News Karnataka Kannada
Monday, April 29 2024
ದೆಹಲಿ

ಒಂದು ಸೆಕೆಂಡ್‌ನ‌ಲ್ಲಿ 150ಎಚ್‌ಡಿ ಸಿನೆಮಾ ಡೌನ್‌ಲೋಡ್‌: ಚೀನಾದಿಂದ ಅತಿವೇಗದ ಇಂಟರ್‌ನೆಟ್‌ ಜಾಲ

150 HD movies download in a second: China becomes world's fastest internet network
Photo Credit : News Kannada

ನವದೆಹಲಿ: ಜಿಯೋ ಇಂಟರ್ನೆಟ್‌ ಭಾರತದಲ್ಲಿ ಕಮಾಲ್‌ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಭಾರತದ ಹಳ್ಳಿ ಹಳ್ಳಿಗಳಲ್ಲಿ ಈಗ ಇಂಟರ್ನೆಟ್‌ ಸೌಲಭ್ಯವನ್ನು ಕಾಣಬಹುದು. ಆದರೆ ಜಗತ್ತಿನ ಹಲವು ದೇಶಗಳಿಗೆ ಹೋಲಿಸಿದರೆ ಭಾರತದ ಇಂಟರ್‌ ನೆಟ್‌ ಗುಣಮಟ್ಟ ಏನೇನೂ ಸಾಲದು ಎಂಬುದು ಸತ್ಯ ವಿಚಾರ. ಭಾರತದ ಇಂಟರ್‌ ನೆಟ್‌ ಜಗತ್ತಿನದ್ದು ಈ ಕಥೆಯಾದರೆ ಜಗತ್ತಿನ ಅತ್ಯಂತ ವೇಗದ ಇಂಟರ್‌ನೆಟ್‌ ಜಾಲವನ್ನು ಚೀನ ಅನಾವರಣಗೊಳಿಸಿದೆ.

ಇದರ ವೇಗ ಎಷ್ಟಿದೆ ಎಂದರೆ ಕೇವಲ ಒಂದು ಸೆಕೆಂಡ್‌ನ‌ಲ್ಲಿ 150 ಎಚ್‌ಡಿ ಸಿನೆಮಾಗಳನ್ನು ಡೌನ್‌ಲೋಡ್‌ ಮಾಡಬಹುದಾಗಿದೆ. ಅಂದರೆ ಪ್ರತೀ ಸೆಕೆಂಡ್‌ಗೆ 1,200 ಜಿಬಿ(1.2 ಟಿಬಿ) ಡೇಟಾ ವರ್ಗಾಯಿಸಬಹುದಾಗಿದೆ. ಸಿಂಘುವಾ ವಿಶ್ವವಿದ್ಯಾನಿಲಯ, ಚೀನ ಮೊಬೈಲ್‌, ಹುವಾಯಿ ಟೆಕ್ನಾಲಜಿಸ್‌ ಹಾಗೂ ಸರ್ನೆಟ್‌ ಕಾರ್ಪೊರೇಶ‌ನ್‌ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಬೀಜಿಂಗ್‌, ವುಹಾನ್‌ ಮತ್ತು ಗುವಾಂಗ್‌ಝೌ ನಗರಗಳ 3,000ಕ್ಕೂ ಹೆಚ್ಚು ಕಿ.ಮೀ. ವಾಪ್ತಿಗೆ ಆಪ್ಟಿಕಲ್‌ ಫೈಬರ್‌ ಕೇಬಲಿಂಗ್‌ ವ್ಯವಸ್ಥೆ ಅಳವಡಿಸಲಾಗಿದೆ.

ಬಹುತೇಕ ಇಂಟರ್‌ನೆಟ್‌ ಜಾಲವು ಪ್ರತೀ ಸೆಕೆಂಡ್‌ಗೆ 100 ಜಿಬಿ ಡೇಟಾ ವರ್ಗಾವಣೆಯ ಸಾಮರ್ಥ್ಯ ಹೊಂದಿದೆ. ಇತ್ತೀಚೆಗೆ ಅಮೆರಿಕ ಪರಿಚಯಿಸಿದ ಐದನೇ ಪೀಳಿಗೆಯ ಇಂಟ ರ್‌ನೆಟ್‌ 2 ಪ್ರತೀ ಸೆಕೆಂಡ್‌ಗೆ 400 ಜಿಬಿ ಡೇಟಾ ವರ್ಗಾವಣೆಯ ಸಾಮರ್ಥ್ಯ ಹೊಂದಿದೆ. ಆದರೆ ಚೀನದ ಇಂಟರ್‌ನೆಟ್‌ ಕಂಪೆನಿಗಳು ಗಮನಾರ್ಹವಾಗಿ ಪ್ರತೀ ಸೆಕೆಂಡ್‌ಗೆ 1,200 ಜಿಬಿ ಡೇಟಾ ವರ್ಗಾವಣೆಯ ಸಾಮರ್ಥ್ಯ ಹೊಂದಿರುವ ಜಾಲವನ್ನು ಅಭಿವೃದ್ಧಿಪಡಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು