News Karnataka Kannada
Monday, April 29 2024
ದೆಹಲಿ

ದೇಶದಲ್ಲಿ 8.9 ಕೋಟಿ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್

Untitled 207
Photo Credit :

ನವದೆಹಲಿ :  ದೇಶಾದ್ಯಂತ 12ರಿಂದ 14 ವರ್ಷ ವಯೋಮಾನದ 3 ಕೋಟಿಗೂ ಅಧಿಕ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮಂಗಳವಾರ ಮಾಹಿತಿ ನೀಡಿದ್ದಾರೆ.

ಈ ವಯೋಮಾನದಲ್ಲಿ ಒಂದು ಕೋಟಿಗೂ ಅಧಿಕ ಮಕ್ಕಳು ಎರಡನೇ ಡೋಸ್ ಪಡೆದಿರುವ ಮಾಹಿತಿ ಇದೆ.

ಹಾಗೆಯೇ, 15-18 ವಯೋಮಾನದ 5 ಕೋಟಿಗೂ ಹೆಚ್ಚು ಮಕ್ಕಳಿಗೆ ಲಸಿಕೆ ಕೊಡಲಾಗಿದೆ. 12 ವರ್ಷ ಮೇಲ್ಪಟ್ಟ ವಯಸ್ಸಿನ 8.9 ಕೋಟಿ ಮಕ್ಕಳಿಗೆ ವ್ಯಾಕ್ಸಿನ್ ಹಾಕಿಸಲಾಗಿರುವುದು ತಿಳಿದುಬಂದಿದೆ.

“ಲಸಿಕೆ ಅಭಿಯಾನದಲ್ಲಿ ಮಕ್ಕಳ ಕೊಡುಗೆ ಬಹಳ ಇದೆ. 12-14 ವಯೋಮಾನದ 3 ಕೋಟಿಗೂ ಅಧಿಕ ಮಕ್ಕಳಿಗೆ ಮೊದಲ ಡೋಸ್ ಕೊಡಲಾಗಿದೆ. ಲಸಿಕೆ ಪಡೆದ ನನ್ನ ಎಲ್ಲಾ ಪುಟ್ಟ ಸ್ನೇಹಿತರಿಗೂ ಧನ್ಯವಾದ” ಎಂದು ಕೇಂದ್ರ ಸಚಿವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ಧಾರೆ.

ಬಯೋಲಾಜಿಕಲ್ ಇ ಕಂಪನಿಯ ಕೋರ್ಬೆವ್ಯಾಕ್ಸ್  ಎಂಬ ಲಸಿಕೆಯನ್ನು ಈ ವಮೋಮಾನದ ಮಕ್ಕಳಿಗೆ ನೀಡಲಾಗುತ್ತಿದೆ. ಮಾರ್ಚ್ 16ರಂದು ಈ ಅಭಿಯಾನ ಆರಂಭಗೊಂಡಿದೆ. 28 ದಿನಗಳ ಅಂತರದಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಭಾರತದಲ್ಲಿ ಕೋವಿಡ್ ಲಸಿಕೀಕರಣ ಯೋಜನೆ 190.48 ಕೋಟಿ ಗಡಿದಾಟಿದೆ. 12-14 ವಯೋಮಾನದಲ್ಲಿ 3,06,69,820 ಮಕ್ಕಳು ಮೊದಲ ಡೋಸ್ ಪಡೆದರೆ, 1,02,00,272 ಮಕ್ಕಳು ಎರಡನೇ ಡೋಸ್ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು, 15-18 ವರ್ಷ ವಯೋಮಾನದವರ ಪೈಕಿ 5 ಕೋಟಿಗೂ ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ. 5,87,70,428 ಮಂದಿ ಮೊದಲ ಡೋಸ್ ಪಡೆದರೆ, 4,33,08,651 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ. 12-14 ಮತ್ತು 15-18 ಈ ಎರಡು ವಯೋಮಾನದವರನ್ನು ಒಟ್ಟು ಸೇರಿಸಿದರೆ 8.9 ಕೋಟಿ (8,94,40,248) ಮಕ್ಕಳಿಗೆ ಲಸಿಕೆ ಹಾಕಿದಂತಾಗಿದೆ.

ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಲಸಿಕೆ ಹಾಕುವ ಯೋಜನೆ ಆರಂಭವಾಗಿದ್ದು 2021 ಜನವರಿ 16ರಂದು. ಈವರೆಗೆ 190 ಕೋಟಿಗೂ ಹೆಚ್ಚು ವ್ಯಾಕ್ಸಿನ್ ಡೋಸ್‌ಗಳನ್ನು ಹಾಕಲಾಗಿದೆ. ಲಸಿಕೀಕರಣ ಯೋಜನೆ ಆರಂಭದಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಯಿತು. ಫೆಬ್ರವರಿ 2ರಂದು ಪೊಲೀಸರು, ಪತ್ರಕರ್ತರು ಹೀಗೆ ಫ್ರಂಟ್‌ಲೈನ್ ಕಾರ್ಯಕರ್ತರಿಗೆ ಲಸಿಕೆ ಕೊಡುವುದನ್ನು ಶುರು ಮಾಡಲಾಯಿತು. ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟವರು ಮತ್ತು ನಿರ್ದಿಷ್ಟ ಕಾಯಿಲೆ ಇರುವ 45ವರ್ಷ ಮೇಲ್ಪಟ್ಟ ಜನರಿಗೆ ಇದನ್ನು ವಿಸ್ತರಿಸಲಾಯಿತು. ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಲಭ್ಯವಾಗುವಂತೆ ಮಾಡಲಾಯಿತು.

2021 ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಕಾರ್ಯ ನಡೆಯಿತು. ಈ ವರ್ಷ ಜನವರಿ 3ರಿಂದ 15-18 ವಯೋಮಾನದವರಿಗೆ ಕೋವ್ಯಾಕ್ಸಿನ್ ಲಸಿಕೆ ಕೊಡಲಾಗುತ್ತಿದೆ. ಮಾರ್ಚ್ 16ರಿಂದ ಬಯೋಲಾಜಿಕಲ್ ಇ ಕಂಪನಿಯ ಕೋರ್ಬೆವ್ಯಾಕ್ಸ್ ಲಸಿಕೆಯನ್ನ 12-15 ವಯೋಮಾನದ ಮಕ್ಕಳಿಗೆ ಕೊಡಲಾಗುತ್ತಿದೆ. ಕೋವಿಡ್ ಅಲೆಗಳು ಇನ್ನೂ ನಿಲ್ಲದ ಹಿನ್ನಲೆಯಲ್ಲಿ ಇದೇ ಏಪ್ರಿಲ್ 10ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮುನ್ನೆಚ್ಚರಿಕೆಯಾಗಿ ಮೂರನೇ ಡೋಸ್ ಕೊಡಲಾಗುತ್ತಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು