ನವದೆಹಲಿ: ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 213 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಉಲ್ಲೇಖವಾಗಿದೆ.
57 ಪ್ರಕರಣಗಳೊಂದಿಗೆ ದೆಹಲಿ ಮತ್ತು 54 ರೋಗಿಗಳೊಂದಿಗೆ ಮಹಾರಾಷ್ಟ್ರವು ಎರಡನೇ ಸ್ಥಾನದಲ್ಲಿದೆ.ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಇಲ್ಲಿಯವರೆಗೆ, 90 ರೋಗಿಗಳನ್ನು ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ.
ಈ ನಡುವೆ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 6,317 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದೇ ವೇಳೇ ಕೋವಿಡ್ನಿಂದ 318 ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನೂ 6,906 ಮಂದಿ ಸೋಂಕಿನಿಂದ ಚೇತರಿಕೆಗಳನ್ನು ಕಂಡಿದೆ ಅಂತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿ ಮಾಡಿದೆ. ಸಕ್ರಿಯ ಪ್ರಕರಣ ಪ್ರಸ್ತುತ 78,190 ಆಗಿದೆ; 575 ದಿನಗಳಲ್ಲಿ ಇದು ಅತ್ಯಂತ ಕಡಿಮೆಯಾಗಿದೆಯಂತೆ. ಈ ನಡುವೆ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 213 ದಾಖಲಾಗಿದೆ ಅಂತ ಇಲಾಖೆ ತಿಳಿಸಿದೆ.