News Karnataka Kannada
Monday, April 29 2024
ಬಿಹಾರ

ಪಾಟ್ನಾ: ವಿಚ್ಛೇದಿತ ಪತ್ನಿ, ಪುತ್ರಿಗೆ ಗುಂಡಿಕ್ಕಿ ವ್ಯಕ್ತಿ ತಾನೂ ಆತ್ಮಹತ್ಯೆಗೆ ಶರಣು

17-year-old girl found murdered in field
Photo Credit :

ಪಾಟ್ನಾ : ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿ ಮತ್ತು ಮಗಳಿಗೆ ಕೊಂಡಿಟ್ಟು ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಟ್ನಾ ಗಾರ್ಡನಿಬಾಗ್ ಪ್ರದೇಶದಲ್ಲಿ ನಿನ್ನೆ ನಡೆದಿದೆ. ಘಟನೆಯ ಭಯಾನಕ ದೃಶ್ಯಾವಳಿ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೊಲೀಸರ ಪ್ರಕಾರ, ನಿನ್ನೆ ಮಧ್ಯಾಹ್ನ 12.40 ರ ಸುಮಾರಿಗೆ ಈ ಘಟನೆ ನಡೆದಿದೆ. ವ್ಯಕ್ತಿಯನ್ನು ರಾಜೀವ್ ಕುಮಾರ್ ಎಂದು ಗುರುತಿಸಲಾಗಿದ್ದು, ಅವರು ನಿರುದ್ಯೋಗಿಯಾಗಿದ್ದರು ಎನ್ನಲಾಗಿದೆ.

ರಾಜೀವ್ ಅವರ ಮೊದಲ ಪತ್ನಿ ಕೆಲವು ವರ್ಷಗಳ ಹಿಂದೆ ಸಹಜ ಕಾರಣಗಳಿಂದ ನಿಧನರಾದರು. ಇವರಿಗೆ ಒಂದು ಹೆಣ್ಣು ಮಗುವೂ ಇತ್ತು. ನಂತರ ರಾಜೀವ್‌ ಪತ್ನಿಯ ಸಹೋದರಿ ಪ್ರಿಯಾಂಕಾ ಅವರನ್ನು ವಿವಾಹವಾದರು. ಕೆಲವೊಂದು ದಿನಗಳಿಂದ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ನಂತರ ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಪಡೆದಿದ್ದರು.

ಇದಾದ ನಂತರ, ಪ್ರಿಯಾಂಕಾ ಏರ್ ಫೋರ್ಸ್‌ ಅಧಿಕಾರಿ ಸತೀಶ್ ಎಂಬುವರ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದರು. ಮೊದಲ ಹೆಂಡತಿಗೆ ಹುಟ್ಟಿದ ಹೆಣ್ಣು ಮಗುವನ್ನು ಪ್ರಿಯಾಂಕಾಳೇ ಆರೈಕೆ ಮಾಡುತ್ತಿದ್ದಳು. ಈ ವಿಷಯ ರಾಜೀವ್​ ಕೋಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ನಿನ್ನೆ ಪ್ರಿಯಾಂಕಾ ಹಾಗೂ ಮಗಳು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅವರನ್ನು ಅಡ್ಡಗಟ್ಟಿ ರಾಜೀವ್​ ಅವರಿಬ್ಬರಿಗೂ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಇದರ ಬೆನ್ನಲ್ಲೇ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು