News Karnataka Kannada
Monday, April 29 2024
ದೆಹಲಿ

ದೇಶದಲ್ಲಿ ಕೋವಿಡ್ ಸೋಂಕು ಇಳಿಕೆ

Covid Test
Photo Credit : News Kannada

ಹೊಸದಿಲ್ಲಿ: ದೇಶದಲ್ಲಿ ಭಾನುವಾರ 1.48 ಲಕ್ಷ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18.9 ಲಕ್ಷವನ್ನು ದಾಟಿದ್ದು, ಸೋಂಕಿತರ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಕರ್ನಾಟಕ ರಾಜ್ಯದಲ್ಲಿ ದೇಶದಲ್ಲೇ ಅತ್ಯಧಿಕ ಅಂದರೆ 28,264 ಪ್ರಕರಣಗಳು ವರದಿಯಾಗಿವೆ.ಉಳಿದಂತೆ ಮಹಾರಾಷ್ಟ್ರ (22444) ಮತ್ತು ತಮಿಳುನಾಡು (22238) ನಂತರದ ಸ್ಥಾನಗಳಲ್ಲಿವೆ.

2020ರ ಜನವರಿ 30ರಂದು ದೇಶದ ಪ್ರಥಮ ಕೋವಿಡ್-19 ಸೋಂಕು ಪ್ರಕರಣಗಳ ವರದಿಯಾಗಿದ್ದು, ಎರಡು ವರ್ಷಗಳಲ್ಲಿ 4.1 ಕೋಟಿ ಮಂದಿಗೆ ಸೋಂಕು ತಗುಲಿದೆ.

ದೇಶದಲ್ಲಿ ಭಾನುವಾರ 404 ಸೋಂಕಿತರು ಮೃತಪಟ್ಟಿದ್ದು, ಇದು ಕಳೆದ ವಾರದ ಸರಾಸರಿಗಿಂತ ಅಧಿಕ. ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 4,94,131 ಆಗಿದೆ. ಭಾನುವಾರ ಸಾವಿನ ಸಂಖ್ಯೆಯಲ್ಲೂ ಕರ್ನಾಟಕ ಅಗ್ರಸ್ಥಾನಿಯಾಗಿದೆ. ರಾಜ್ಯದಲ್ಲಿ 68 ಮಂದಿ ಸೋಂಕಿತರು ಮೃತಪಟ್ಟಿದ್ದರೆ, ಮಹಾರಾಷ್ಟ್ರ 50 ಹಾಗೂ ತಮಿಳುನಾಡು 38 ಸಾವು ಕಂಡಿವೆ.

ದೇಶದಲ್ಲಿ ಶನಿವಾರ 16.1 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು, ಪಾಸಿಟಿವಿಟಿ ದರ ಶೇಕಡ 9.1ರಷ್ಟಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು