News Karnataka Kannada
Wednesday, April 24 2024
Cricket
ದೆಹಲಿ

ವಿಮಾನ ಲ್ಯಾಂಡಿಂಗ್ ವೇಳೆ ಅವಘಡ; 12 ಮಂದಿಗೆ ಗಾಯ

Spicejet
Photo Credit :

ಹೊಸದಿಲ್ಲಿ : ಮುಂಬೈನಿಂದ ದುರ್ಗಾಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ, ಲ್ಯಾಂಡಿಂಗ್ ಆಗುವ ವೇಳೆ ತೀವ್ರ ಪಕ್ಷುಬ್ಧತೆಗೆ ಒಳಗಾಗಿ ಸಂಭವಿಸಿದ ಅನಾಹುತದಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ.

ಬೋಯಿಂಗ್ 737 (ವಿಟಿ-ಎಸ್‍ಎಲ್‍ಎಚ್) ವಿಮಾನ, ಪ್ರಕ್ಷುಬ್ಧತೆ ವೇಳೆ ಕಾರ್ಯ ನಿರ್ವಹಿಸುವಾಗ ಎಸ್‍ಜಿ-945 ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.
“ದುರ್ಗಾಪುರದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಗಾಯಗೊಂಡಿರುವ ಹನ್ನೆರಡು ಮಂದಿಯನ್ನು ವೈದ್ಯಕೀಯ ನೆರವು ನೀಡಿದ ಬಳಿಕ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಮೇ 1ರಂದು ಸ್ಪೈಸ್‍ಜೆಟ್ 737 ವಿಮಾನ ಎಸ್‍ಜಿ-945 ಆಗಿ ಮುಂಬೈನಿಂದ ದುರ್ಗಾಪುರಕ್ಕೆ ಹೋಗುತ್ತಿತ್ತು. ವಿಮಾನ ಇಳಿಯುವ ಸಂದರ್ಭ ಸಾಕಷ್ಟು ಪ್ರಕ್ಷುಬ್ಧತೆ ಕಂಡುಬಂದಿದ್ದು, ದುರಾದೃಷ್ಟವಶಾತ್ ಕೆಲ ಪ್ರಯಾಣಿಕರಿಗೆ ಗಾಯಗಳಾಗಿವೆ. ದುರ್ಗಾಪುರದಲ್ಲಿ ಅವರು ಇಳಿಯುತ್ತಿದ್ದಂತೆ ಸೂಕ್ತ ವೈದ್ಯಕೀಯ ನೆರವು ನೀಡಲಾಗಿದೆ. ಈ ದುರದೃಷ್ಟಕರ ಘಟನೆಗೆ ಸ್ಪೈಸ್‍ಜೆಟ್ ವಿಷಾದ ವ್ಯಕ್ತಪಡಿಸುತ್ತದೆ ಹಾಗೂ ಗಾಯಾಳುಗಳಿಗೆ, ಸಾಧ್ಯವಿರುವ ಎಲ್ಲ ವೈದ್ಯಕೀಯ ನೆರವು ನೀಡಲಾಗುವುದು” ಎಂದು ಸ್ಪೈಸ್ ಜೆಟ್ ವಕ್ತಾರ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು