News Karnataka Kannada
Saturday, April 13 2024
Cricket
ದೆಹಲಿ

ನವದೆಹಲಿ : ಬೈಕ್ ಕಾರು ಅಪಘಾತ ಮೂವರ ದುರ್ಮರಣ

Untitled 177
Photo Credit :

ನವದೆಹಲಿ: ದೆಹಲಿಯ ಶಕರ್‌ಪುರ ಪ್ರದೇಶದಲ್ಲಿ ದ್ವಿಚಕ್ರ ವಾಹನ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದ್ದು, ಝೊಮೆಟೋ ಡೆಲಿವರಿ ಬಾಯ್ ಮತ್ತು ಇಬ್ಬರು ಯುವತಿಯರು ಸಾವನ್ನಪ್ಪಿದ್ದಾರೆ.

ಜ್ಯೋತಿ (17) ಮತ್ತು ಭಾರತಿ (19) ಮೃತ ಯುವತಿಯರು.

ಝೊಮೆಟೋ ಡೆಲಿವರಿ ಬಾಯ್​ನ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಯುವತಿಯರು ಮತ್ತು ಅವರ ಕುಟುಂಬದ ಇತರೆ ಐವರು ಪಶ್ಚಿಮ ದೆಹಲಿಯ ಪೀರಾಗರ್ಹಿಯಿಂದ ಕರ್ಕರ್ಡೂಮಾದಲ್ಲಿರುವ ತಮ್ಮ ಮನೆಗೆ ಮರಳುತ್ತಿದ್ದರು. ಮುಂಬದಿಯಲ್ಲಿ ಮೂವರು ಕುಳಿತ್ತಿದ್ದರೆ, ನಾಲ್ವರು ಹಿಂದೆ ಕುಳಿತಿದ್ದರು.

ಕಾರು ಲಕ್ಷ್ಮಿನಗರದ ಮೂಲಕ ಹಾದು ಹೋಗುತ್ತಿದ್ದಾಗ ಬೈಕ್‌ ಅಡ್ಡ ಬಂದಿದ್ದು, ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು