News Karnataka Kannada
Tuesday, April 30 2024
ದೆಹಲಿ

ದೆಹಲಿಯ ಮೊಘಲ್ ಗಾರ್ಡನ್‌ಗೆ ಫೆಬ್ರವರಿ 12ರಿಂದ ಸಾರ್ವಜನಿಕರಿಗೆ ಪ್ರವೇಶ

Moghal Garden.
Photo Credit : News Kannada

ನವದೆಹಲಿ: ದೆಹಲಿಯ ಮೊಘಲ್ ಗಾರ್ಡನ್‌ಗೆ ಫೆಬ್ರವರಿ 12ರಿಂದ ಮಾರ್ಚ್ 16ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಗುರುವಾರ ನವದೆಹಲಿಯಲ್ಲಿ ರಾಷ್ಟ್ರಪತಿ ಭವನದ ವಾರ್ಷಿಕ ‘ಉದ್ಯಾನೋತ್ಸವ’ವನ್ನು ಉದ್ಘಾಟಿಸಿದರು.

ರಾಷ್ಟ್ರಪತಿ ಭವನ ನೀಡಿರುವ ಮಾಹಿತಿ ಪ್ರಕಾರ, ಆನ್‌ಲೈನ್ ಬುಕಿಂಗ್ ಮಾಡುವ ಮೂಲಕ ಜನರು ಮೊಘಲ್ ಗಾರ್ಡನ್ ವೀಕ್ಷಣೆಗೆ ಬರಬಹುದು ಎಂದು ಹೇಳಲಾಗಿದೆ.

ಒಂದೊಂದು ಸ್ಲಾಟ್‌ನಲ್ಲಿ 100ಜನರಿಗೆ ಮಾತ್ರ ಅವಕಾಶವಿರಲಿದೆ, ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಒಟ್ಟು 7 ಸ್ಲಾಟ್‌ಗಳು ಲಭ್ಯವಿರಲಿದೆ.

ಮೊಘಲ್ ಗಾರ್ಡನ್ಸ್ ಫೆಬ್ರವರಿ 12, 2022 ರಿಂದ ಮಾರ್ಚ್ 16, 2022 ರವರೆಗೆ (ನಿರ್ವಹಣಾ ದಿನಗಳಾದ ಸೋಮವಾರದಂದು ಹೊರತುಪಡಿಸಿ) ಪ್ರತಿದಿನ 10:00 ಗಂಟೆಯಿಂದ ಸಂಜೆ 5ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಭೇಟಿಯ ಸಂದರ್ಭದಲ್ಲಿ ಕೊರೊನಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ.

ಹಿಂದಿನ ವರ್ಷದಂತೆ ಈ ವರ್ಷವೂ ಮುನ್ನೆಚ್ಚರಿಕೆ ಕ್ರಮವಾಗಿ ನೇರವಾಗಿ ವಾಕ್-ಇನ್ ಪ್ರವೇಶ ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಈ ವರ್ಷದ ‘ಉದ್ಯಾನೋತ್ಸವ’ದ ಪ್ರಮುಖ ಆಕರ್ಷಣೆಯೆಂದರೆ 11 ವಿಧದ ಟುಲಿಪ್‌ಗಳು ಫೆಬ್ರವರಿಯಲ್ಲಿ ಹಂತ ಹಂತವಾಗಿ ಅರಳುವ ನಿರೀಕ್ಷೆಯಿದೆ.

ಮೊಘಲ್ ಗಾರ್ಡನ್ ವೀಕ್ಷಣೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಕಾಯ್ದುಕೊಳ್ಳಬೇಕು, ಥರ್ಮಲ್ ಸ್ಕ್ರೀನಿಂಗ್ ಮಾಡಿಸಬೇಕು, ಮಾಸ್ಕ್ ಇಲ್ಲದೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.

ಅಷ್ಟೇ ಅಲ್ಲದೆ ಸ್ಪಿರಿಚುವಲ್ ಗಾರ್ಡನ್‌, ಹರ್ಬಲ್ ಗಾರ್ಡನ್, ಬೋನ್ಸಾಯ್ ಗಾರ್ಡನ್, ಮ್ಯೂಸಿಕಲ್ ಗಾರ್ಡನ್ ಗಳನ್ನು ಕೂಡ ವೀಕ್ಷಿಸಬಹುದಾಗಿದೆ. ಸಾರ್ವಜನಿಕರು ಪ್ರವೇಶ ಮಾಡಬಹುದು. ಹಾಗೆಯೇ ಅದೇ ಗೇಟ್ ಮೂಲಕವೇ ಹೊರಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ.

ಎಂಟ್ರಿ ಹಾಗೂ ಎಕ್ಸಿಟ್ ಎರಡೂ 35ನೇ ನಂಬರ್‌ನ ಪ್ರವೇಶದ್ವಾರಲದಲ್ಲಿರಲಿದೆ, ಬರುವವರು ಮೊಬೈಲ್ ತರಬಹುದಾಗಿದೆ. ನೀರಿನ ಬಾಟಲಿ, ಬ್ರೀಫ್‌ಕೇಸ್, ಬಾಕ್ಸ್‌ಗಳು, ಛತ್ರಿ, ಕ್ಯಾಮರಾಗಳು, ರೇಡಿಯೋಗಳು, ಕೈಚೀಲಗಳನ್ನು ತರುವಂತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು