News Karnataka Kannada
Wednesday, May 01 2024
ದೆಹಲಿ

12-17 ವಯೋಮಾನದವರಲ್ಲಿ ʼಕೊವೊವಾಕ್ಸ್ ಲಸಿಕೆʼ ತುರ್ತು ಬಳಕೆಗೆ ʼತಜ್ಞರ ಸಮಿತಿʼ ಶಿಫಾರಸು

Vaccine Children
Photo Credit :

ನವದೆಹಲಿ : 12-17 ವಯೋಮಾನದವರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವೊವಾಕ್ಸ್  ಕೋವಿಡ್-19 ಲಸಿಕೆಯ ತುರ್ತು ಬಳಕೆಯ ದೃಢೀಕರಣವನ್ನ ನೀಡಲು ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ನಿರ್ದೇಶಕ-ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್, ಫೆಬ್ರವರಿ 21ರಂದು ಡಿಸಿಜಿಐಗೆ ಅರ್ಜಿ ಸಲ್ಲಿಸಿದ್ದು, 12 ರಿಂದ 17 ವರ್ಷ ವಯಸ್ಸಿನವರಿಗೆ ಕೊವೊವಾಕ್ಸ್ʼಗಾಗಿ ಇಯುಎ ಕೋರಿದ್ದಾರೆ.

ಡಿಸೆಂಬರ್ 28ರಂದು ವಯಸ್ಕರಲ್ಲಿ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ಭಾರತದ ಔಷಧ ನಿಯಂತ್ರಕ ಜನರಲ್  ಕೊವೊವಾಕ್ಸ್ʼಗೆ ಅನುಮೋದನೆ ನೀಡಿತ್ತು. ಇದನ್ನು ಇನ್ನೂ ದೇಶದ ಲಸಿಕೆ ಚಾಲನೆಯಲ್ಲಿ ಸೇರಿಸಲಾಗಿಲ್ಲ.

ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯ (CDSCO) ಕೋವಿಡ್-19 ರ ವಿಷಯ ತಜ್ಞರ ಸಮಿತಿಯು ಶುಕ್ರವಾರ ಎಸ್ ಐಐ ಅರ್ಜಿಯ ಬಗ್ಗೆ ಚರ್ಚಿಸಿತು ಮತ್ತು ಕೊವೊವಾಕ್ಸ್ʼಗೆ ಇಯುಎ ನೀಡಲು ಶಿಫಾರಸು ಮಾಡಿದೆ. ಈ ಶಿಫಾರಸನ್ನು ಅನುಮೋದನೆಗಾಗಿ ಡಿಸಿಜಿಐಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು