ದೆಹಲಿ

ಅಕ್ಟೋಬರ್‌ ನಲ್ಲಿ ಬ್ಯಾಂಕ್‌ ಗಳಿಗೆ ಸಾಲು ಸಾಲು ರಜೆ

ನವದೆಹಲಿ: ಆರ್ ಬಿಐ ಅಕ್ಟೋಬರ್ ತಿಂಗಳ ಬ್ಯಾಂಕ್ ರಜಾಪಟ್ಟಿ ಬಿಡುಗಡೆ ಮಾಡಿದೆ. ದಸರಾ ಹಬ್ಬ ಈ ತಿಂಗಳಲ್ಲೇ ಇರುವ ಕಾರಣ ದೇಶಾದ್ಯಂತ ಬ್ಯಾಂಕುಗಳಿಗೆ ಸಾಲು ಸಾಲು ರಜೆಗಳಿವೆ. ವಾರಂತ್ಯದ ರಜೆಗಳು ಸೇರಿದಂತೆ ಅಕ್ಟೋಬರ್ ತಿಂಗಳಲ್ಲಿ ಒಟ್ಟು 16 ದಿನಗಳ ಕಾಲ ಬ್ಯಾಂಕ್ ಗಳು ಕಾರ್ಯನಿರ್ವಹಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ರಜಾ ದಿನಗಳಂದು ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಬ್ಯಾಂಕಿಗೆ ಭೇಟಿ ನೀಡಿ ಮಾಡುವ ಕೆಲಸವಿದ್ರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ

ಅಕ್ಟೋಬರ್ ತಿಂಗಳ ರಜಾಪಟ್ಟಿ ಹೀಗಿದೆ:
ಅಕ್ಟೋಬರ್ 1: ಭಾನುವಾರ
ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ
ಅಕ್ಟೋಬರ್ 8: ಭಾನುವಾರ
ಅಕ್ಟೋಬರ್ 14: ಎರಡನೇ ಶನಿವಾರ, ಮಹಾಲಯ ಅಮಾವಸ್ಯೆ (ಕರ್ನಾಟಕ, ಒಡಿಶಾ, ತ್ರಿಪುರ ಹಾಗೂ ಪಶ್ಚಿಮ ಬಂಗಾಳ)
ಅಕ್ಟೋಬರ್ 15: ಭಾನುವಾರ
ಅಕ್ಟೋಬರ್ 18: ಕಟಿ ಬಿಹು (ಅಸ್ಸಾಂ)
ಅಕ್ಟೋಬರ್ 19: ಸಂವತ್ಸರಿ ಹಬ್ಬ (ಗುಜರಾತ್)
ಅಕ್ಟೋಬರ್ 21: ದುರ್ಗಾ ಪೂಜೆ (ಮಹಾ ಸಪ್ತಮಿ)
ಅಕ್ಟೋಬರ್ 22: ಮಹಾ ಅಷ್ಟಮಿ
ಅಕ್ಟೋಬರ್ 23: ಮಹಾನವಮಿ /ಆಯುಧಾ ಪೂಜೆ
ಅಕ್ಟೋಬರ್ 24: ದಸರಾ /ವಿಜಯದಶಮಿ/ ದುರ್ಗಾ ಪೂಜೆ
ಅಕ್ಟೋಬರ್ 25: ದುರ್ಗಾ ಪೂಜೆ (ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕ್ ರಜೆ)
ಅಕ್ಟೋಬರ್ 26: ದುರ್ಗಾ ಪೂಜೆ (ಗ್ಯಾಂಗ್ಟಾಕ್, ಜಮ್ಮು, ಶ್ರೀನಗರದಲ್ಲಿ ಬ್ಯಾಂಕ್ ರಜೆ)
ಅಕ್ಟೋಬರ್ 27: ದುರ್ಗಾ ಪೂಜೆ
ಅಕ್ಟೋಬರ್ 28: ನಾಲ್ಕನೇ ಶನಿವಾರ, ಲಕ್ಷ್ಮೀ ಪೂಜೆ (ಕೋಲ್ಕತ್ತಾದಲ್ಲಿ ಬ್ಯಾಂಕ್ ರಜೆ)
ಅಕ್ಟೋಬರ್ 31: ಸರ್ದಾರ್ ವಲ್ಲಭ ಭಾಯಿ ಪಟೇಲ್ ಜನ್ಮದಿನ (ಅಹಮದಾಬಾದ್ ನಲ್ಲಿ ಬ್ಯಾಂಕ್ ರಜೆ)

Gayathri SG

Recent Posts

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಬಸ್‌ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ…

5 mins ago

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

35 mins ago

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

51 mins ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

1 hour ago

ಬಹುಭಾಷೆಯಲ್ಲಿ ಡಬ್ ಆಗಿದೆ ದೊಡ್ಮನೆ ಕುಡಿಯ ‘ಯುವ’ ಸಿನಿಮಾ

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…

1 hour ago

ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ  ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ  ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.

2 hours ago