ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಸಜೀವ ದಹನಗೊಂಡಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೋಡಸಾಹನ್ ಶಾಖೆಯ ಬಳಿ ಇರುವ ಸುಬೋಧ್ ಪಂಡಿತ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು ಮನೆಯೊಳಗೆ ಹತ್ತಿಯ ದೊಡ್ಡ ದಾಸ್ತಾನಿಗೆ ಹರಡಿದೆ. ನಂತರ ಬೆಂಕಿಯ ಜ್ವಾಲೆಯು ಶೀಘ್ರದಲ್ಲೇ ಇಡೀ ಮನೆಯನ್ನು ಆವರಿಸಿದೆ. ನೆರೆಹೊರೆಯವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಕೂಡ ಸಾಧ್ಯವಾಗಿಲ್ಲ. ಬಳಿಕ ಅಗ್ನಿಶಾಮಕ ಸಿಬ್ಬಂದಿ 2 ಗಂಟೆಗಳ ಕಾಲ ಶ್ರಮಿಸಿ ಅಗ್ನಿನಿಯಂತ್ರಣ ಮಾಡಿದ್ದಾರೆ.
ಮೃತರನ್ನು ರೌಶನ್ ಪಂಡಿತ್ (25), ಅವರ ಪತ್ನಿ ಸವಿತಾ ದೇವಿ (22) ಎಂದು ಗುರುತಿಸಲಾಗಿದ್ದು, ಮೂರನೇ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗುತ್ತಿದೆ. ಗಾಯಗೊಂಡವರನ್ನು ರೌಶನ್ ಪಂಡಿತ್ ಮತ್ತು ಶಾಲು ಕುಮಾರಿ ಅವರ ತಂದೆ ಸುಬೋಧ್ ಪಂಡಿತ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮೋತಿಹಾರಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.