News Karnataka Kannada
Sunday, April 21 2024
Cricket
ದೆಹಲಿ

ದೆಹಲಿಯ ರೋಹಿಣಿ ಕೋರ್ಟ್‌ ಎದುರಲ್ಲೇ ಹಾರಿದ ಗುಂಡು!

Gunmen kill 21 civilians
Photo Credit :

ದೆಹಲಿ:  ರೋಹಿಣಿ ಕೋರ್ಟ್‌ ಎದುರುನಲ್ಲಿ ಗುಂಡು ಹಾರಿರುವ ಕುರಿತು ವರದಿಯಾಗಿದೆ. ಇಂದು ಬೆಳಿಗ್ಗೆ 9.40 ರ ಸುಮಾರಿಗೆ ಘಟನೆ ನಡೆದಿದ್ದು ಗೇಟ್‌ ನಲ್ಲಿ ನಿಯೊಜನೆಗೊಂಡ ಭದ್ರತಾ ಸಿಬ್ಬಂದಿಯ ಆಯುಧದಿಂದ ಗುಂಡು ಹಾರಿದೆ ಎಂದು ವರದಿಗಳು ಹೇಳಿವೆ.

ಗೇಟ್‌ ಎದುರಲ್ಲಿ ಇಬ್ಬರು ವಕೀಲರು ಹಾಗೂ ಇನ್ನೊಬ್ಬ ವ್ಯಕ್ತಿಯ ನಡುವೆ ವಾಗ್ವಾದ ನಡೆದಿದ್ದು ಗೇಟ್‌ ನಲ್ಲಿ ನಿಯೋಜನೆಗೊಂಡಿದ್ದ ನಾಗಾಲ್ಯಾಂಡ್‌ ಸಶಸ್ತ್ರ ಪಡೆಯ ಭದ್ರತಾ ಸಿಬ್ಬಂದಿಯೊಬ್ಬ ಮಧ್ಯಪ್ರವೇಶ ಮಾಡಿದ್ದಾನೆ. ಈ ಸಂದರ್ಭದಲ್ಲಿ ಗುಂಡಿನ ಸದ್ದು ಭೋರ್ಗರೆದಿದೆ.

ಘಟನೆಯನ್ನು ದೆಹಲಿ ಪೋಲೀಸರು ಗಂಭಿರವಾಗಿ ಪರಿಗಣಿಸಿದ್ದು ತನಿಖೆ ಕೈಗೊಂಡಿದ್ದಾರೆ. ಗುಂಡು ಹಾರಲು ಕಾರಣವೇನೆಂಬುದನ್ನು ಪತ್ತೆ ಹಚ್ಚಲಾಗುತ್ತಿದ್ದು ಆಕಸ್ಮಿಕವಾಗಿ ಗುಂಡು ಹಾರಿದೆಯೇ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು