ಪಾಟ್ನಾ: ಪಾಟ್ನಾ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ಗಳಲ್ಲಿ ಅಳವಡಿಸಲಾದ ಟಿವಿ ಪರದೆಗಳಲ್ಲಿ ಮೂರು ನಿಮಿಷಗಳ ಕಾಲ ಪೋರ್ನ್ ಕ್ಲಿಪ್ ಪ್ಲೇ ಆದ ಕಾರಣ ರೈಲು ಹತ್ತಲು ಕಾಯುತ್ತಿದ್ದ ಪ್ರಯಾಣಿಕರು ಮುಜುಗರ ಪಡುವಂತಹ ಘಟನೆ ನಿರ್ಮಾಣವಾದ ಘಟನೆ ಬೆಳಕಿಗೆ ಬಂದಿದೆ.
ಡಣಾಪುರ ವಿಭಾಗದ ರೈಲು ನಿಲ್ದಾಣಗಳಲ್ಲಿ ವೀಡಿಯೊ ಮತ್ತು ಚಲನಚಿತ್ರಗಳನ್ನು ಪ್ರಸಾರ ಮಾಡುವ ಗುತ್ತಿಗೆಯನ್ನು ಖಾಸಗಿ ಕಂಪನಿಗೆ ನೀಡಲಾಗಿತ್ತು. ಘಟನೆ ಬಳಿಕ ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಅಧಿಕಾರಿಗಳು ಕ್ಲಿಪ್ ಪ್ರಸಾರವನ್ನು ನಿಲ್ಲಿಸಿದರು.
ಘಟನೆಯನ್ನು ದೃಢಪಡಿಸಿದ ಡಣಾಪುರದ ಡಿಆರ್ಎಂ ಕಚೇರಿಯ ಅಧಿಕೃತ ವಕ್ತಾರ ಪ್ರಭಾತ್ ಕುಮಾರ್, “ನಾವು ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಒಪ್ಪಂದವನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ, ನಾವು ಕಂಪನಿಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ಇದು ಅಸಹನೀಯ ಘಟನೆ. ನಾವು ಈ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ ಎಂದು ತಿಳಿಸಿದ್ದಾರೆ.