ಶಿಲ್ಲಾಂಗ್: ಮೇಘಾಲಯದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸಿದ್ದು, ಶಿಲ್ಲಾಂಗ್ -ಡಾವ್ಕಿ ಹೆದ್ದಾರಿಯು ತೀವ್ರವಾಗಿ ಹಾಳಾಗಿದೆ ,ಐದು ಕಡೆ ಭೂಕುಸಿತಗಳು ಸಂಭವಿಸಿರುವ ವರದಿಯಾಗಿದೆ.
ಕಳೆದ ಸೋಮವಾರ, ಪೂರ್ವ ಖಾಸಿ ಹಿಲ್ಸ ಜಿಲ್ಲಾಯ ಮಾವ್ಕಿನ್ರೂ ಬ್ಲಾಕ್ನ ಮಾವ್ಲಾತ್ ಪ್ರದೇಶದಲ್ಲಿ ಮಳೆಯಿಂದ ಉಂಟಾದ ಭಾರಿ ಭೂಕುಸಿತದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ.
ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಕನಿಷ್ಠ 22ವಿದ್ಯಾರ್ಥಿಗಳು ತಮ್ಮ (ಎಸïಎಸïಎಲ್ ಸಿ)ಬೋರ್ಡ್ ಪರೀಕ್ಷೆಗಳನ್ನು ಕಳೆದುಕೊಂಡಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ರಸ್ತೆ ದುರಸ್ಥಿಗೆ ಮುಂದಾಗಿದೆ ತುರ್ತು ಸೇವೆ ಸಬ್ಬಂಗಳನ್ನು ಕಟ್ಟೆಚ್ಚರದಿಂದಿರುವಂತೆ ಸೊಚಿಸಲಾಗಿದೆ.