News Karnataka Kannada
Monday, April 15 2024
Cricket
ದೆಹಲಿ

ಬಿಸಿ-ಗಾಳಿ ಪರಿಣಾಮ ಗೋಧಿ ಬೆಳೆ ಮೇಲೆ ಹೊಡೆತ ಸಾಧ್ಯತೆ

Untitled 7
Photo Credit :

ಹೊಸದಿಲ್ಲಿ: ಸತತ ಐದು ವರ್ಷಗಳ ಕಾಲ ದಾಖಲೆ ಉತ್ಪಾದನೆ ಬಳಿಕ ಭಾರತದ ಗೋಧಿ ಉತ್ಪಾದನೆ ಪ್ರಸಕ್ತ ವರ್ಷ ಶೇಕಡ 5ರಷ್ಟು ಕುಸಿಯುವ ಸಾಧ್ಯತೆ ಇದೆ. ತೀವ್ರ ಬಿಸಿಗಾಳಿ ಇದಕ್ಕೆ ಮುಖ್ಯ ಕಾರಣ. ಉಕ್ರೇನ್ ಯುದ್ಧದ ಪರಿಣಾಮ ಇಡೀ ವಿಶ್ವದಲ್ಲಿ ಆಹಾರ ಕೊರತೆ ತಲೆದೋರಿದ್ದರೂ, ಭಾರತದಲ್ಲಿ ಮಾತ್ರ ಹೆಚ್ಚುವರಿ ದಾಸ್ತಾನು ಇದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಕಪ್ಪುಸಮುದ್ರ ಸಂಘರ್ಷದಿಂದಾಗಿ ಜಾಗತಿಕ ಗೋಧಿ ಪೂರೈಕೆಯಲ್ಲಿ ಆಗಿರುವ ಅಂತರವನ್ನು ಭಾರತ ಭರ್ತಿ ಮಾಡುವ ಗುರಿ ಹೊಂದಿದ್ದು, ವಿಶ್ವದಲ್ಲಿ ಹೆಚ್ಚುವರಿ ದಾಸ್ತಾನು ಹೊಂದಿರುವ ಕೆಲವೇ ದೇಶಗಳ ಪೈಕಿ ಭಾರತ ಕೂಡಾ ಒಂದು.

ಗೋಧಿ ಬೆಳೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಭಾರತದ ರೈತರು ಮತ್ತೊಂದು ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಮಾರ್ಚ್ ಮಧ್ಯದ ವೇಳೆಗೆ ಬಿಸಿ ಹಾಗೂ ಒಣಗಾಳಿ ವ್ಯಾಪಕವಾಗಿ ಬೀಸಿದ ಹಿನ್ನೆಲೆಯಲ್ಲಿ ಇಳುವರಿ ಕುಸಿದಿದೆ. ಆದರೂ, ಗೋಧಿ ರಫ್ತಿನ ಮೇಲೆ ಸರ್ಕಾರ ಯಾವುದೇ ನಿರ್ಬಂಧ ವಿಧಿಸುವ ಯೋಚನೆ ಮಾಡಿಲ್ಲ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಸ್ಪಷ್ಟಪಡಿಸಿದ್ದಾರೆ.

ಯುದ್ಧದ ಕಾರಣದಿಂದ ಪೂರೈಕೆ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಭಾರತ ಸುಮಾರು 10 ದಶಲಕ್ಷ ಟನ್ ಗೋಧಿಯನ್ನು ರಫ್ತು ಮಾಡಲು ಒಪ್ಪಂದಗಳನ್ನು ಅಂತಿಮಪಡಿಸಿದೆ ಎಂದು ಅವರು ಹೇಳಿದ್ದಾರೆ.

ಪ್ರಸಕ್ತ ಸಾಲಿನ ಖರೀದಿ ಹಾಗೂ ಹಿಂದಿನ ದಾಸ್ತಾನು ಸೇರಿ ಭಾರತದ ಒಟ್ಟು ದಾಸ್ತಾನು ಸುಮಾರು 38.5 ದಶಲಕ್ಷ ಟನ್ ಎಂದು ನಿರೀಕ್ಷಿಸಲಾಗಿದೆ. ಇದು ವಿವಿಧ ಸಬ್ಸಿಡಿ ಯೋಜನೆಗಳಡಿ ವಿತರಿಸಲು ಅಗತ್ಯವಾದ ಪ್ರಮಾಣಕ್ಕಿಂತ ಅಧಿಕ ಎಂದು ಪಾಂಡೆ ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು