Categories: ಬಿಹಾರ

ಒಟ್ಟಿಗೆ ಬಾಳಲು ಬಿಡುತ್ತಿಲ್ಲ : ಎಸ್ಪಿ ಮುಂದೆ ಕಣ್ಣೀರಿಟ್ಟ ಯುವತಿಯರು

 ಬಿಹಾರ : ಯುವತಿಯರಿಬ್ಬರು ತಮ್ಮ ಕುಟುಂಬಗಳಿಂದ ಬೆದರಿಕೆ ಇದೆ ಎಂದು ಪಟನಾ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ(ಎಸ್‌ಎಸ್​ಪಿ)ಯ ಬಳಿ ರಕ್ಷಣೆ ಕೋರಿದ್ದಾರೆ. ನಾವಿಬ್ಬರು ಮದುವೆಯಾಗಿ ಒಟ್ಟಿಗೆ ಬಾಳಲು ಎರಡು ಕುಟುಂಬದವರು ಒಪ್ಪುತ್ತಿಲ್ಲ.

ಹೀಗಾಗಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಲಿಂಗಿ ಜೋಡಿಗಳು ಎಸ್‌ಎಸ್​ಪಿ ಬಳಿ ದೂರು ನೀಡಿದ್ದಾರೆ.

2018ರ ಸೆಪ್ಟೆಂಬರ್​ 6ರಂದು ದೇಶದ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್​ ಎಲ್​ಜಿಬಿಟಿಕ್ಯೂ ಹಕ್ಕನ್ನು ಎತ್ತಿಹಿಡಿದೆ. ಆದರೆ, ಸಮಾಜ ಮಾತ್ರ ಇದನ್ನು ಈಗಲೂ ಒಪ್ಪಿಕೊಳ್ಳಲು ತಯಾರಿಲ್ಲ. ಇದೀಗ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಇಬ್ಬರು ಯುವತಿಯರು ಅಸಹಾಯಕರಾಗಿದ್ದು, ತಮಗೆ ರಕ್ಷಣೆ ಕೋರಿ ಪಟನಾ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಮಾನವಜಿತ್ ಸಿಂಗ್ ಧಿಲ್ಲೋನ್​ ಅವರಿಗೆ ಮನವಿ ಮಾಡಿದ್ದಾರೆ. ಪಟನಾದಲ್ಲಿರುವ ಮಹಿಳಾ ಪೊಲೀಸ್​ ಠಾಣೆಯು ಗುರುವಾರ ರಾತ್ರಿ ಯುವತಿಯರ ದೂರನ್ನು ತಿರಸ್ಕರಿಸಿದ ಬಳಿಕ ಇಬ್ಬರು ಎಸ್​ಎಸ್​ಪಿ ಮನೆಗೆ ತೆರಳಿ ಮನವಿ ಮಾಡಿದ್ದಾರೆ.

ಇಂದ್ರಪುರಿ ನಿವಾಸಿ ತನಿಷ್ಕ್ ಶ್ರೀ ಮತ್ತು ಪಟನಾದ ಸಹರ್ಸಾ ನಿವಾಸಿ ಶ್ರೇಯಾ ಘೋಷ್ ಒಟ್ಟಿಗೆ ಬಾಳಲು ಬಯಸಿದ್ದಾರೆ. ಆದರೆ ಅವರ ಕುಟುಂಬದ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತನಿಷ್ಕ್ ಶ್ರೀ ಮನೆಯಲ್ಲಿ ಆಕೆಯ ಮೊಬೈಲ್​ ಫೋನ್ ಅನ್ನು​ ಕಿತ್ತುಕೊಂಡು ಹೊರಗಡೆ ಹೋಗದಂತೆ ಗೃಹಬಂಧನದಲ್ಲಿ ಇರಿಸಲಾಗಿತ್ತು. ಸಿನಿಮಾ ನೋಡುವ ನೆಪದಲ್ಲಿ ಇಬ್ಬರೂ ಮತ್ತೆ ಭೇಟಿಯಾದರು.

ಇದಾದ ಬಳಿಕ ಶ್ರೀ ಅವರ ಕುಟುಂಬ ಸದಸ್ಯರು ಪಾಟಲಿಪುತ್ರ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸುವ ಮೂಲಕ ಘೋಷ್ ಅವರ ಕುಟುಂಬ ಸದಸ್ಯರು ತನಿಷ್ಕ್ ಶ್ರೀ ಅವರನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿದರು. ಇದರ ನಂತರ ಇಬ್ಬರೂ ಹುಡುಗಿಯರು ಪಟನಾ ಮಹಿಳಾ ಪೊಲೀಸ್ ಠಾಣೆಗೆ ತಲುಪಿ ತಮಗೆ ಜೀವ ಬೆದರಿಕೆ ಇದೆ ಎಂದು ರಕ್ಷಣೆ ಕೋರಿದರು. ನಾವಿಬ್ಬರು ಐದು ವರ್ಷಗಳಿಂದ ಪರಸ್ಪರ ಸ್ನೇಹಿತರಾಗಿದ್ದು, ಇಬ್ಬರೂ ಒಟ್ಟಿಗೆ ಇರಲು ಬಯಸುತ್ತಿದ್ದೇವೆ. ಆದರೆ ನಮ್ಮ ಕುಟುಂಬಗಳು ಒಟ್ಟಿಗೆ ಇರಲು ಅವಕಾಶ ನೀಡುತ್ತಿಲ್ಲ ಎಂದು ಕೇಳಿಕೊಂಡ ಯುವತಿಯರು, ಭಾರತದಲ್ಲಿನ ಸಲಿಂಗಕಾಮ ಕಾನೂನನ್ನು ಉಲ್ಲೇಖಿಸಿ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.

ತಮ್ಮ ಸಂಬಂಧದ ಬಗ್ಗೆ ಮಾತನಾಡಿರುವ ತನಿಷ್ಕ್ ಶ್ರೀ, ನಮ್ಮನ್ನು ನನ್ನ ಕುಟುಂಬ ಸದಸ್ಯರು ಪಿತೂರಿಯಡಿಯಲ್ಲಿ ಸಿಲುಕಿಸುತ್ತಿದ್ದಾರೆ. ನಾವು ವಯಸ್ಕರಾಗಿದ್ದು, ಒಟ್ಟಿಗೆ ವಾಸಿಸುವ ಹಕ್ಕು ಹೊಂದಿದ್ದೇವೆ. ಸರ್ಕಾರವೂ ಕೂಡ ನಮಗೆ ವಿನಾಯಿತಿ ನೀಡಿದೆ. ಆದರೆ, ನನ್ನ ಕುಟುಂಬ ಸದಸ್ಯರು ನನ್ನ ಗೆಳತಿಯ ಮೇಲೆ ಕಿಡ್ನಾಪ್​ ಆರೋಪ ಮಾಡಿದ್ದಾರೆ. ನನ್ನ ಸ್ನೇಹಿತೆ ಶ್ರೇಯಾ ಘೋಷ್‌ ಯಾವುದೇ ತಪ್ಪು ಮಾಡಿಲ್ಲ. ಯಾರೂ ನನ್ನನ್ನು ಬಲವಂತ ಮಾಡಿಲ್ಲ, ನನ್ನ ಸ್ವಂತ ಇಚ್ಛೆಯಂತೆ ಶ್ರೇಯಾ ಜೊತೆ ಇರಲು ಬಯಸುತ್ತೇನೆ ಎಂದಿದ್ದಾಳೆ.

ತನ್ನ ಸಂಗಾತಿಯ ಮಾತಿಗೆ ಧ್ವನಿಗೂಡಿಸಿದ ಶ್ರೇಯಾ ಘೋಷ್, ನಾನು ನನ್ನ ಸ್ನೇಹಿತೆ ತನಿಷ್ಕ್ ಶ್ರೀ ಜತೆ ಇರಲು ಬಯಸುತ್ತೇನೆ. ನಾವಿಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದೇವೆ. ಇದು ನನ್ನ ಗೆಳತಿಯ ಕುಟುಂಬಕ್ಕೆ ಇಷ್ಟವಿಲ್ಲ. ಹೀಗಾಗಿ ಕಿಡ್ನಾಪ್​ ಪ್ರಕರಣ ದಾಖಲಿಸಿದ್ದಾರೆ. ನಾನು ಒಟ್ಟಿಗೆ ಬದುಕಲು ಬಯಸುತ್ತೇನೆ. ಹೀಗಾಗಿ ನಮ್ಮ ಜೀವವನ್ನು ಉಳಿಸಲು ಪೊಲೀಸರಿಂದ ರಕ್ಷಣೆ ಪಡೆಯಲು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾಳೆ.

ಇಬ್ಬರ ಮನವಿಯನ್ನು ಪುರಸ್ಕರಿಸಿದ ಪಟನಾ ಎಸ್‌ಎಸ್‌ಪಿ ಮಾನವಜಿತ್ ಸಿಂಗ್ ಧಿಲ್ಲೋನ್, ಯುವತಿಯರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಗಸ್ತು ಪೊಲೀಸರಿಗೆ ಸೂಚಿಸಿದರು, ಈ ವಿಷಯದ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು.

Ashika S

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

3 hours ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

3 hours ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

4 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

4 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

4 hours ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

4 hours ago