Categories: ದೆಹಲಿ

ಲಸಿಕಾ ಅಭಿಯಾನವು ಸರಾಗವಾಗಿ, ಕ್ರಮಬದ್ಧವಾಗಿ ಮತ್ತು ಪಾರದರ್ಶಕವಾಗಿ ನಡೆಯುವಲ್ಲಿ ಕೋವಿನ್​ ಆ್ಯಪ್​ನ ಪಾತ್ರ ಶ್ಲಾಘನೀಯ

ನವದೆಹಲಿ : ಭಾರತದ ಕರೊನಾ ಲಸಿಕಾ ಅಭಿಯಾನ ಹಲವು ಮೈಲಿಗಲ್ಲುಗಳೊಂದಿಗೆ ಅಗಾಧ ಯಶಸ್ಸು ಕಾಣುತ್ತಾ ಬಂದಿದೆ. ಇದೀಗ 100 ಕೋಟಿ ಲಸಿಕೆ ಡೋಸ್​ಗಳನ್ನು ನೀಡಿರುವ ಜಗತ್ತಿನ ಎರಡನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಈ ಸಂದರ್ಭದಲ್ಲಿ ದೇಶದ ಈ ಸಾಧನೆಯಲ್ಲಿ ಲಸಿಕೀಕರಣದ ಪ್ರಕ್ರಿಯೆಯನ್ನು ನಿರ್ವಹಿಸಲು ಬಳಸುತ್ತಿರುವ ಕೋವಿನ್​ ಆ್ಯಪ್​ನ ಪಾತ್ರ ಶ್ಲಾಘನೀಯವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್​ಎಚ್​ಎ)ದ ಸಿಇಒ ಹಾಗೂ ಕೋವಿನ್ ಮುಖ್ಯಸ್ಥ ಡಾ. ಆರ್​.ಎಸ್​.ಶರ್ಮಾ ಹೇಳಿದ್ದಾರೆ.

ಲಸಿಕಾ ಅಭಿಯಾನವು ಸರಾಗವಾಗಿ, ಕ್ರಮಬದ್ಧವಾಗಿ ಮತ್ತು ಪಾರದರ್ಶಕವಾಗಿ ನಡೆಯುವಲ್ಲಿ ಭಾರತದಲ್ಲೇ ಡಿಸೈನ್​ ಮಾಡಲಾದ ಕೋವಿನ್​ ಆ್ಯಪ್​ ಮಹತ್ತರ ಪಾತ್ರ ವಹಿಸಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಖಾಸಗಿ ಕ್ಷೇತ್ರದ ಸಹಭಾಗಿತ್ವದಲ್ಲಿ ಪ್ರತಿಯೊಂದು ಡೋಸ್​ ಲಸಿಕೆಯನ್ನೂ ಟ್ರ್ಯಾಕ್​ ಮಾಡುವಲ್ಲಿ ಕೋವಿನ್​ ವೇದಿಕೆ ಅತ್ಯಂತ ಮುಖ್ಯ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.

ಜಗತ್ತಿನಲ್ಲಿ ಒಂಭತ್ತು ತಿಂಗಳ ಕಡಿಮೆ ಅವಧಿಯಲ್ಲಿ ಇಷ್ಟು ವೇಗವಾಗಿ ಸಾಧನೆ ಮಾಡಿದ ಬೇರೊಂದು ಡಿಜಿಟಲ್ ವೇದಿಕೆ ಇಲ್ಲ. ಲಸಿಕೆಗೆ ಅಪಾಯಿಂಟ್​ಮೆಂಟ್​ಗಳನ್ನು ನೀಡುವುದರಿಂದ ಲಸಿಕೆ ಪ್ರಮಾಣ ಪತ್ರ ನೀಡುವವರೆಗೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಕೋವಿನ್​ ಆಯಪ್​ ಬಗ್ಗೆ ವಿವಿಧ ರಾಷ್ಟ್ರಗಳು ಆಸಕ್ತಿ ವ್ಯಕ್ತಪಡಿಸಿದ್ದರಿಂದ ಇದನ್ನು ಜುಲೈ 5 ರಂದು 100 ದೇಶಗಳು ಭಾಗವಹಿಸಿದ ಜಾಗತಿಕ ಸಮ್ಮೇಳನದಲ್ಲಿ ‘ಓಪನ್​ ಸೋರ್ಸ್​’ ಮಾಡಿ ದಾಖಲೀಕರಿಸಲಾಗಿದೆ ಎಂದು ಡಾ.ಶರ್ಮಾ ತಿಳಿಸಿದ್ದಾರೆ.

Gayathri SG

Recent Posts

ಚಿಕನ್ ಶವರ್ಮಾ ವಿಷ ಏಕಾಗ್ತಿದೆ ಗೊತ್ತ; ಇದನ್ನೊಮ್ಮೆ ಓದಿ

ಚಿಕನ್ ಶವರ್ಮಾ ತಿಂದ 19 ವರ್ಷದ ತರುಣನೋರ್ವ ಸಾವಿಗೀಡಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕೆಟ್ಟು ಹೋದ ಕೋಳಿ ಮಾಂಸವನ್ನು ಶವರ್ಮಾ…

13 mins ago

ಕುಡಿಯುವ ನೀರಿನ ಸಮಸ್ಯೆಯನ್ನು ತಪ್ಪಿಸಲು ಪ್ರಾಚೀನ ಕೆರೆಗಳಿಗೆ ಹೊಸರೂಪ

ಕುಡಿಯುವ ನೀರಿನ ಸಮಸ್ಯೆಯನ್ನು ತಪ್ಪಿಸಲು ಪುತ್ತೂರು ಉಪವಿಭಾಗಕ್ಕೆ ಸಂಬಂಧಿಸಿದ ಪ್ರಾಚೀನ ಕೆರೆಗಳಿಗೆ ಹೊಸರೂಪ ನೀಡಲು ಇಲಾಖೆ ಮುಂದಾಗಿದ್ದು ಪುತ್ತೂರು ಸಹಾಯಕ…

19 mins ago

ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಚಿಕನ್​​ ಶವರ್ಮಾ ತಿಂದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, 19 ವರ್ಷದ ಯುವಕನೊಬ್ಬ ಚಿಕನ್ ಶವರ್ಮಾ…

45 mins ago

ಮೇ 11ರಿಂದ 13ರವರೆಗೆ ವಾಮಂಜೂರಿನಲ್ಲಿ ಕೃಷಿ ಮೇಳ, ದಶಮ ಸಂಭ್ರಮ

ಇದೇ ಮೇ 11ರಿಂದ 13ರವರೆಗೆ ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗ ಜರುಗಲಿದೆ ಎಂದು ಗುರುಪುರ ವ್ಯವಸಾಯ ಸೇವಾ ಸಹಕಾರಿ…

47 mins ago

ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂನಿಂದ ವಾಟ್ಸಾಪ್ ನಂಬರ್ ಬಿಡುಗಡೆ

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂ ಎಂಟು ಜಿಲ್ಲೆಗಳಿಗೆ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದ್ದು, ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಯ ಜನರು…

1 hour ago

ಎಸ್‌ಎಸ್‌ಎಲ್‌ಸಿ 2,3ನೇ ಪರೀಕ್ಷೆ ಬರೆಯುವವರಿಗೆ ಸ್ಪೆಷಲ್‌ ಕ್ಲಾಸ್‌ ಯೋಜನೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

1 hour ago