Categories: ದೆಹಲಿ

ಭಾರತೀಯ ಆರ್ಥಿಕತೆ ಮೇಲೆ ಕೊರೋನಾ ಪರಿಣಾಮವು ಬಿದ್ದಿದ್ದಕ್ಕಿಂತ ಹೆಚ್ಚು ಪ್ರಬಲವಾಗಿ ಅದರಿಂದ ಚೇತರಿಕೆ ಕಂಡಿದೆ : ನರೇಂದ್ರ ಮೋದಿ

ಭಾರತೀಯ ಆರ್ಥಿಕತೆ ಮೇಲೆ ಕೊರೋನಾ ಪರಿಣಾಮವು ಬಿದ್ದಿದ್ದಕ್ಕಿಂತ ಹೆಚ್ಚು ಪ್ರಬಲವಾಗಿ ಅದರಿಂದ ಚೇತರಿಕೆ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ.

‘ಸರ್ಧಾರ್‌ಧಾಮ್‌ ಭವನ’ವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊವಿಡ್-19ನಿಂದ ಭಾರತವೂ ಸೇರಿದಂತೆ ಇಡೀ ವಿಶ್ವದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಆದರೆ ಕೊರೋನಾದಿಂದ ನಿಂತು ಹೋಗಿದ್ದಕ್ಕಿಂತ ಹೆಚ್ಚು ಪ್ರಬಲವಾಗಿ ಆರ್ಥಿಕತೆಯು ಚೇತರಿಕೆಯನ್ನು ಕಂಡಿದೆ ಎಂದು ಹೇಳಿದ್ದಾರೆ.

ವಿಶ್ವದ ಪ್ರಬಲ ಆರ್ಥಿಕತೆಗಳು ತಮ್ಮನ್ನು ತಾವು ಉಳಿಸಿಕೊಳ್ಳುವುದರಲ್ಲಿ ತೊಡಗಿಕೊಂಡಿದ್ದಾಗ ನಾವು ಸುಧಾರಣೆಗಳನ್ನು ಮಾಡಿದ್ದೇವೆ. ಜಾಗತಿಕ ಪೂರೈಕೆ ಜಾಲವು ಅಸ್ತವ್ಯಸ್ತವಾದಾಗ ಭಾರತದ ಪರವಾಗಿ ಹೊಸ ಅವಕಾಶಗಳು ಸೃಷ್ಟಿಯಾಗುವ ಸಲುವಾಗಿ ನಾವು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್​ಐ) ಪರಿಚಯಿಸಿದೆವು ಎಂದು ಸೇರಿಸಿದ್ದಾರೆ.ಈ ಯೋಜನೆಯನ್ನು ಈಗ ಟೆಕ್ಸ್​ಟೈಲ್ ವಲಯಕ್ಕೂ ವಿಸ್ತರಿಸಿದ್ದೇವೆ. ಸೂರತ್​ನಂಥ ನಗರವು ಇದರಿಂದ ಗರಿಷ್ಠ ಮಟ್ಟದ ಅನುಕೂಲ ಪಡೆಯಬಹುದು ಎಂದಿದ್ದಾರೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಮಂಗಳವಾರದಂದು ಬಹಿರಂಗ ಮಾಡಿರುವ ಡೇಟಾದ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್​ನಿಂದ ಜೂನ್​ ತ್ರೈಮಾಸಿಕಕ್ಕೆ ಭಾರತದ ಆರ್ಥಿಕ ಬೆಳವಣಿಗೆ ಶೇ 20.1ರಷ್ಟು ದಾಖಲಿಸಿದೆ. ಒಂದು ವರ್ಷದ ಹಿಂದಿನ ಇದೇ ಅವಧಿಗೆ ಕಡಿಮೆ ಮೂಲಾಂಶ ಇದ್ದದ್ದರ ಪರಿಣಾಮ ಈ ಬೆಳವಣಿಗೆ ಆಗಿದೆ. ಕೊರೋನಾ ಎರಡನೇ ಅಲೆಯ ಹೊರತಾಗಿಯೂ ಇಂಥದ್ದೊಂದು ಬೆಳವಣಿಗೆಯು ಆಗಿದೆ.2020- 21ನೇ ಸಾಲಿನ ಏಪ್ರಿಲ್​​ನಿಂದ ಜೂನ್​ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 24.4ರಷ್ಟು ಕುಗ್ಗಿತ್ತು. ಟೆಕ್ಸ್​ಟೈಲ್ ಮತ್ತು ಆಟೋಮೊಬೈಲ್ ಸೇರಿದಂತೆ 10 ಪ್ರಮುಖ ವಲಯಗಳಿಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್​ಐ) ಅನ್ನು ಕೇಂದ್ರದಿಂದ ಪರಿಚಯಿಸಲಾಗಿದೆ.

ಕೊರೋನಾ ಬಿಕ್ಕಟ್ಟಿನ ನಂತರ ದೇಶದ ಆರ್ಥಿಕತೆ ಚೇತರಿಸಿಕೊಳ್ಳುವುದಕ್ಕೆ ಇದರಿಂದ ಸಹಾಯ ಆಗುತ್ತದೆ ಎಂದು ಇಂಥ ನಿರ್ಧಾರ ಮಾಡಲಾಗಿದೆ. 21ನೇ ಶತಮಾನದಲ್ಲಿ ನಮ್ಮನ್ನು ನಾವು ಜಾಗತಿಕ ಆರ್ಥಿಕ ನಾಯಕತ್ವದ ಸ್ಥಾನದಲ್ಲಿ ನೋಡುತ್ತೇವೆ, ದೊಡ್ಡದಾಗಿ ಏನನ್ನಾದರೂ ಸಾಧಿಸುವುದಕ್ಕೆ ಭಾರತದಲ್ಲಿ ಅವಕಾಶಗಳಿಗೇನೂ ಕೊರತೆ ಇಲ್ಲ ಎಂದು ಮೋದಿ ಹೇಳಿದ್ದಾರೆ.

Sneha Gowda

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

5 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

6 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

6 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

6 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

7 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

7 hours ago