Categories: ದೆಹಲಿ

ಏರಿಕೆ ಮಾಡಲಾಗಿದ್ದ ಪ್ಲಾಟ್ ಫಾರಂ ದರ ಇಳಿಕೆ; ರೈಲ್ವೆ ಇಲಾಖೆ ಘೋಷಣೆ

ನವದೆಹಲಿ, ನ 25; ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡಿದೆ. ಪ್ಲಾಟ್ ಫಾರಂ ಟಿಕೆಟ್ ದರವನ್ನು ಹೆಚ್ಚಳದ ಆದೇಶವನ್ನು ವಾಪಸ್ ಪಡೆದಿದೆ. ಕೋವಿಡ್ ಸಂದರ್ಭದಲ್ಲಿ ಪ್ಲಾಟ್ ಫಾರಂ ದರವನ್ನು 50 ರೂ.ಗಳಿಗೆ ಏರಿಕೆ ಮಾಡಲಾಗಿತ್ತು.

ಗುರುವಾರ ಭಾರತೀಯ ರೈಲ್ವೆ ಈ ಕುರಿತು ಘೋಷಣೆ ಮಾಡಿದೆ. ಏರಿಕೆ ಮಾಡಲಾಗಿದ್ದ ಪ್ಲಾಟ್ ಫಾರಂ ದರವನ್ನು ವಾಪಸ್ ಪಡೆಯಲಾಗಿದೆ. ಇನ್ನು ಮುಂದೆ ಕೋವಿಡ್ ಪರಿಸ್ಥಿತಿಯ ಹಿಂದಿನಂತೆ ಪ್ಲಾಟ್ ಫಾರಂ ದರ 10 ರೂ. ಇರಲಿದೆ ಎಂದು ಹೇಳಿದೆ.

ಕೋವಿಡ್ ಪರಿಸ್ಥಿತಿ ಸಂದರ್ಭದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ಕಡಿಮೆ ಮಾಡಲು ಪ್ಲಾಟ್ ಫಾರಂ ದರವನ್ನು ಏರಿಕೆ ಮಾಡಿತ್ತು. ಏಕಾಏಕಿ ದರವನ್ನು 50 ರೂ.ಗಳಿಗೆ ಏರಿಕೆ ಮಾಡಿದ್ದು ಆಕ್ರೋಶಕ್ಕೆ ಸಹ ಕಾರಣವಾಗಿತ್ತು. ದರವನ್ನು ಇಳಿಕೆ ಮಾಡಬೇಕು ಎಂಬ ಒತ್ತಾಯವೂ ಕೇಳಿ ಬಂದಿತ್ತು.

ತಮ್ಮ ಆತ್ಮೀಯರನ್ನು ರೈಲು ಹತ್ತಿಸಲು ನಿಲ್ದಾಣಕ್ಕೆ ಬರುವ ಜನರು 50 ರೂ. ನೀಡಿ ಪ್ಲಾಟ್ ಫಾರಂ ಟಿಕೆಟ್ ಖರೀದಿ ಮಾಡಬೇಕಿತ್ತು. ಕೋವಿಡ್ ಹತೋಟಿಗೆ ಬಂದ ಬಳಿಕ ರೈಲ್ವೆ ಇಲಾಖೆ ಹಲವಾರು ಬದಲಾವಣೆಗಳನ್ನು ತಂದಿದೆ. ಅದರಲ್ಲಿ ಪ್ಲಾಟ್ ಫಾರಂ ಟಿಕೆಟ್ ದರ ಇಳಿಕೆಯೂ ಸೇರಿದೆ.

ರೈಲ್ವೆ ಇಲಾಖೆಯ ಆದೇಶದ ಬಳಿಕ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್, ಎಲ್‌ಎಲ್‌ಟಿ, ಕಲ್ಯಾಣ್ ಮತ್ತು ಪನ್ವೆಲ್ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಟಿಕೆಟ್‌ಗಳು 10 ರೂ. ಗೆ ಸಿಗಲಿದೆ ಎಂದು ಸೆಂಟ್ರಲ್ ರೈಲ್ವೆ ವಲಯ ಹೇಳಿದೆ.

ಕೋವಿಡ್ ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಯಾಣಿಕ ರೈಲುಗಳ ಸಂಚಾರ ಸಂಪೂರ್ಣ ರದ್ದಾಗಿತ್ತು. ಬಳಿಕ ಹಬ್ಬದ ಸಂದರ್ಭದಲ್ಲಿ ಸಾಮಾನ್ಯ ರೈಲುಗಳ ಸಂಚಾರ ರದ್ದುಗೊಳಿಸಿ, ವಿಶೇಷ ರೈಲುಗಳನ್ನು ಆಯ್ದ ಮಾರ್ಗದಲ್ಲಿ ಓಡಿಸಲಾಗುತ್ತಿತ್ತು.

ಕಳೆದ ವಾರ ವಿಶೇಷ ರೈಲು ಎಂಬ ಹಣೆಪಟ್ಟಿಯನ್ನು ತೆಗೆದು ಮೇಲ್, ಎಕ್ಸ್‌ಪ್ರೆಸ್ ರೈಲುಗಳನ್ನು ಸಾಮಾನ್ಯ ದರದಲ್ಲಿ ಓಡಿಸಬೇಕು ಎಂದು ಎಲ್ಲಾ ವಿಭಾಗಗಳಿಗೆ ರೈಲ್ವೆ ಇಲಾಖೆ ಸೂಚನೆ ನೀಡಿತ್ತು. ಕೋವಿಡ್ ಸಂದರ್ಭದಲ್ಲಿ ರೈಲುಗಳಲ್ಲಿ ತಯಾರು ಮಾಡಿದ ಆಹಾರ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ವಾರ ಆಹಾರ ನೀಡುವ ಸೇವೆಯನ್ನು ಸಹ ಪುನಃ ಆರಂಭಿಸುವುದಾಗಿ ಇಲಾಖೆ ಘೋಷಣೆ ಮಾಡಿತ್ತು.

Gayathri SG

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

3 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

3 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

3 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

4 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

4 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

4 hours ago