News Karnataka Kannada
Saturday, April 20 2024
Cricket
ದೆಹಲಿ

ಪ್ರಧಾನಿ ಮೋದಿ ಕಾಲಿಗೆರಗಿದ ಖ್ಯಾತ ಅಮೆರಿಕನ್‌ ಗಾಯಕಿ

American singer falls at PM Modi's feet
Photo Credit : IANS

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಇದೀಗ ಈಜಿಪ್ಟ್‌ನತ್ತ ತೆರಳಿದ್ದಾರೆ. ಅಮೆರಿಕ ಪ್ರವಾಸದ ಸಮಾರೋಪ ಕಾರ್ಯಕ್ರಮದಲ್ಲಿ ವಿದೇಶಿ ಗಾಯಕಿಯೊಬ್ಬರು ಭಾರತದ ರಾಷ್ಟ್ರಗೀತೆ ಜನಗಣ ಮನ ಹಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ.

ಮೋದಿ ಅವರು ತಮ್ಮ ಅಮೇರಿಕಾ ಪ್ರವಾಸದ ವೇಳೆ ರೊನಾಲ್ಡ್ ರೇಗನ್ ಸೆಂಟರ್‌ನಲ್ಲಿ ಎನ್‌ಆರ್‌ಐ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಮೆರಿಕದ ಖ್ಯಾತ ಹಾಲಿವುಡ್ ನಟಿ ಮತ್ತು ಗಾಯಕಿ 38 ವರ್ಷದ ಮೇರಿ ಮಿಲ್‌ಬೆನ್ ಅವರು ಭಾರತೀಯ ರಾಷ್ಟ್ರಗೀತೆ ‘ಜನ ಗಣ ಮನ’ ಗೀತೆಯನ್ನು ಮನಮೋಹಕವಾಗಿ ಹಾಡಿದರು. ಈ ವೇಳೆ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರು ಭಾರತದ ರಾಷ್ಟ್ರಗೀತೆಯನ್ನು ಹಾಡಿದ ನಂತರ ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು.

ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಇದೇ ಕಾರ್ಯಕ್ರಮದಲ್ಲಿ ಮಿಲ್ಬೆನ್ ಓಂ ಜೈ ಜಗದೀಶ್ ಹರೆ ಹಾಡನ್ನೂ ಕೂಡ ಹಾಡಿದ್ದು, ಮೇರಿ ಮಿಲ್ಬೆನ್ ಅವರ ಅದ್ಭುತ ಪ್ರದರ್ಶನವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ನಂತರ ಮೇರಿ ಮಿಲ್ಬೆನ್ ಬಂದು ಪ್ರಧಾನಿ ಮೋದಿಯವರ ಪಾದ ಮುಟ್ಟಿ ನಮಸ್ಕರಿಸಿದರು. ಮೇರಿ ಮಿಲ್ಬೆನ್ ಅವರ ಪಾದಗಳನ್ನು ಮುಟ್ಟುತ್ತಿರುವುದನ್ನು ನೋಡಿದ ಪ್ರಧಾನಿ ಮೋದಿ ಅವರನ್ನು ತಡೆದು ಹಸ್ತಲಾಘವ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು