News Karnataka Kannada
Thursday, May 02 2024
ದೆಹಲಿ

ಕೋವ್ಯಾಕ್ಸಿನ್‌ ಲಸಿಕೆ ಪಡೆದವರಿಗೆ ಮೊದಲು ಬೂಸ್ಟರ್‌ ಡೋಸ್‌!

Covaxin
Photo Credit :

ನವದೆಹಲಿ(ಡಿ.16) : ಭಾರತದಲ್ಲಿ ಬೂಸ್ಟರ್‌ ಡೋಸ್‌ ನೀಡುವ ಕುರಿತು ಚರ್ಚೆಗಳಾಗುತ್ತಿರುವ ಬೆನ್ನಲ್ಲೇ, ಕೋವ್ಯಾಕ್ಸಿನ್‌ ಲಸಿಕೆ ಪಡೆದವರಿಗೆ ಮೊದಲು ಬೂಸ್ಟರ್‌ ಡೋಸ್‌ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಒಮಿಕ್ರೋನ್‌ ರೂಪಾಂತರಿ ವೈರಸ್‌ ಪ್ರಕರಣಗಳು ವಿಶ್ವಾದ್ಯಂತ ಹೆಚ್ಚಾಗುತ್ತಿರುವ ಬೆನ್ನಲ್ಲೇ ಬೂಸ್ಟರ್‌ ಡೋಸ್‌ ನೀಡಲು ತಜ್ಞರ ಸಮಿತಿ ಚರ್ಚೆ ನಡೆಸುತ್ತಿದೆ.

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮತ್ತು ನಿಷ್ಕಿರಯ ವೈರಸ್‌ನಿಂದ ತಯಾರಿಸಿದ ಲಸಿಕೆ ಪಡೆದವರಿಗೆ ಮೊದಲು ಬೂಸ್ಟರ್‌ ಡೋಸ್‌ ನೀಡಬೇಕು ಎಂದು ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿ ಶಿಫಾರಸು ಮಾಡಿತು. ಭಾರತ್‌ ಬಯೋಟೆಕ್‌ ಉತ್ಪಾದಿಸುವ ಕೋವ್ಯಾಕ್ಸಿನ್‌ ಲಸಿಕೆ ನಿಷ್ಕಿರಯಗೊಂಡ ವೈರಸ್‌ನಿಂದ ತಯಾರಿಸಿದ್ದಾಗಿದೆ. ಹಾಗಾಗಿ ಕೊವ್ಯಾಕ್ಸಿನ್‌ ಲಸಿಕೆ ಪಡೆದವರಿಗೆ ಮೊದಲು ಬೂಸ್ಟರ್‌ ಡೋಸ್‌ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಲಸಿಕಾಕರ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ ಎಂದು ಮಾದ್ಯಮವೊಂದು ವರದಿ ಮಾಡಿದೆ.

ದೇಶದಲ್ಲಿ ಈವರೆಗೆ 135 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ. ಇದರಲ್ಲಿ ಶೇ.10.7ರಷ್ಟುಕೋವ್ಯಾಕ್ಸಿನ್‌ ಆಗಿದೆ. ಕಳೆದ ವಾರ ಸಹ ಅಗತ್ಯ ಬಿದ್ದರೆ ಹೆಚ್ಚುವರಿ ಡೋಸ್‌ ಲಸಿಕೆ ವಿತರಿಸಲು ಸಿದ್ಧವಾಗಿದ್ದೇವೆ ಎಂದು ತಜ್ಞರ ತಂಡ ಹೇಳಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು