News Karnataka Kannada
Friday, April 12 2024
Cricket
ದೆಹಲಿ

ಏ. 1ರಿಂದ ಎನ್‌ಪಿಎಸ್ ವಹಿವಾಟಿಗೆ ಆಧಾರ್ ದೃಢೀಕರಣ ಕಡ್ಡಾಯ

ದೇಶಾದ್ಯಂತ ಆನ್‌ಲೈನ್‌ ವಂಚನೆ ಪ್ರಕರಣಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಖಾತೆಗಳ ಲಾಗಿನ್ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿದೆ. ಏಪ್ರಿಲ್ 1ರಂದು ಹೊಸ ನಿಯಮ- ಕಡ್ಡಾಯ ಆಧಾರ್ ಅಥೆಂಟಿಕೇಷನ್‌ ಜಾರಿಗೆ ಬರಲಿದೆ.
Photo Credit : NewsKarnataka

ನವದೆಹಲಿ: ದೇಶಾದ್ಯಂತ ಆನ್‌ಲೈನ್‌ ವಂಚನೆ ಪ್ರಕರಣಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಖಾತೆಗಳ ಲಾಗಿನ್ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿದೆ. ಏಪ್ರಿಲ್ 1ರಂದು ಹೊಸ ನಿಯಮ- ಕಡ್ಡಾಯ ಆಧಾರ್ ಅಥೆಂಟಿಕೇಷನ್‌ ಜಾರಿಗೆ ಬರಲಿದೆ.

ಯಾಕಾಗಿ ಈ ನಿಯಮ?
ಹೆಚ್ಚಿನ ಭದ್ರತೆಯನ್ನು ಜನರಿಗೆ ಒದಗಿಸಲು ಮತ್ತು ಎನ್‌ಪಿಎಸ್‌ ಚಂದಾದಾರರ ಹಿತಾಸಕ್ತಿಗಳನ್ನು ಕಾಪಾಡುವ ದೃಷ್ಟಿಯಿಂದಾಗಿ ಪಿಂಚಣಿ ನಿಯಂತ್ರಣ ಪ್ರಾಧಿಕಾರವು ಹೆಚ್ಚು ಸುರಕ್ಷಿತವಾದ ಈ ವಿಧಾನವನ್ನು ಘೋಷಿಸಿದೆ. ಇದಕ್ಕಾಗಿ ಎರಡು ಅಂಶಗಳ ಆಧಾರ್ ದೃಢೀಕರಣ(ಅಥೆಂಟಿಕೇಷನ್‌) ಅನ್ನು ಪರಿಚಯಿಸಿದ್ದು, ಇನ್ನು ಮುಂದೆ ಪಾಸ್‌ವರ್ಡ್‌ನೊಂದಿಗೆ ಆಧಾರ್ ದೃಢೀಕರಣವನ್ನೂ ಪೂರ್ಣಗೊಳಿಸಬೇಕು. ಆಗ ಮಾತ್ರ ಲಾಗಿನ್ ಯಶಸ್ವಿಯಾಗುತ್ತದೆ. ಇದರಿಂದ ಅನಧಿಕೃತ ಎನ್‌ಪಿಎಸ್‌ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.

ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್‌ ಆಗುವ ಬದಲು ಆಧಾರ್ ಆಧಾರಿತ ಲಾಗಿನ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಪಿಎಫ್‌ಆರ್‌ಡಿಎ ಹೇಳಿದೆ. ಹೊಸ ಭದ್ರತಾ ಕಾರ್ಯವಿಧಾನದ ಅಡಿಯಲ್ಲಿ ಎನ್‌ಪಿಎಸ್‌ ಚಂದಾದಾರರು ಮೊದಲು ತಮ್ಮ ಆಧಾರ್ ಆಧಾರಿತ ಗುರುತನ್ನು ನೀಡಬೇಕು. ನಂತರ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿದ ನಂತರವೇ ಖಾತೆಗಳನ್ನು ಪ್ರವೇಶಿಸಬಹುದು.

ಉಪಯೋಗವೇನು?
ಆಧಾರ್ ಆಧಾರಿತ ಲಾಗಿನ್ ದೃಢೀಕರಣದ ಅನುಷ್ಠಾನವು ಎನ್‌ಪಿಎಸ್‌ ವ್ಯವಸ್ಥೆಯನ್ನು ಇನ್ನಷ್ಟು ಸುರಕ್ಷಿತವಾಗಿಸುತ್ತದೆ. ಮಾರ್ಚ್ 15ರ ಪಿಎಫ್‌ಆರ್‌ಡಿಎ ಪ್ರಕಟಣೆಯು, ಈ ಹೊಸ ಭದ್ರತಾ ವ್ಯವಸ್ಥೆಯು ಹೆಚ್ಚಿನ ಭದ್ರತೆ ಮತ್ತು ವರ್ಧಿತ ರಕ್ಷಣೆಯನ್ನು ನೀಡುತ್ತದೆ. ಜತೆಗೆ ಚಂದಾದಾರರು ಮತ್ತು ಮಧ್ಯಸ್ಥಗಾರರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಎಂದು ತಿಳಿಸಿದೆ.ಪಿಎಫ್‌ಆರ್‌ಡಿಎ ಸೂಚನೆಯ ಪ್ರಕಾರ, ಆಧಾರ್ ಆಧಾರಿತ ಲಾಗಿನ್ ದೃಢೀಕರಣವನ್ನು ಪ್ರಸ್ತುತ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್‌ ಆಧಾರಿತ ಲಾಗಿನ್ ವಿಧಾನದೊಂದಿಗೆ ವಿಲೀನಗೊಳಿಸಲಾಗುವುದು.

ತಪ್ಪು ಪಾಸ್‌ವರ್ಡ್‌ ಬಳಸಿದರೆ ಏನಾಗುತ್ತದೆ?
ಹೊಸ ಆಧಾರ್ ಅಥೆಂಟಿಕೇಷನ್‌ ನಿಯಮದ ಪ್ರಕಾರ, ಬಳಕೆದಾರರು ಸತತ ಐದು ಬಾರಿ ತಪ್ಪು ಪಾಸ್‌ವರ್ಡ್‌ ನಮೂದಿಸಿದರೆ, ಎನ್‌ಪಿಎಸ್‌ ಖಾತೆಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಈ ಖಾತೆಯನ್ನು ಲಾಕ್ ಮಾಡಿದ ನಂತರವೂ ಬಳಕೆದಾರರು ರಹಸ್ಯ ಪ್ರಶ್ನೆಗೆ ಉತ್ತರಿಸುವ ಮೂಲಕ ಪಾಸ್‌ವರ್ಡ್ ಅನ್ನು ಮರುಹೊಂದಿಸಲು ಸಾಧ್ಯವಾಗುತ್ತದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು