News Karnataka Kannada
Thursday, May 02 2024
ಬಿಹಾರ

ಹೋಟೆಲ್‌ ನಲ್ಲಿ ಹೈ ಪ್ರೊಫೈಲ್‌ ಸೆಕ್ಸ್‌ ದಂಧೆ ; 15 ಜನರ ಬಂಧನ

Police
Photo Credit :

 

ಪಾಟ್ನಾ: ಹೋಟೆಲ್ ಒಂದರ ಮೇಲೆ ದಾಳಿ ನಡೆಸಿದ ಪೋಲೀಸರು ಒಟ್ಟು 15 ಜನರನ್ನು ಬಂಧಿಸಿ ವೇಶ್ಯಾವಾಟಿಕೆ ನಿರ್ಬಂಧ ಕಾಯ್ದೆಯಡಿ ಮೊಕದ್ದೆ ದಾಖಲಿಸಿಕೊಂಡಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿಯ ಗರ್ದನಾಬಾಗಿ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇದೊಂದು ಹೈ ಪ್ರೊಫೈಲ್ ದಂಧೆಯಾಗಿದ್ದು, ಇದರಲ್ಲಿ ಪ್ರಭಾವಿಗಳೂ ಶಾಮೀಲಾಗಿದ್ದಾರೆ ಎನ್ನಲಾಗಿದೆ.
ಹೋಟೆಲ್ ನಲ್ಲಿ ಸಿಕ್ಕಿರುವ ಮಹಿಳೆಯರು ಕೋಲ್ಕತ್ತಾ ಮತ್ತು ಬನಾರಸ ಮೂಲದವರು ಎಂದು ತಿಳಿದು ಬಂದಿದೆ. ಎಸ್.ಪಿ. ಅಂಬರೀಶ್ ರಾಹುಲ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಆದ್ರೆ ಸ್ಥಳೀಯ ಪೊಲೀಸರಿಗೆ ದಾಳಿಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ದಾಳಿ ವೇಳೆ ಪೊಲೀಸರು ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಲ್ಲಿ ಬರುತ್ತಿದ್ದ ಮಹಿಳೆಯರು ವಿವಾಹಿತರಾಗಿದ್ದು, ಈ ವಿಷಯ ಅವರ ಕುಟುಂಬಸ್ಥರಿಗೂ ತಿಳಿದಿದೆ. ಎಲ್ಲ ವ್ಯವಹಾರಗಳು ವಾಟ್ಸಪ್ ಮೂಲಕವೇ ನಡೆಯುತ್ತಿತ್ತು. ಗ್ರಾಹಕರಿಗೆ ವಾಟ್ಸಪ್ ನಲ್ಲಿಯೇ ಫೋಟೋ ತೋರಿಸಿ ಬೆಲೆ ನಿಗದಿ ಮಾಡಿ ಹೋಟೆಲ್ ಗೆ ಕರೆ ತರಲಾಗುತ್ತಿತ್ತು. ಆರು ಸಾವಿರದಿಂದ 18 ಸಾವಿರ ರೂ.ವರೆಗೆ ಬೆಲೆ ಫಿಕ್ಸ್ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಹೋಟೆಲ್ ಮಾಲೀಕ ಪಂಕಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ನಡೆಸುವದಾಗಿ ಹೇಳಿ ಪಂಕಜ್ ಕಟ್ಟಡವನ್ನು ಲೀಸ್ ಪಡೆದುಕೊಂಡು ಸೆಕ್ಸ್ ದಂಧೆ ನಡೆಸುತ್ತಿದ್ದನು. ಈ ದಂಧೆಗೆ ಬರುತ್ತಿದ್ದ ಮಹಿಳೆಯರಿಗೆ ಓರ್ವ ಗ್ರಾಹಕನಿಂದ ಬಂದ ಹಣದಿಂದ ಶೇ.30ರಷ್ಟು ನೀಡಲಾಗುತ್ತಿತ್ತು ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು