ದೇಶದಲ್ಲಿ ಈಗಾಗಲೇ 116 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಲಸಿಕೆ ಪಡೆಯಲು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಲಕ್ಕಿ ಡ್ರಾ ನಡೆಸಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಲಸಿಕೆ ಪಡೆಯುವಂತೆ ಲಕ್ಕಿ ಡ್ರಾ ನಡೆಸುತ್ತಿವೆ. ಅದರಂತೆ ಭಾರತದಲ್ಲೂ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಲಕ್ಕಿ ಡ್ರಾ ನಡೆಸಲು ಚಿಂತಿಸಲಾಗಿದೆ.
ಈ ಲಕ್ಕಿ ಡ್ರಾ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಶೀಘ್ರದಲ್ಲೇ ಸೂಚಿಸಬಹುದಾಗಿದೆ.
ಪಡಿತರ ಕಿಟ್, ಪ್ರಯಾಣದ ಪಾಸ್ ಗಳು, ನಗದು ಬಹುಮಾನಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಲಕ್ಕಿ ಡ್ರಾದಲ್ಲಿ ನೀಡಲಿದ್ದು, ಜನರಿಗೆ ಲಸಿಕೆ ಪಡೆಯುವ ಬಗ್ಗೆ ಉತ್ಸುಕತೆ ಹೆಚ್ಚಿಸಲು ಈ ಲಕ್ಕಿ ಡ್ರಾ ನಡೆಸಲಾಗುತ್ತಿದೆ.
ದೇಶದಲ್ಲಿ ಈಗಾಗಲೇ ಲಸಿಕೆ ನೀಡಿಕೆ ಅಭಿಯಾನ ನಡೆಯುತ್ತಿದ್ದು, ಲಸಿಕೆ ಪಡೆದ ಉದ್ಯೋಗಿಗಳಿಗೆ ಬ್ಯಾಡ್ಜ್ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಮಾಡಿದೆ.
ಈ ನಡುವೆ ಹರ್ ಘರ್ ದಸ್ತಕ್ (ಮನೆ ಮೆನೆ ಲಸಿಕಾ ಅಭಿಯಾನ) ಕಾರ್ಯಕ್ರಮದಡಿಯಲ್ಲಿ ಪ್ರಭಾವಿ ವ್ಯಕ್ತಿಗಳನ್ನು ರಾಯಭಾರಿಗಳನ್ನಾಗಿ ಮಾಡಲಾಗುತ್ತಿದೆ.