Categories: ದೆಹಲಿ

ವಾಯು ಮಾಲಿನ್ಯ ಹಿನ್ನೆಲೆ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ವಾರ್ನಿಂಗ್

ನವದೆಹಲಿ(ಡಿ.02) :  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗುತ್ತಿದೆ. ಭಾಗಶಃ ಲಾಕ್‌ಡೌನ್, ಕಟ್ಟಡ ಕಾಮಗಾರಿ ಸ್ಥಗಿತ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡರೂ ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ.

ಹಲವರಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ವಾರ್ನಿಂಗ್ ನೀಡಿದೆ. ಇದೀಗ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗರಂ ಆಗಿದೆ. ನಿಮ್ಮಿಂದ ಸರ್ಕಾರ ನಡೆಸಲು ಆಗದಿದ್ದರೆ ನಾವು ಹೊಸ ಅಧಿಕಾರಿಯನ್ನು ನೇಮಕ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್ ಅರವಿಂದ್ ಕೇಜ್ರಿವಾಲ್ ದೆಹಲಿ ಸರ್ಕಾರಕ್ಕೆ ಚಾಟಿ ಬೀಸಿದೆ.

ದೆಹಲಿ ವಾಯು ಮಾಲಿನ್ಯ ಕುರಿತು ಅರ್ಜಿ ವಿಚಾರಣೆ ನಡೆಸಿದ ಚೀಫ್ ಜಸ್ಟೀಸ್ ಎನ್ ವಿ ರಮಣ, ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದುವರೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ. ಸರ್ಕಾರ ಇದಕ್ಕೆ ಪರಿಹಾರವನ್ನೂ ಸೂಚಿಸಿಲ್ಲ. ನಾಳೆ(ಡಿ.03) ದೆಹಲಿ ವಾಯು ಮಾಲಿನ್ಯ ಅರ್ಜಿ ವಿಚಾರಣೆ ನಡೆಸುತ್ತೇವೆ. ಇದರೊಳಗಡೆ ದೆಹಲಿ ಸರ್ಕಾರ ಮಾಲಿನ್ಯ ನಿಯಂತ್ರಣಕ್ಕೆ ಪರಿಹಾರ ಸೂಚಿಸಬೇಕು. ನಿಮ್ಮ ಕೈಯಿಂದ ಸಾಧ್ಯವಾಗುತ್ತಿಲ್ಲ ಎಂದಾದರೂ ಹೇಳಿ. ಅಥವಾ ನಿಮಗೆ ಆದೇಶ ನೀಡಿದರೆ ಮಾತ್ರ ಕೆಲಸ ಮಾಡಲು ಸಾಧ್ಯ ಎಂದಾದರೆ ಕೋರ್ಟ್ ಆದೇಶ ನೀಡಲು ಸಿದ್ಧ. ಇದ್ಯಾವುದು ಆಗದಿದ್ದರೆ ಹೇಳಿ, ನಿಮ್ಮ ಸರ್ಕಾರ ನಡೆಸಲು ಹೊಸ ಅಧಿಕಾರಿಯನ್ನು ನೇಮಕ ಮಾಡುತ್ತೇವೆ ಜಸ್ಟೀಸ್ ಎನ್ ವಿ ರಮಣ ದೆಹಲಿ ಸರ್ಕಾರಕ್ಕೆ ವಾರ್ನಿಂಗ್ ನೀಡಿದ್ದಾರೆ.

ಕಳದ ವಿಚಾರಣೆ ಸಂದರ್ಭದಲ್ಲಿ ದೆಹಲಿ ಸರ್ಕಾರ ಹಲವು ಕ್ರಮಗನ್ನು ಕೈಗೊಂಡಿರುವುದಾಗಿ ಹೇಳಿದೆ. ಇದರಲ್ಲಿ ಕಟ್ಟಡ ಕಾಮಗಾರಿ ಸ್ಥಗಿತ, ಶಾಲೆ ಕಾಲೇಜು ಬಂದ್, ವರ್ಕ್ ಪ್ರಮ್ ಫೋಮ್ ಸೇರಿದಂತೆ ಕೆಲ ನಿರ್ಧಾರಗಳನ್ನು ತಿಳಿಸಿದೆ. ಆದರೆ ಈಗ ಮಕ್ಕಳು ಕೆಟ್ಟ ಮಾಲಿನ್ಯದ ನಡುವೆ ಶಾಲೆಗೆ ತೆರಳುತ್ತಿದ್ದಾರೆ. ದೊಡ್ಡವರು ಮನೆಯಲ್ಲಿ ಕೂತು ಕೆಲಸ ಮಾಡುತ್ತಿದ್ದಾರೆ ಎಂದು ಜಸ್ಟೀಸ್ ಡಿವೈ ಚಂದ್ರಚೂಡ್ ಹಾಗೂ ಜಸ್ಟೀಸ್ ಸೂರ್ಯಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಸರ್ಕಾರದ ಪರ ಅಭಿಷೇಕ್ ಮನು ಸಿಂಗ್ವಿ ವಾದ ಮಂಡಿಸಿದ್ದಾರೆ. ಶಾಲೆ ಮುಚ್ಚುವುದರಿಂದ ಮಕ್ಕಳ ಕಲಿಕೆಗೆ ತೊಡಕಾಗುತ್ತಿದೆ. ಆಫ್ ಲೈನ್ ಹಾಗೂ ಆನ್‌ಲೈನ್ ಕ್ಲಾಸ್ ತೆರೆಯಲಾಗಿದೆ. ಪೋಷಕರು ಯಾವುದನ್ನು ಬೇಕಾದರೂ ಆರಿಸಬಹುದು ಎಂದು ಸಿಂಗ್ವಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕೋರ್ಟ್ ಪೀಠ. ಕಳೆದೆರಡು ವರ್ಷದಿಂದ ಮನೆಯಲ್ಲಿರುವ ಮಕ್ಕಳಿಗೆ ನೀವು ಬಂದರೆ ಬರಬಹುದು ಎಂದರೆ ಎಲ್ಲಾ ಮಕ್ಕಳು ಶಾಲೆಗೆ ಬರುತ್ತಾರೆ. ಇದು ಸಮಂಜಸ ವಾದವಲ್ಲ ಎಂದು ಕೋರ್ಟ್ ಹೇಳಿದೆ.

ದೆಹಲಿ ಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಕೀಲ ಅಭಿಷೇಕ್ ಮನುಸಿಂಗ್ವಿ ಕೋರ್ಟ್‌ಗೆ ವಿವರಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕೋರ್ಟ್, ನಾವು ವಿರೋಧ ಪಕ್ಷದವರಲ್ಲ. ನಮ್ಮನ್ನು ಮೆಚ್ಚಿಸುವ ಅಗತ್ಯವೂ ಇಲ್ಲ. ನೀವು ತೆಗೆದುಕೊಂಡಿರುವ ನಿರ್ಧಾರಗಳಲ್ಲಿ ಯಾವುದೇ ಜಾರಿಯಾಗಿದೆ. ಇದರಿಂದ ಮಾಲಿನ್ಯ ನಿಯಂತ್ರಣವಾಗಿದೆಯಾ? ನಮ್ಮ ಆದೇಶ ಪಾಲನೆಯಾಗಿದೆಯಾ ಇದನ್ನು ಹೇಳಿ ಎಂದು ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರ ಚಾಟಿ ಬೀಸಿದೆ.

ಇದೇ ವೇಳೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ರಾಷ್ಟ್ರ ರಾಜಧಾನಿಯಲ್ಲಿರುವ ಕೇಂದ್ರ ವಾಯು ಗುಣಮಟ್ಟ ಆಯೋಗ ಏನು ಮಾಡುತ್ತಿದೆ ಎಂದು ಸುಪ್ರೀಂ ಪ್ರಶ್ನಿಸಿದೆ. ಈ ಆಯೋಗಕಕ್ಕೆ ಆದೇಶ ನೀಡುವ ಯಾವುದೇ ಅಧಿಕಾರವಿಲ್ಲ. ಕೇವಲ ದಂಡ ವಸೂಲಿ ಅಧಿಕಾರ ಮಾತ್ರ ಇದೆ ಎಂದು ಪೀಠ ಅಭಿಪ್ರಾಯ ಪಟ್ಟಿದೆ.

Gayathri SG

Recent Posts

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು: ಪ್ರಹ್ಲಾದ್ ಜೋಶಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ, ಸಂಪೂರ್ಣ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ…

20 mins ago

ಬಿರುಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಅರಳಿ ಮರ: ನಾಲ್ಕು ಮನೆಗಳು ಜಖಂ

ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ನಾಲ್ಕು ಮನೆಗಳ ಮೇಲೆ ಉರುಳಿ ಬಿದ್ದು ಮನೆಗಳು…

34 mins ago

ಕೇಜ್ರಿವಾಲ್‌ಗೆ ಷರತ್ತು ವಿಧಿಸಿ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…

57 mins ago

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

1 hour ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

2 hours ago

ದಾಭೋಲ್ಕರ ಹತ್ಯೆ ಕೇಸ್ ನಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನ ಸಂಸ್ಥೆ ಸಂತಸ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…

2 hours ago