ಬಿಹಾರ: ಸರನ್ ಜಿಲ್ಲೆಯ ಸರಯೂ ನದಿಯಲ್ಲಿ ಬೋಟ್ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಿಬ್ಬರು ಮಹಿಳೆಯರು ಎನ್ನಲಾಗಿದ್ದು, 9 ಮಂದಿ ಈಜಿ ಜೀವ ಉಳಿಸಿಕೊಂಡಿದ್ದಾರೆ.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಇನ್ನೂ ಹಲವು ಮಂದಿ ನದಿ ನೀರಿನಲ್ಲಿ ಮುಳುಗಿದ್ದಾರೆ. ಕಳೆದ ದಿನ ಸಂಜೆ 6.30ರ ಸುಮಾರಿಗೆ 18 ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬೋಟ್ ಮುಳುಗಿದೆ. ಮಾಂಝಿ ಬ್ಲಾಕ್ನ ಮತಿಯಾರ್ ಘಾಟ್ ಬಳಿ ದುರ್ಘಟನೆ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಅಮನ್ ಸಮೀರ್ ಮಾಹಿತಿ ನೀಡಿದ್ದಾರೆ.
ನಾಪತ್ತೆ ಆದವರ ರಕ್ಷಣೆಗೆ ಹುಡುಕಾಟ ನಡೆಯುತ್ತಿದೆ. ಇತ್ತೀಚೆಗೆ ನಡೆದ ಎರಡನೇ ಬೋಟ್ ದುರಂತ ಇದಾಗಿದೆ.