News Karnataka Kannada
Sunday, April 14 2024
Cricket
ದೆಹಲಿ

ಮನ್ ಕಿ ಬಾತ್ ನಲ್ಲಿ ‘ಸ್ಫೂರ್ತಿದಾಯಕ ಜೀವನ ಪ್ರಯಾಣ’ಹಂಚಿಕೊಳ್ಳಿ: ಪ್ರಧಾನಿ ಮೋದಿ ಕರೆ

Narendra Modi
Photo Credit : Twitter

ದೆಹಲಿ:  ಇಂದು ಟ್ವೀಟ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಮನ್ ಕಿ ಬಾತ್  ಸಂಚಿಕೆಯಲ್ಲಿ ಜನರು ತಮ್ಮ ಸ್ಫೂರ್ತಿದಾಯಕ ಜೀವನ ಪ್ರಯಾಣವನ್ನು ಹಂಚಿಕೊಳ್ಳಲು ಜನರನ್ನು ಆಹ್ವಾನಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮನ್ ಕಿ ಬಾತ್‌ನ 88 ನೇ ಸಂಚಿಕೆಯು ಏಪ್ರಿಲ್ 24 ರಂದು ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಿಎಂಒ ಪ್ರಕಾರ, MyGov, Namo ಅಪ್ಲಿಕೇಶನ್ ಸೇರಿದಂತೆ ಅಪ್ಲಿಕೇಶನ್‌ಗಳ ಮೂಲಕ ಅಥವಾ ಸಂದೇಶವನ್ನು ರೆಕಾರ್ಡ್ ಮಾಡಲು 1800-11-7800 ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಆಲೋಚನೆಗಳನ್ನು ಹಂಚಿಕೊಳ್ಳಬಹುದು.

ಪ್ರಧಾನಿ ಮೋದಿ ಟ್ವೀಟ್‌ ಮಾಡಿ, ‘ಮನ್ ಕಿ ಬಾತ್ ಮೂಲಕ ನಾವು ತಳಮಟ್ಟದ ಬದಲಾವಣೆ ಮಾಡುವವರ ಅಸಾಧಾರಣ ಸಾಹಸಗಳನ್ನು ಆಚರಿಸುತ್ತೇವೆ. ಅಂತಹ ಸ್ಪೂರ್ತಿದಾಯಕ ಜೀವನ ಪ್ರಯಾಣಗಳ ಬಗ್ಗೆ ಇದೇ ತಿಂಗಳ 24 ರಂದು ಹಂಚಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

‘ಮನ್ ಕಿ ಬಾತ್’ ಒಂದು ರೇಡಿಯೋ ಕಾರ್ಯಕ್ರಮವಾಗಿದ್ದು, ಪ್ರತಿ ತಿಂಗಳ ಕೊನೆಯ ಭಾನುವಾರದಂದು ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗುತ್ತದೆ, ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದೊಂದಿಗೆ ಸಂವಾದಿಸುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು