News Karnataka Kannada
Monday, April 29 2024
ದೆಹಲಿ

ಕರೊನಾ ದೈನಿಕ ಕೇಸ್​ನಲ್ಲಿ ಏರಿಕೆ, ಒಮಿಕ್ರಾನ್ ಪ್ರಕರಣದಲ್ಲೂ ಹೆಚ್ಚಳ

Omicrone
Photo Credit :

ನವದೆಹಲಿ: ಭಾರತದಲ್ಲಿ ಮಾರಕ ಒಮಿಕ್ರಾನ್ ಪ್ರಭೇದದ ಸಂಖ್ಯೆಯಲ್ಲಿ ಏರಿಕೆ ಮಾತ್ರವಲ್ಲದೆ ಒಟ್ಟಾರೆ ಕರೊನಾ ಸೋಂಕಿನ ಪ್ರಕರಣಗಳಲ್ಲಿ ಭಾರಿ ಹೆಚ್ಚಳವಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.ಶುಕ್ರವಾರ ದೇಶದಲ್ಲಿ ಕರೊನಾ ಸಾಂಕ್ರಾಮಿಕತೆಯ 16,764 ಹೊಸ ಪ್ರಕರಣಗಳು ದಾಖಲಾಗಿವೆ. ಗುರುವಾರ 13,154 ಕೇಸ್​ಗಳು ವರದಿಯಾಗಿದ್ದು ಒಂದೇ ದಿನದಲ್ಲಿ ದೈನಿಕ ಕೇಸ್​ನಲ್ಲಿ 3,600ಕ್ಕೂ ಅಧಿಕ ಏರಿಕೆ ದಾಖಲಾಗಿದ್ದರಿಂದ ಚಿಂತೆ ಉಂಟಾಗಿದೆ. ಇದು ಮೂರನೇ ಅಲೆಗೆ ಮುನ್ನುಡಿಯಾಗಿರಬಹುದೆಂಬ ಆತಂಕ ಕಾಡಲಾರಂಭಿಸಿದೆ.

ಸೋಂಕಿನ ದೈನಿಕ ಕೇಸ್ ಕಳೆದ 64 ದಿನಗಳಲ್ಲಿ 16,000ದ ಗಡಿ ದಾಟಿದ್ದು ಇದೇ ಮೊದಲ ಸಲವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದೊಂದು ದಿನದಲ್ಲಿ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿಯ 309 ಕೇಸ್​ಗಳು ವರದಿಯಾಗಿದ್ದು ಹೊಸ ತಳಿಯ ಪ್ರಕರಣದ ಸಂಖ್ಯೆ 1,270ಕ್ಕೆ ಏರಿದೆ. ಸಕ್ರಿಯ ಕೇಸ್​ಗಳ ಸಂಖ್ಯೆ 91,361ಕ್ಕೆ ಏರಿರುವುದು ಕೂಡ ಕಳವಳ ಹೆಚ್ಚಲು ಇನ್ನೊಂದು ಕಾರಣವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು