ದೆಹಲಿ

ಕೋವಿಡ್ ಲಸಿಕೆ ಕಡ್ಡಾಯ ಮಾಡಿಲ್ಲ: ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಸ್ಪಷ್ಟನೆ

ನವದೆಹಲಿ : ‘ಜನರು ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಿಲ್ಲ. ಶೇ 100ರಷ್ಟು ಲಸಿಕೆ ನೀಡಬೇಕು ಎಂದಷ್ಟೇ ತಿಳಿಸಲಾಗಿದೆ’ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟನೆ ನೀಡಿದೆ.

ಲಸಿಕೆ ನೀಡುವ ಪೂರ್ವದಲ್ಲಿ ಕ್ಲಿನಿಕಲ್‌ ಟ್ರಯಲ್ ನಡೆಸಿರುವ ಕುರಿತ ಅಂಕಿಅಂಶ ಬಹಿರಂಗಪಡಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಪೀಠವು ಕಾಯ್ದಿರಿಸಿದೆ.

ತಮಿಳುನಾಡುವಿನ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅಮಿತ್‌ ಆನಂದ್ ತಿವಾರಿ, ‘ಶೇ 100ರಷ್ಟು ಜನರಿಗೆ ಲಸಿಕೆ ನೀಡುವುದನ್ನು ಕೇಂದ್ರ ಕಡ್ಡಾಯ ಮಾಡಿದೆ’ ಎಂದು ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್ ಮತ್ತು ಬಿ.ಆರ್‌.ಗವಾಯಿ ಅವರಿದ್ದ ಪೀಠಕ್ಕೆ ತಿಳಿಸಿದರು.

ಕೇಂದ್ರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರು, ಇದಕ್ಕೆ ಪ್ರತಿಕ್ರಿಯಿಸುತ್ತಾ ಮೇಲಿನಂತೆ ಸ್ಪಷ್ಟನೆ ನೀಡಿದರು.

‘ನ್ಯಾಯಮೂರ್ತಿಗಳೇ ಒಂದು ಸ್ಪಷ್ಟನೆ. ಶೇ 100ರಷ್ಟು ಲಸಿಕೆ ನೀಡಬೇಕು ಎಂದು ತಿಳಿಸಿದ್ದಕ್ಕೇ ತಮಿಳುನಾಡುವಿನಲ್ಲಿ ಕಡ್ಡಾಯ ಮಾಡಲಾಗಿದೆ. ಇದು, ಕಡ್ಡಾಯವಲ್ಲ. ಈ ಬಗ್ಗೆ ಕೇಂದ್ರ ಯಾವುದೇ ಆದೇಶ ನೀಡಿಲ್ಲ’ ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು.

 

Swathi MG

Recent Posts

ಪುತ್ತೂರು: ಹೋರಿಗಾಗಿ ದೈವದ ಮೊರೆ ಹೋದ ಬಜರಂಗದಳ

ಇಲ್ಲಿನ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಹೋರಿಗಳು ಮೇ.1 ರಿಂದ ನಾಪತ್ತೆಯಾಗಿರುವ ಘಟನೆಯೊಂದು ವರದಿಯಾಗಿದೆ. ಇದರ ಪತ್ತೆಗಾಗಿ ಬಜರಂಗದಳ ಇದೀಗ…

8 mins ago

ರೈತರಿಗೆ ಬೀಜ, ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೀಜ ಮತ್ತು ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

11 mins ago

ಕಾಂಗ್ರೆಸ್‌ಗೆ 1 ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲಾಗಲಿಲ್ಲ: ಸಂಜೀವ ಮಠಂದೂರು

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷ ಆಗಿದೆ. ಆದರೆ ಇಲ್ಲಿ ಒಂದು ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲು ಅವರಿಗೆ…

12 mins ago

‘ಜಂಟಿ ಸರ್ವೆ ಆಗುವ ತನಕ ಹಿರೀಕಾಟಿಯಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸದಿದ್ದರೆ ಉಗ್ರ ಹೋರಾಟ’

ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಿರೀಕಾಟಿ ಗ್ರಾಮದ ಸರ್ವೆ ನಂ. 108 ರಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ಸೇರಿದ 2 ಎಕರೆ…

29 mins ago

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸಿಬ್ಬಂದಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕ ವಿಜಯ್ ಕುಮಾರ್ ಕೆಲಸದ ವಿಚಾರವಾಗಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

36 mins ago

ದುರಸ್ತಿ ಮಾಡಿ ವಾರ ಕಳೆಯುವ ಮೊದಲೇ ಕಿತ್ತು ಬಂದ ರಸ್ತೆ

ಪಟ್ಟಣದ ಬಸವಕಲ್ಯಾಣ-ಭಾಲ್ಕಿ ಮುಖ್ಯ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ವಾರದ ಹಿಂದೆ ರಸ್ತೆ ದುರಸ್ತಿ ಕಾಮಗಾರಿ ಮಾಡಲಾಗಿದ್ದು, ವಾರ ಕಳೆಯುವ…

43 mins ago