51 ಹುರಿಯಾಳುಗಳು ಪ್ರಮುಖ ರಾಜ್ಯ ಉತ್ತರ ಪ್ರದೇಶದಿಂದ, 20 ಮಂದಿ ಪಶ್ಚಿಮ ಬಂಗಾಳದಿಂದ ಮತ್ತು ದೆಹಲಿಯಿಂದ ಐವರು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ.

195 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಮೂರನೇ ಬಾರಿಗೆ ಸ್ಪರ್ಧಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು