Categories: ದೆಹಲಿ

ಮತ್ತೊಮ್ಮೆ ತುಟ್ಟಿಭತ್ಯೆ ಹೆಚ್ಚಳಕ್ಕೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ, ಡಿ.13 : ತುಟ್ಟಿಭತ್ಯೆ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಏಳನೆ ವೇತನ ಆಯೋಗವು 2022ರ ಹೊಸ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಮತ್ತೊಮ್ಮೆ ಹೆಚ್ಚಿಸಲು ಮುಂದಾಗಿದೆ.

ಮೂಲಗಳ ಪ್ರಕಾರ, 2022ರ ತುಟ್ಟಿಭತ್ಯೆಯಲ್ಲಿ ಶೇ.3ರಷ್ಟನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸರ್ಕಾರವು ಸಾಮಾನ್ಯವಾಗಿ ಜನವರಿ ಮತ್ತು ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳ ಮಾಡುತ್ತದೆ. ತುಟ್ಟಿಭತ್ಯೆ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡಿದ ಸರ್ಕಾರಿ ನೌಕರರು ಮತ್ತು ನಿವೃತ್ತರಿಗೆ ಸರ್ಕಾರವು ಪಾವತಿಸುವ ಜೀವನ ವೆಚ್ಚದ ಹೊಂದಾಣಿಕೆ ಭತ್ಯೆಯಾಗಿದೆ.

ಸಾರ್ವಜನಿಕ ವಲಯದ ಉದ್ಯೋಗಿಗಳ ಒಟ್ಟು ಆದಾಯದ ಗಮನಾರ್ಹ ಭಾಗವನ್ನು ಡಿಎ ಹೊಂದಿದೆ. ಹಣದುಬ್ಬರದ ಪರಿಣಾಮಗಳನ್ನು ನಿಭಾಯಿಸಲು ಸಹಾಯ ಮಾಡುವ ಸಂಬಂಧ ಇದನ್ನು ಹೆಚ್ಚಾಗಿ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಕೇಂದ್ರ ಸರ್ಕಾರದಲ್ಲಿ ನೌಕರರು ಪ್ರಸ್ತುತ ಶೇ.30ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭತ್ಯೆಯನ್ನು ತಿಂಗಳುಗಳ ಕಾಲ ನಿಲ್ಲಿಸಿದ ನಂತರ ಇತ್ತೀಚಿನ ಹೆಚ್ಚಳವನ್ನು ಜುಲೈ ಮತ್ತು ಅಕ್ಟೋಬರ್ 2021ರಲ್ಲಿ ಮಾಡಲಾಯಿತು.

ಸಾಂಕ್ರಾಮಿಕ ರೋಗದ ಕಾರಣದಿಂದಾಗಿ 2020ರ ಜನವರಿ ಮತ್ತು ಜುಲೈ ಹಾಗೂ 2021ರ ಜನವರಿ ಮತ್ತು ಜುಲೈನಲ್ಲಿ ಬರಬೇಕಾಗಿದ್ದ ಡಿಎ ಮತ್ತು ಡಿಆರ್‍ನ ಮೂರು ಹೆಚ್ಚುವರಿ ಕಂತುಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು. ಅಕ್ಟೋಬರ್‍ನಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ತುಟ್ಟಿಭತ್ಯೆ ಪರಿಹಾರವನ್ನು ಏರಿಸಿತ್ತು. ಇದರಿಂದ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ನಿವೃತ್ತ ನೌಕರರಿಗೆ ಲಾಭವಾಗಲಿದೆ.

Gayathri SG

Recent Posts

ಟಿ20 ವಿಶ್ವಕಪ್​​: ಟೀಮ್​ ಇಂಡಿಯಾದಲ್ಲಿ ದಿನೇಶ್​ ಕಾರ್ತಿಕ್​ಗೆ ಇಲ್ಲ ಸ್ಥಾನ !

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಜೂನ್‌ ತಿಂಗಳಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯೋ ಚುಟುಕು…

4 mins ago

ಬಾವಿಗೆ ಇಳಿದ ಇಬ್ಬರು ಸ್ನೇಹಿತರ ದಾರುಣ ಸಾವು

ವಿಜಯಪುರ ಜಿಲ್ಲೆಯಲ್ಲಿ ಇಂದು 40 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಸುಡುತ್ತಿರುವ ಬಿಸಿಲಿನ ಧಗೆ ತಡೆಯಲಾರದೆ ಇಬ್ಬರು ಸ್ನೇಹಿತರು ಬಾವಿಗಿಳಿದು ನೀರಲ್ಲಿ…

13 mins ago

ಬ್ರೈನ್‌ ಸ್ಟ್ರೋಕ್‌ ಗೆ ಒಳಗಾಗಿರುವ ಅಕ್ಷತ್‌ ಕುಲಾಲ್‌ ಚಿಕಿತ್ಸೆ ಗೆ ನೆರವಾಗೋಣ

ಬ್ರೈನ್‌ ಸ್ಟ್ರೋಕ್‌ ಗೆ ಒಳಗಾಗಿರುವ ಯುವನೋರ್ವನಿಗೆ ಸಹಾಯದ ಹಸ್ತ ಬೇಕಾಗಿದೆ. ಹೌದು. . ಮಿತ್ತೂರಿನ ಯುವಕ ಅಕ್ಷತ್‌ ಕುಲಾಲ್‌ ಎಂಬಾತ…

16 mins ago

ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯರ ಆಕ್ರೋಶ : ಬ್ರಹತ್ ಪ್ರತಿಭಟನೆ

ಪ್ರಜ್ವಲ್ ರೇವಣ್ಣ ವಿರುದ್ಧ ಹುಬ್ಬಳ್ಳಿ ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ದೀಪಾ ನಾಗರಾಜ ಗೌರಿ ನೇತೃತ್ವದಲ್ಲಿ ಬಿಜೆಪಿ ವಿರುದ್ಧ…

30 mins ago

ಪ್ರಜ್ವಲ್‌ ಅಶ್ಲೀಲ ವಿಡಿಯೋ ಕೇಸ್ : ಹೆಚ್‌ಡಿಕೆ ಕಾರಿಗೆ ಕೈ ಕಾರ್ಯಕರ್ತರ ಮುತ್ತಿಗೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಕೋರ್ ಕಮಿಟಿ ಮಾಡಲು ಹುಬ್ಬಳ್ಳಿಗೆ ಬಂದಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗಮಸಿದ ಸಂದರ್ಭದಲ್ಲಿ, ಖಾಸಗಿ…

39 mins ago

ನೇಹಾ ಹಿರೇಮಠ ಹತ್ಯೆ ಪ್ರಕರಣ: ‘ಆರೋಪಿ ಫಯಜ್’ಗೆ ನ್ಯಾಯಾಂಗ ಬಂಧನ

ಹುಬ್ಬಳ್ಳಿಯ ಕೆಎಎಲ್​ಇ ವಿವಿ ಆವರಣದಲ್ಲಿ ನಡೆದಿದ್ದ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ಸಿಐಡಿ ಕಸ್ಟಡಿ ಅಂತ್ಯವಾಗಿದ್ದು,​ ಈ…

46 mins ago