Categories: ದೆಹಲಿ

ವಾಯು ಮಾಲಿನ್ಯ ಹೆಚ್ಚಳ ವಾರಾಂತ್ಯದ ಲಾಕ್ ಡೌನ್ ಜಾರಿಗೊಳಿಸಲು ಸಿದ್ಧ: ಸುಪ್ರೀಂ ಆದೇಶಕ್ಕೆ ದೆಹಲಿ ಸರ್ಕಾರ

ನವದೆಹಲಿ:  ಸುಪ್ರೀಂಕೋರ್ಟ್ ಆದೇಶದಂತೆ ರಾಷ್ಟ್ರರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚಳವಾದ ಹಿನ್ನೆಲೆಯಲ್ಲಿ  ವಾರಾಂತ್ಯದ ಕರ್ಫ್ಯೂ ಮತ್ತು ಒಂದು ವಾರಗಳ ಕಾಲ ವರ್ಕ್ ಫ್ರಂ ಹೋಮ್ ಸಲಹೆಯನ್ನು ಜಾರಿಗೊಳಿಸಲು ಬದ್ಧವಾಗಿರುವುದಾಗಿ ದೆಹಲಿ ಸರ್ಕಾರ ಮಂಗಳವಾರ ತುರ್ತು ಸಭೆಯಲ್ಲಿ ತಿಳಿಸಿದೆ.

ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ವರ್ಕ್ ಫ್ರಂ ಹೋಮ್ ಸಲಹೆ ಜಾರಿಗೊಳಿಸಲು ಸಿದ್ಧತೆ ನಡೆಸಿರುವುದಾಗಿ ಹೇಳಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ತುರ್ತು ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ವಿವರಿಸಿದೆ.

ರಾಜಧಾನಿಯಲ್ಲಿನ ಕಟ್ಟಡ ನಿರ್ಮಾಣ ಕೆಲಸ ಮತ್ತು ಕೈಗಾರಿಕಾ ಚಟುವಟಿಕೆ ಕೂಡಾ ಸ್ಥಗಿತಗೊಳಿಸುವಂತೆ ದೆಹಲಿ ಸರ್ಕಾರ ಶಿಫಾರಸು ಮಾಡಿದೆ. ಹದಗೆಡುತ್ತಿರುವ ವಾಯುಮಾಲಿನ್ಯ ತಡೆಗಟ್ಟಲು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕೆಂದು ಸುಪ್ರೀಂಕೋರ್ಟ್ ತಿಳಿಸಿದೆ.

ನಾವು ಪ್ರಸ್ತಾಪಿತ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲು ಸಿದ್ಧರಾಗಿದ್ದೇವೆ. ಕೋರ್ಟ್ ನಿರ್ದೇಶನದಂತೆ ನಾವೀಗ ಕಾರ್ಯನಿರ್ವಹಿಸುತ್ತಿರುವುದಾಗಿ ದೆಹಲಿ ಸಚಿವ ಗೋಪಾಲ್ ರಾಯ್ ತಿಳಿಸಿದ್ದಾರೆ.

 

 

Swathi MG

Recent Posts

ಪತ್ನಿಯ ಗುಪ್ತಾಂಗವನ್ನು ಮೊಳೆಗಳಿಂದ ವಿರೂಪಗೊಳಿಸಿ,ಬೀಗ ಹಾಕಿದ ಕ್ರೂರ ಪತಿ

ಪುಣೆಯಲ್ಲಿ ಭೀಕರ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿಯ ಜನನಾಂಗವನ್ನು ಕಬ್ಬಿಣದ ಮೊಳೆಗಳಿಂದ ವಿರೂಪಗೊಳಿಸಿದ್ದಾನೆ ಮತ್ತು ಆಕೆಯ ಮೇಲೆ ಸಂದೇಹ ವ್ಯಕ್ತಪಡಿಸಿದ…

15 mins ago

ಬೀದರ್: ಕಾರ್ಮಿಕರ ಮಕ್ಕಳಿಗೆ ‘ಕೂಸಿನ ಮನೆ’ ಆಸರೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಮಹಿಳಾ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ಆಸರೆಯಾಗಿದೆ.

22 mins ago

ಬಿಜೆಪಿ ಮುಖಂಡ ಅರೆಸ್ಟ್: ರಾತ್ರೋರಾತ್ರಿ ಠಾಣೆಯಲ್ಲಿ ಧರಣಿ ನಡೆಸಿದ ಶಾಸಕ ಹರೀಶ್ ಪೂಂಜಾ

ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್…

40 mins ago

ತಾಯಿ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

ತಾಯಿ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದ ನೌಬತ್‌ಪುರ ಪ್ರದೇಶದಲ್ಲಿ ಚಲಿಸುತ್ತಿದ್ದ…

45 mins ago

ರಘುಪತಿ ಭಟ್ ಆರೋಪಕ್ಕೆ ಡಾ. ಧನಂಜಯ ಸರ್ಜಿ ತಿರುಗೇಟು

ಶಿವಮೊಗ್ಗ ಹರ್ಷಾ ಹತ್ಯೆ ವೇಳೆ ಕಮ್ಯುನಿಸ್ಟರ ಜೊತೆ ಸರ್ಜಿ ಪೌಂಡೇಷನ್ ಶಾಂತಿ ನಡಿಗೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನೈರುತ್ಯ ಪದವೀಧರ…

60 mins ago

ಕುಡಿಯುವ ನೀರಿನ ಸಮಸ್ಯೆ: ಕಲುಷಿತ ನೀರು ಸೇವಿಸಿ 114 ಮಂದಿಗೆ ಕಾಲರಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನಸಭೆ ಕ್ಷೇತ್ರವಾದ ವರುಣದ ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಅಲ್ಲಿನ ಜನ…

1 hour ago