News Karnataka Kannada
Thursday, May 02 2024
ಬಿಹಾರ

ಪಾಟ್ನಾ: ಎಟಿಎಂ ಕ್ಯಾಶ್ ವ್ಯಾನ್ ಚಾಲಕ 1.5 ಕೋಟಿ ರೂ.ಗಳೊಂದಿಗೆ ನಾಪತ್ತೆ

Driver of ATM cash van missing with Rs 1.5 cr in Patna
Photo Credit : News Kannada

ಪಾಟ್ನಾ:  ಪಾಟ್ನಾ ನಗರದಲ್ಲಿ ಎಟಿಎಂಗಳಿಗೆ ಪೂರೈಕೆ ಮಾಡಲು 1.5 ಕೋಟಿ ರೂಪಾಯಿಗಳನ್ನು ಸಾಗಿಸುತ್ತಿದ್ದ ವ್ಯಾನ್‌ನ ಚಾಲಕ ಹಣದೊಂದಿಗೆ ನಾಪತ್ತೆಯಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ದಂಕಾ ಇಮ್ಲಿ ಚೌಕ್‌ನಲ್ಲಿ ಈ ಘಟನೆ ನಡೆದಿದೆ. ಜಿಲ್ಲಾ ಪೊಲೀಸರು ಎನ್‌ಎಂಸಿಎಚ್ ರಸ್ತೆಯಲ್ಲಿ ಜಿಪಿಎಸ್ ಮೂಲಕ ವ್ಯಾನ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಚಾಲಕ ಸೂರಜ್ ಕುಮಾರ್ ನಾಪತ್ತೆಯಾಗಿದ್ದು, 1.5 ಕೋಟಿ ರೂಪಾಯಿಗಳ ನಗದು ಬಾಕ್ಸ್ ಕಾಣೆಯಾಗಿದೆ.

ಕಸ್ಟೋಡಿಯನ್ ಅಮರೇಶ್ ಕುಮಾರ್ ಸಿಂಗ್, ಕ್ಯಾಷಿಯರ್ ಸೋನು ಕುಮಾರ್ ಮತ್ತು ದಿಲೀಪ್ ಕುಮಾರ್, ಗನ್ ಮ್ಯಾನ್ ಸುಭಾಷ್ ಯಾದವ್ ಮತ್ತು ಚಾಲಕ ಸೂರಜ್ ಕುಮಾರ್ ದಂಕಾ ಇಮ್ಲಿ ಚೌಕ್ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ಹಾಕಲು ತೆರಳಿದ್ದು, ಈ ಪ್ರದೇಶದಲ್ಲಿ ಪಾರ್ಕಿಂಗ್ ಸಮಸ್ಯೆ ಕಾರಣ ಚಾಲಕ ಸೂರಜ್ ಕುಮಾರ್ ಬ್ಯಾಂಕಿನಿಂದ ಸ್ವಲ್ಪ ದೂರದಲ್ಲಿ ವ್ಯಾನ್ ನಿಲ್ಲಿಸಿದ್ದರು.

ಕಸ್ಟೋಡಿಯನ್ ಅಮರೇಶ್ ಕುಮಾರ್ ಸಿಂಗ್ ಮತ್ತು ಇತರರು ಸೇರಿದಂತೆ ಇತರರು ತಾವು ಬ್ಯಾಂಕ್‌ಗೆ ಹಣ ನೀಡಿ ಬರುತ್ತೇವೆ ಎಂದು ಹೋಗಿದ್ದು, ಮರಳಿ ಬರುವಾಗ ಚಾಲಕನ ಸಹಿತ ವ್ಯಾನ್‌ ನಾಪತ್ತೆಯಾಗಿತ್ತು. ತಕ್ಷಣ ಹಣ ಸಾಗಾಟ ನಡೆಸುವ ಎಜಿಎಸ್‌ ಸೆಕ್ಯುರಿಟಿ ಸರ್ವಿಸ್ ಏಜೆನ್ಸಿಗೆ ಮಾಹಿತಿ ನೀಡಿದ್ದು, ಜಿಪಿಎಸ್‌ ಮೂಲಕ ಟ್ರ್ಯಾಕ್‌ ಮಾಡಿದಾಗ ಎನ್‌ಎಂಸಿಎಚ್ ರಸ್ತೆಯಲ್ಲಿ ವ್ಯಾನ್‌ ಪತ್ತೆಯಾಗಿತ್ತು. ಆದರೆ ನಗದು ಮತ್ತು ಚಾಲಕ ಪತ್ತೆಯಾಗಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು