Categories: ದೇಶ

ಡಾಲಿ ಚಾಯ್‌ವಾಲಾ ಬಳಿ ‘ಒನ್ ಚಾಯ್ ಪ್ಲೀಸ್’ ಎಂದ ಬಿಲ್ ಗೇಟ್ಸ್: ನೆಟ್ಟಿಗರು ಫಿದಾ

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಈಗ ಭಾರತಕ್ಕೆ ಭೇಟಿ ನೀಡಿದ್ದಾರೆ ಮತ್ತು ಅವರ ವೈವಿಧ್ಯಮಯ ವಿಹಾರಗಳು ಅಂತರ್ಜಾಲದಲ್ಲಿ ವ್ಯಾಪಕ ಆಸಕ್ತಿ ಮತ್ತು ಚರ್ಚೆಯನ್ನು ಹುಟ್ಟುಹಾಕಿವೆ.

ಇತ್ತೀಚೆಗೆ ಗೇಟ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ದಾರಿ ಬದಿಯಲ್ಲಿ ಚಹಾ ಸವಿಯುವುದನ್ನು ಕಾಣಬಹುದು. ಈ ಬಗ್ಗೆ ಪೋಸ್ಟ್ ಜೊತೆ ಬರೆದುಕೊಂಡಿರುವ ಗೇಟ್ಸ್, ‘ಭಾರತದಲ್ಲಿ ನೀವು ಎಲ್ಲಿ ನೋಡಿದರಲ್ಲಿ ನಾವೀನ್ಯತೆಯನ್ನು ಕಾಣಬಹುದು. ಸರಳ ಚಹಾ ತಯಾರಿಕೆಯಲ್ಲಿ ಕೂಡಾ’ ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆದಿರುವ “ಡಾಲಿ ಚಾಯ್‌ವಾಲಾ” ಬಳಿ ಹೋಗಿ ‘ಒನ್ ಚಾಯ್ ಪ್ಲೀಸ್’ ಎಂದಿದ್ದಾರೆ ಬಿಲ್ ಗೇಟ್ಸ್. ನಂತರ ಚಾಯ್‌ವಾಲಾ ತನ್ನ ವಿಶಿಷ್ಟ ವಿಧಾನ ಬಳಸಿ ಚಹಾವನ್ನು ತಯಾರಿಸುತ್ತಾನೆ. ಬಳಿಕ ಗೇಟ್ಸ್ ಒಂದು ಕಪ್ ಚಾಯ್ ಅನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ವೀಡಿಯೊದ ಕೊನೆಯಲ್ಲಿ ಡಾಲಿ ಚಾಯ್‌ವಾಲಾ ಅವರೊಂದಿಗೆ ಫೋಟೋಗೆ ಪೋಸ್ ನೀಡಿ, ತಾವು ಬಹಳಷ್ಟು ಚಾಯ್ ಪೇ ಚರ್ಚಾಕ್ಕಾಗಿ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು ನೆಟ್ಟಿಗರು ಕೂಡ ಗೇಟ್ಸ್‌ನ ಸರಳತೆಗೆ ಫಿದಾ ಆಗಿದ್ದಾರೆ. ಸ್ಥಳೀಯ ಸಂಸ್ಕೃತಿಯನ್ನು ಅರಿಯುವ, ಅದರೊಂದಿಗೆ ಬೆರೆಯುವ ಗೇಟ್ಸ್ ಗುಣ ಬಹಳ ವಿಶೇಷವಾದದ್ದು ಎನ್ನುತ್ತಿದ್ದಾರೆ ನೆಟ್ಟಿಗರು.

ಸ್ವಿಗ್ಗಿ ಪ್ರತಿಕ್ರಿಯಿಸಿ, ‘ಬಿಲ್ ಎಷ್ಟು’ ಎಂದು ಕೇಳಿದ್ದರೆ, ನೆಟ್ಟಿಗರೊಬ್ಬರು, ‘ಡಾಲಿ ಚಾಯ್‌ವಾಲಾನೇ ಅದೃಷ್ಟವಂತ. ಆತನ ಅದೃಷ್ಟ ಇನ್ನು ಬದಲಾದಂತೆಯೇ’ ಎಂದಿದ್ದಾರೆ.

Ashitha S

Recent Posts

ʻಮೋದಿಗೆ ಯಾರೂ ವೋಟ್ ಹಾಕಬೇಡಿ’ ಎಂದಿದ್ದ ಶಿಕ್ಷಕ ಅರೆಸ್ಟ್‌

ಯಾರು ಮೋದಿಗೆ ವೋಟ್​ ಹಾಕಬೇಡಿ ಎಂದು ಶಾಲಾ ಮಕ್ಕಳಿಗೆ ಹೇಳಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ…

7 mins ago

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ : ತೆಲುಗು ನಟಿ, ಮಾಡೆಲ್​ ಸಿಸಿಬಿ ವಶಕ್ಕೆ

ಸಿಸಿಬಿ ಪೊಲೀಸರು ರಾಜಧಾನಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಂಧ್ರಪ್ರದೇಶದಿಂದ ತೆಲುಗು ನಟಿಯರನ್ನು ಕರೆಸಿಕೊಂಡು…

20 mins ago

ಜೂನಿಯರ್ ಎನ್​ಟಿಆರ್ ಜನ್ಮದಿನ : ಸ್ಟಾರ್ ಹೀರೋಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ

ಜೂನಿಯರ್ ಎನ್​ಟಿಆರ್ ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ.ಈ ವಿಶೇಷ ದಿನದಂದು ಸೆಲೆಬ್ರಿಟಿಗಳು, ಕುಟುಂಬದವರು, ಅಭಿಮಾನಿಗಳು ನಟನಿಗೆ ಶುಭಾಶಯ ಬರುತ್ತಿದೆ. ಜೂನಿಯರ್…

37 mins ago

ಮಲ್ಲಮ್ಮ ಜಯಂತಿಗೆ ಅಗೌರವ : ರೆಡ್ಡಿ ಸಮಾಜ ಪದಾಧಿಕಾರಿಗಳ ಪ್ರತಿಭಟನೆ

ಚಿಟಗುಪ್ಪ'ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಗೌರವ…

1 hour ago

ಮಳೆಯಿಂದ​ ಪಂದ್ಯ ರದ್ದು : ರಾಯಲ್ಸ್​ ವಿರುದ್ಧ ರಾಜಸ್ಥಾನ್​ ಕಣಕ್ಕೆ

17ನೇ ಆವೃತ್ತಿಯ ಐಪಿಎಲ್​ನ ಕೊನೆಯ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ತಂಡಗಳು ಈ…

1 hour ago

ನಿಮ್ಮ ಡಲ್‌ಸ್ಕಿನ್‌ಗೆ ಇದು ಬೆಸ್ಟ್‌ ಪಾನೀಯ : ಎರಡು ವಾರದಲ್ಲೆ ಉತ್ತಮ ರಿಸಲ್ಟ್‌

ಬೇಸಿಗೆಯಲ್ಲಿ ಬಿಸಿಲಿನ ತಾಪ, ಕಲುಷಿತ ನೀರು, ಮಾಲಿನಗೊಂಡ ವಾತಾವರಣದಿಂದಾಗಿ ಸಾಕಷ್ಟು ಜನರು ಚರ್ಮದ ಸಮಸ್ಯೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಡಲ್‌ಸ್ಕಿನ್‌ ಇರುವವರೂ…

2 hours ago