ಬಿಹಾರ

ಬಿಹಾರ: ಟೀ ಕುಡಿಯುವಾಗ ಗಾಜಿನ ಲೋಟವನ್ನು ನುಂಗಿದ ವ್ಯಕ್ತಿ

ಮುಜಾಫರ್‌ಪುರ (ಬಿಹಾರ) : ಹೊಟ್ಟೆ ನೋವು ಮತ್ತು ಮಲಬದ್ಧತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯ ಸ್ಕ್ಯಾನಿಂಗ್‌ ಮಾಡಿದಾಗ ವೈದ್ಯರೇ ಶಾಕ್‌ ಆಗಿರುವ ಘಟನೆ ಬಿಹಾರದ ಪುಜಾಫರ್‌ಪುರದ ಮಾದಿಪುರ ಪ್ರದೇಶದಲ್ಲಿ ನಡೆದಿದೆ. ಇದಕ್ಕೆ ಕಾರಣ ಹೊಟ್ಟೆಯಲ್ಲಿ ಅವರಿಗೆ ಗಾಜಿನ ಟಂಬ್ಲರ್‌ ಕಂಡಿದೆ!

ಪಕ್ಕದ ವೈಶಾಲಿ ಜಿಲ್ಲೆಯ ಮಹುವಾದ 55 ವರ್ಷದ ವ್ಯಕ್ತಿ ಹೊಟ್ಟೆನೋವು ಮತ್ತು ಮಲಬದ್ಧತೆಯೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ ಮಾಡಿದಾಗ ಕರುಳಿನಲ್ಲಿ ಒಂದು ವಸ್ತು ಕಂಡಿತು. ಆಮೇಲೆ ನೋಡಿದಾಗ ಅದು ಗಾಜಿನ ಟಂಬ್ಲರ್‌ ಎಂದು ತಿಳಿದು ಖುದ್ದು ವೈದ್ಯರೇ ಅಚ್ಚರಿ ಪಟ್ಟಿದ್ದಾರೆ.

ಡಾ. ಮಖ್ದುಲುಲ್ ಹಕ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಗಾಜಿನ ಟಂಬ್ಲರ್‌ ತೆಗೆಯಲಾಗಿದೆ. ಆದರೆ ಅದು ಹೊಟ್ಟೆಯೊಳಕ್ಕೆ ಹೋದದ್ದು ಹೇಗೆ ಎಂಬುದು ಮಾತ್ರ ನಿಗೂಢವಾಗಿದೆ. ಆ ವ್ಯಕ್ತಿಯನ್ನು ಕೇಳಿದಾಗ ಆತ ತಾನು ಟೀ ಕುಡಿಯುವಾಗ ಅದರ ಜತೆ ಗಾಜಿನ ಟಂಬ್ಲರ್‌ ಕೂಡ ನುಂಗಿದೆ ಎಂದಿದ್ದಾನೆ. ಆದರೆ ಇದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ ವೈದ್ಯರು. ಇದನ್ನು ಸುಲಭದಲ್ಲಿ ಒಪ್ಪಿಕೊಳ್ಳುವುದು ಕಷ್ಟ. ಯಾವ ವ್ಯಕ್ತಿ ಈ ರೀತಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿರುವ ವೈದ್ಯರು ಇದು ಹೇಗೆ ದೇಹ ಹೊಕ್ಕಿತು ಎಂಬ ಬಗ್ಗೆ ಇನ್ನೂ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ವೈದ್ಯರ ಪ್ರಕಾರ, ಗಾಜಿನ ಟಂಬ್ಲರ್ ಈ ಭಾಗದಲ್ಲಿ ಸೇರಿಕೊಳ್ಳಲು ಇರುವ ಒಂದೇ ಒಂದು ಸಾಧ್ಯತೆ ಎಂದರೆ ಅದು ಗುದದ್ವಾರ. ಮನುಷ್ಯನ ದೇಹ ರಚನೆಯ ಪ್ರಕಾರ ಈ ಜಾಗ ಬಿಟ್ಟು, ಬೇರೆ ಯಾವ ಭಾಗದಿಂದಲೂ ಹೊಟ್ಟೆಯ ಆ ಕರುಳಿನಲ್ಲಿ ಸೇರಿಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಬಗ್ಗೆ ನಾವು ರೋಗಿಯಲ್ಲಿ ಇನ್ನಷ್ಟು ಕೇಳಿ ಅದನ್ನು ಬಹಿರಂಗಪಿಡಿದರೆ ಆತನ ಖಾಸಗೀತನಕ್ಕೆ ಧಕ್ಕೆ ಮಾಡಿದಂತೆ. ವೈದ್ಯರಾಗಿ ನಾವು ಅವರ ಗೋಪ್ಯತೆ ಕಾಪಾಡಬೇಕಾಗುತ್ತದೆ ಎಂದಿದ್ದಾರೆ ವೈದ್ಯರು.

ಆರಂಭದಲ್ಲಿ ಎಂಡೋಸ್ಕೋಪಿಕ್ ವಿಧಾನದ ಮೂಲಕ ಗುದನಾಳದಿಂದ ಗಾಜನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಹೊಟ್ಟೆ ಕುಯ್ದು ಕರುಳಿನ ಭಾಗವನ್ನು ಛೇದಿಸಿ ಟಂಬ್ಲರ್ ಹೊರತೆಗೆಯಲಾಗಿದೆ. ರೋಗಿಯು ಸದ್ಯ ಆರೋಗ್ಯವಾಗಿದ್ದಾನೆ.

ಶಸ್ತ್ರಚಿಕಿತ್ಸೆಯ ನಂತರ ಕೊಲೊನ್ ಅನ್ನು ಹೊಲಿಯಲಾಗುತ್ತದೆ. ರೋಗಿ ಚೇತರಿಸಿಕೊಳ್ಳಲು ತುಂಬಾ ಸಮಯ ಹಿಡಿಯಬಹುದು ಎಂದಿದ್ದಾರೆ ಡಾ. ಹಕ್.

Gayathri SG

Recent Posts

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ: ಆರೋಪಿ ಬಿಭವ್‌ ಕುಮಾರ್‌ ವಶಕ್ಕೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ…

22 mins ago

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಮೇಲೆ ಪ್ರಕರಣ ದಾಖಲು

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ…

31 mins ago

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ…

43 mins ago

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

1 hour ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

1 hour ago

ಮತ್ತೆ ವಿವಾದಕ್ಕೆ ಸಿಲುಕಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಒಂದು ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಹಿರಿಯ ಬಿಜೆಪಿ ಮುಖಂಡರ ಬಳಿ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದು, ಶಾಸಕ…

1 hour ago